ಮೊಬೈಲ್‌ನಲ್ಲಿ ಮುಳುಗಿದ್ದ ತಾಯಿಯ ಕಣ್ಣು ತಪ್ಪಿಸಿ ತೋಟದೊಳಗೆ ಹೋಗಿದ್ದ ಎರಡು ವರ್ಷದ ಮಗು ರಾತ್ರಿಯಿಡೀ ತೋಟದಲ್ಲಿ ಇದ್ದ ಘಟನೆ ಕೊಡಗಿನಲ್ಲಿ ನಡೆದಿದೆ.
ರಾತ್ರಿಯೆಲ್ಲಾ ತೋಟದಲ್ಲಿದ್ದ ಕಂದಮ್ಮನನ್ನು ಸಾಕು ನಾಯಿ ತೋಟದಲ್ಲಿ ಪತ್ತೆ ಹಚ್ಚಿ ಪಾಲಕರು ನಿರಾಳವಾಗುವಂತೆ ಮಾಡಿದ ಈ ಮನಕಲಕುವ ಘಟನೆ ನಡೆದಿರುವುದು ವೀರಾಜಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ. ನಾಪತ್ತೆಯಾಗಿದ್ದ ಮಗು ಸುನನ್ಯ ಭಾನುವಾರ ಪತ್ತೆಯಾಗಿದೆ.
ಶರಿ ಗಣಪತಿ ಎಂಬವರ ತೋಟದಲ್ಲಿ ಮಗುವಿನ ಪೋಷಕರು ಕೆಲಸ ಮಾಡುತ್ತಿದ್ರು, ಊಟದ ಬಳಿಕ ತಾಯಿ ನಾಗಿಣಿ ಮೊಬೈಲ್ ನೋಡಿಕೊಂಡು ಕುಳಿತಿದ್ದಾರೆ. ಸಂಜೆ ವೇಳೆಗೆ ಮಗು ನಾಪತ್ತೆಯಾಗಿರುವುದು ಅರಿವಿಗೆ ಬಂದಿದೆ. ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ ಸಾಕುನಾಯಿಗಳು ಭಾಗವಹಿದ್ದವು. ಕೊನೆಗೂ ತೋಟದ ನಡುವೆ ಮಗುವನ್ನು ಶ್ವಾನ ಓರಿಯೋ ಪತ್ತೆ ಮಾಡಿದೆ. ಅನಿಲ್ ಕಾಳಪ್ಪ ಅವರಿಗೆ ಸೇರಿದ ಶ್ವಾನ ಇದಾಗಿದ್ದು, ಶ್ವಾನದಿಂದಾಗಿ ಕೊನೆಗೂ ಕಂದಮ್ಮ ಹೆತ್ತಮ್ಮನ ಮಡಿಲು ಸೇರಿದೆ. ಮಗು ಸುನನ್ಯ ಜೇನುಕುರುಬ ಸಮುದಾಯದ ಸುನಿಲ್-ನಾಗಿಣಿ ದಂಪತಿಯ ಪುತ್ರಿಯಾಗಿದ್ದಾಳೆ.
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…
ಪೊಲೀಸ್ ಇಲಾಖೆಯ ನಿಜವಾದ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯೊಂದು ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಡೆದ ಅಪಘಾತದ…
ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದರೆಯ ಮಿಜಾರು ಕೊಪ್ಪದಕುಮೇರಿಯಲ್ಲಿ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ…
ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ…
ಶುಕ್ರವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಮಾಣಿ ಬೊಳ್ಳುಕಲ್ಲಿನಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ಕಮಲ…