ಕುಡಿತದ ನಶೆಯಲ್ಲಿ ಮನೆಯ ಷೋಕೇಸ್ ಗಾಜು ಕೈಯಲ್ಲೇ ಒಡೆದ ಪರಿಣಾಮ ವಿವಾಹಿತನೋರ್ವ ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿರುವ ಘಟನೆ ಮಾಡೂರು ಸೈಟ್‌ನಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಮಾಡೂರ್ ಸೈಟ್ ನಿವಾಸಿ ಸತೀಶ್ ನಾಯಕ್ ಎಂಬವರ ಪುತ್ರ 38 ವರ್ಷದ ನಿತೇಶ್ ನಾಯಕ್ ಸಾವನ್ನಪ್ಪಿದ್ದಾನೆ.
ಕೋಟೆಕಾರು ಬೀರಿ ಜಂಕ್ಷನ್ ಸಮೀಪವೇ ತಂದೆ ಹಾಗೂ ಸಹೋದರನ ಜೊತೆಗೆ ಗಲಾಟೆ ನಡೆಸುತ್ತಾ ಬಂದಿದ್ದ ನಿತೇಶ್, ಮನೆಯಲ್ಲಿಯೂ ಸಹ ನಿತ್ಯದಂತೆ ಗಲಾಟೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ. ಈ ವೇಳೆ ಆಕ್ರೋಶದಿಂದ ಮನೆಯೊಳಗಿರುವ ಷೋಕೇಸ್ ಗಾಜನ್ನು ಒಡೆದಿದ್ದರಿಂದಾಗಿ, ಷೋಕೇಸ್ ಗಾಜು ಒಡೆದು ಕೈಯಲ್ಲಿರುವ ಪ್ರಮುಖ ನರಕ್ಕೆ ತಗಲಿ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾರೆ.
ನಿತೇಶ್, ಸಹೋದರ ಇಬ್ಬರೂ ತಿಂಡಿ ಲೈನ್ ಸೇಲ್ ನಡೆಸುತ್ತಿದ್ರು. ನಿನ್ನೆಯೂ ಕರ್ತವ್ಯ ಮುಗಿಸಿ ಮನೆಗೆ ವಾಪಾಸ್ಸಾದ ಬಳಿಕ ಗಲಾಟೆ ಮಾಡಿಕೊಂಡಿದ್ದಾರೆ. ವಿವಾಹಿತರಾಗಿದ್ದ ಅವರು ಪತ್ನಿ ಜೊತೆಗೆ ವಿಚ್ಛೇದನ ಪಡೆದಿದ್ರು. ಮೃತರ ತಾಯಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…
ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…
ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…
ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…
ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…
ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…