ಮಂಗಳೂರು ಕಂಬಳದಲ್ಲಿ ಕಂಬಳ ಉದ್ಘೋಷಕರಾದ ಕಂಬಳ ಕ್ಷೇತ್ರದ ಭೀಷ್ಮ ಎಂಬ ಖ್ಯಾತಿ ಪಡೆದಿರುವ ಗುಣಪಾಲ ಕಡಂಬರವರಿಗೆ ಆದ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ ಹಾಗೂ ಇದು ತುಳುನಾಡಿನ ಕಂಬಳ ಕ್ಷೇತ್ರಕ್ಕೆ ಆದ ಅಗೌರವ ಎಂದು ಯುಎಇಯಲ್ಲಿ ಇರುವ ಕಂಬಳ ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಮರಳು ಭೂಮಿಯಲ್ಲಿ ದುಡಿಯುತ್ತಿರುವ ನಾವು ಕಂಬಳವನ್ನು ಅತಿ ಪ್ರೀತಿ ಹಾಗೂ ಭಕ್ತಿ ಪೂರ್ವಕವಾಗಿ ಕಂಬಳ ಆರಂಭದಿಂದ ಅಂತ್ಯದವರೆಗೆ ಮೊಬೈಲ್ ಫೋನ್ ಅಥವಾ ಇನ್ನಿತರ ಪರದೆಯಲ್ಲಿ ನೋಡುವ ನಮಗೆ ಕಂಬಳದ ಸವಿಯನ್ನು ಇನ್ನೂ ಹೆಚ್ಚಿಸುವವರು ಕಂಬಳ ಉದ್ಘೋಷಕರು. ಅಂತಹ ಉದ್ಘೋಷಕರಿಗೆ ಈ ರೀತಿಯ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದರು. ಕಂಬಳದಲ್ಲಿ ಗುಣಪಾಲ ಕಡಂಬರ ಧ್ವನಿಯೇ ಒಂದು ವಿಶೇಷ ಆಕರ್ಷಣೆಯಾಗಿದೆ. ಅವರ ಧ್ವನಿಯಿಂದ ಕಂಬಳದ ಇತಿಹಾಸವನ್ನು ಕೇಳಲು ಕಂಬಳ ಅಭಿಮಾನಿಗಳು ನಿರೀಕ್ಷೆಯಲ್ಲಿರುತ್ತಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕಡಂಬರವರಿಗೆ ಮಾಡಿದ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಮಂಗಳೂರು ಕಂಬಳದಲ್ಲಿ ಅವಮಾನವನ್ನು ಮಾಡಿದವರು ನಾಳೆಯ ಮೀಯಾರಿನ ಕಂಬಳದಲ್ಲಿ ಕ್ಷಮೆ ಕೇಳಬೇಕು ಹಾಗೂ ಮುಂದಿನ ದಿನಗಳಲ್ಲಿ ಕಂಬಳ ಕ್ಷೇತ್ರಗಳಲ್ಲಿ ಇಂತಹ ಘಟನೆಗಳು ನಡೆಯಬಾರದು ಇದರ ಬಗ್ಗೆ ಕಂಬಳ ಜಿಲ್ಲಾ ಸಮಿತಿ ಮತ್ತು ಕಂಬಳ ರಾಜ್ಯ ಅಸೋಸಿಯೇಷನ್ ತುರ್ತು ಕ್ರಮವನ್ನು ತೆಗೆಯಬೇಕು ಎಂದು ನಮ್ಮ ಕಂಬಳ ಟೀಂ ದುಬೈಯ ಎಲ್ಲಾ ಸದಸ್ಯರು ಆಗ್ರಹಿಸಿದ್ದಾರೆ.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…