ಜನ ಮನದ ನಾಡಿ ಮಿಡಿತ

Advertisement

ಕೊಡಗು: ತಾಯಿಯ ಕಣ್ಣು ತಪ್ಪಿಸಿ ತೋಟದೊಳಗೆ ಹೋದ ಮಗು; ಪತ್ತೆ ಹಚ್ಚಿದ್ದ ಸಾಕು ನಾಯಿ….!

ಮೊಬೈಲ್‌ನಲ್ಲಿ ಮುಳುಗಿದ್ದ ತಾಯಿಯ ಕಣ್ಣು ತಪ್ಪಿಸಿ ತೋಟದೊಳಗೆ ಹೋಗಿದ್ದ ಎರಡು ವರ್ಷದ ಮಗು ರಾತ್ರಿಯಿಡೀ ತೋಟದಲ್ಲಿ ಇದ್ದ ಘಟನೆ ಕೊಡಗಿನಲ್ಲಿ ನಡೆದಿದೆ.

ರಾತ್ರಿಯೆಲ್ಲಾ ತೋಟದಲ್ಲಿದ್ದ ಕಂದಮ್ಮನನ್ನು ಸಾಕು ನಾಯಿ ತೋಟದಲ್ಲಿ ಪತ್ತೆ ಹಚ್ಚಿ ಪಾಲಕರು ನಿರಾಳವಾಗುವಂತೆ ಮಾಡಿದ ಈ ಮನಕಲಕುವ ಘಟನೆ ನಡೆದಿರುವುದು ವೀರಾಜಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ. ನಾಪತ್ತೆಯಾಗಿದ್ದ ಮಗು ಸುನನ್ಯ ಭಾನುವಾರ ಪತ್ತೆಯಾಗಿದೆ.

ಶರಿ ಗಣಪತಿ ಎಂಬವರ ತೋಟದಲ್ಲಿ ಮಗುವಿನ ಪೋಷಕರು ಕೆಲಸ ಮಾಡುತ್ತಿದ್ರು, ಊಟದ ಬಳಿಕ ತಾಯಿ ನಾಗಿಣಿ ಮೊಬೈಲ್ ನೋಡಿಕೊಂಡು ಕುಳಿತಿದ್ದಾರೆ. ಸಂಜೆ ವೇಳೆಗೆ ಮಗು ನಾಪತ್ತೆಯಾಗಿರುವುದು ಅರಿವಿಗೆ ಬಂದಿದೆ. ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ ಸಾಕುನಾಯಿಗಳು ಭಾಗವಹಿದ್ದವು. ಕೊನೆಗೂ ತೋಟದ ನಡುವೆ ಮಗುವನ್ನು ಶ್ವಾನ ಓರಿಯೋ ಪತ್ತೆ ಮಾಡಿದೆ. ಅನಿಲ್ ಕಾಳಪ್ಪ ಅವರಿಗೆ ಸೇರಿದ ಶ್ವಾನ ಇದಾಗಿದ್ದು, ಶ್ವಾನದಿಂದಾಗಿ ಕೊನೆಗೂ ಕಂದಮ್ಮ ಹೆತ್ತಮ್ಮನ ಮಡಿಲು ಸೇರಿದೆ. ಮಗು ಸುನನ್ಯ ಜೇನುಕುರುಬ ಸಮುದಾಯದ ಸುನಿಲ್-ನಾಗಿಣಿ ದಂಪತಿಯ ಪುತ್ರಿಯಾಗಿದ್ದಾಳೆ.

Leave a Reply

Your email address will not be published. Required fields are marked *

ಮಂಗಳೂರು: ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

ಉಡುಪಿ: ಉಡುಪಿಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳ ಹಾರಾಟ; ಸಾರ್ವಜನಿಕರ ಗಮನ ಸೆಳೆದ ದೃಶ್ಯ

ಮುಂಬೈ: ಮುಂಬೈಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ…!

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹಸಂಚಾಲಕರಾಗಿ ಪ್ರದೀಪ್ ಅಜ್ಜಿಬೆಟ್ಟು ನೇಮಕ

ಉಡುಪಿ: ಸರ್ಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ₹16 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ; ಶ್ರೀಕೃಷ್ಣ ದೇವರ ದರ್ಶನ..!

ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಗುಜರಾತ್: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕರಾವಳಿಯ ಮೂವರು ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ…!

error: Content is protected !!