ಮಂಗಳೂರು ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಅಮಾನತುಗೊಂಡಿರುವ ಬೆನ್ನಲ್ಲೇ, ಅವರ ಭ್ರಷ್ಟಾಚಾರಕ್ಕೆ ಬೆಂಬಲವಾಗಿ ನಿಂತಿದ್ದ ಭೂವಿಜ್ಞಾನಿ ಡಾ. ಮಹದೇಶ್ವರ ಎಚ್ ಎಸ್ ವರ್ಗಾವಣೆಗೆ ಸಾಮಾಜಿಕ ಹೋರಾಟಗಾರ ನವೀನ್ ಕುಮಾರ್ ರೈ ಕೈಕಾರ ಪಟ್ಟು ಹಿಡಿದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಡಾ. ಮಹಾದೇಶ್ವರ ಎಚ್ ಎಸ್ ಸರಿ ಸುಮಾರು 5 ವರ್ಷದಿಂದ ಜಿಲ್ಲೆಯಲ್ಲೇ ಜಾಂಡಾ ಹೂಡಿದ್ದಾರೆ. ರಾಜ್ಯ ಸರಕಾರದ ಸುತ್ತೋಲೆಯ ಪ್ರಕಾರ ಒಂದು ತಾಲೂಕು ಅಧಿಕಾರಿಯಾಗಿ ಇರುವವರು ಎರಡು ವರ್ಷದಿಂದ ಜಾಸ್ತಿ ಇರುವಾಗೆ ಇಲ್ಲ. ಆದರೂ ಸರಕಾರ ವರ್ಗಾವಣೆ ಎಂಬ ನೆಪ ಮಾಡಿದರು ಕನಿಷ್ಠ ಮೂರು ವರ್ಷ ಇರಬಹುದು. ಆದರೆ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಯಾಗಿದ್ದ ಮಹಾದೇಶ್ವರ ಎಚ್ ಎಸ್ ಸರಿ ಸುಮಾರು 5 ವರ್ಷವಾಗುತ್ತಾ ಬಂದಿದೆ.
ಇವರಿಗೆ 2024ರ ಅಕ್ಟೋಬರ್ 28 ರಂದು ವರ್ಗಾವಣೆ ಆದೇಶವಾಗಿತ್ತು. ಆದ್ರೆ ಹಿರಿಯ ಭೂವಿಜ್ಞಾನಿಯಾದ ಕೃಷ್ಣವೇಣಿಯವರು ಸರಕಾರದ ಆದೇಶವನ್ನು ಧಿಕ್ಕರಿಸಿ ಮಾದೇಶ್ವರ ಎಚ್ ಎಸ್ ಎಂಬ ಅಧಿಕಾರಿಯನ್ನು ರಿಲೀವ್ ಮಾಡಲಿಲ್ಲ. ಕಾರಣ ತನ್ನ ಲಂಚದ ಹಣಕ್ಕೆ ಸಹಕಾರ ನೀಡುತ್ತಿದ್ದ ಎಂಬ ಒಂದೇ ಕಾರಣಕ್ಕೆ ದೊಡ್ಡ ದೊಡ್ಡ ಅಕ್ರಮ ಮಾಫಿಯಾದ ಜನರನ್ನು ಇದೇ ಭೂ ವಿಜ್ಞಾನಿಯಾದ ಮಹಾದೇಶ್ವರ ಎಚ್ ಎಸ್ ಅವರು ಹಿರಿಯ ಭೂವಿಜ್ಞಾನಿಯಾದ ಕೃಷ್ಣವೇಣಿ ಅವರಿಗೆ ಪರಿಚಯ ಮಾಡಿದ್ದರು. ಇದು ಸಹ ಭೂ ವಿಜ್ಞಾನಿಯಾದ ಮಹದೇಶ್ವರ ಎಚ್ ಎಸ್ ಇವರಿಗೆ ವರ್ಗಾವಣೆ ಆಗದ ರೀತಿಯಲ್ಲಿ ಸಹಕಾರವಾಗಿತ್ತು. ಸರಕಾರ ವರ್ಗಾವಣೆಯನ್ನು ಮಾಡಿದ್ದರು ಈ ವರ್ಗಾವಣೆ ಆದೇಶವನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಂಡು ಸರಕಾರಕ್ಕೆ ಸವಾಲು ಎಸೆದಂತಹ ಲಂಚದ ಅಧಿಕಾರಿಯದ ಕೃಷ್ಣವೇಣಿಯವರ ಆಟ ನಿಂತು ಹೋಯಿತು. ಆದರೆ ಭೂವಿಜ್ಞಾನಿ ಮಹಾದೇಶ್ವರ ಎಚ್ ಎಸ್ ಯಾವಾಗ ವರ್ಗಾವಣೆ ಆಗುತ್ತಾರಾ ಏನು ಎಂಬುದು ತಿಳಿದಿಲ್ಲ. ಸರಕಾರ ತಕ್ಷಣ ಈ ವರ್ಗಾವಣೆ ಆದೇಶವನ್ನು ಪರಿಗಣಿಸಿ ಕೃಷ್ಣವೇಣಿ ಮತ್ತು ಭೂ ವಿಜ್ಞಾನಿಯಾದ ಮಾದೇಶ್ವರ ಎಚ್ ಎಸ್ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಜಿಲ್ಲೆಯ ಜನರ ಒತ್ತಾಯ. ಇನ್ನು ಇದಕ್ಕೆ ಪೂರಕವಾಗಿ ಭೂ ವಿಜ್ಞಾನಿ ಮಹಾದೇಶ್ವರ ಎಚ್ ಎಸ್ ಅವರ ಜೊತೆ ಸರ್ಕಾರದಿಂದ ಅನುಮತಿ ಪಡೆದ ವ್ಯಕ್ತಿ ಮಾತನಾಡಿರುವ ಆಡಿಯೋ ಕೂಡ ವೈರಲ್ ಆಗಿದೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…