ಅಪಘಾತದಲ್ಲಿ ಮೃತಪಟ್ಟ ತನ್ನ ಭಾವಿ ಪತಿಯ ಪಕ್ಕದಲ್ಲೇ ತನ್ನನ್ನೂ ಸಮಾಧಿ ಮಾಡಬೇಕೆಂಬ ಯುವತಿಯ ಅಂತಿಮ ಬಯಕೆಯನ್ನು ಕುಟುಂಬಸ್ಥರು ಈಡೇರಿಸಿದ ಹೃದಯವಿದ್ರಾವಕ ಘಟನೆ ಕೇರಳದ ಮಂಜೇಶ್ವರದಲ್ಲಿ ನಡೆದಿದೆ.
ತಮಿಳುನಾಡಿನ ತಿರುನಲ್ವೇಲಿಯಲ್ಲಿ ಮೃತ ಯುವಕ ಮಣಿಯ ಸಮಾಧಿಯ ಪಕ್ಕದಲ್ಲೇ ವಧು ಪ್ರಫುಲ್ಲಾ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದ್ದು, ಸಾವಿನಲ್ಲೂ ಈ ಪ್ರೇಮಿಗಳು ಒಂದಾಗಿದ್ದಾರೆ. ಮಂಜೇಶ್ವರದ ಕಿದೂರು ಕುಂಡಂಗೇರಡುಕ ನಿವಾಸಿ ಜಯಾನಂದ ಅವರ ಪುತ್ರಿ ಪ್ರಫುಲ್ಲಾ ಕಳೆದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮಿಳುನಾಡು ಮೂಲದ ಬ್ಯಾಂಕ್ ಉದ್ಯೋಗಿ ಮಣಿ ಮತ್ತು ಪ್ರಫುಲ್ಲಾ ಅವರ ವಿವಾಹ ನಿಶ್ಚಯ ನಾಲ್ಕು ತಿಂಗಳ ಹಿಂದೆ ನಡೆದಿತ್ತು. ಆದರೆ, ಹತ್ತು ದಿನಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದಾರೆ. ಮಣಿಯ ಸಾವಿನಿಂದ ತೀವ್ರ ಮನನೊಂದು ಖಿನ್ನತೆಗೆ ಒಳಗಾಗಿದ್ದ ಪ್ರಫುಲ್ಲಾ, “ನನ್ನನ್ನು ಮಣಿಯ ಪಕ್ಕದಲ್ಲೇ ಮಣ್ಣು ಮಾಡಬೇಕು” ಎಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮಗಳ ಅಂತಿಮ ಆಸೆಯನ್ನು ಗೌರವಿಸಿದ ತಂದೆ ಜಯಾನಂದ ಹಾಗೂ ಕುಟುಂಬಸ್ಥರು, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪರ್ಣಗೊಂಡ ಬಳಿಕ, ಪ್ರಫುಲ್ಲಾ ಅವರ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ತಮಿಳುನಾಡಿನ ವಳ್ಳಿಯೂರು ಗ್ರಾಮಕ್ಕೆ ಕೊಂಡೊಯ್ಯದರು. ಅಲ್ಲಿ ಧರ್ಮಿಕ ವಿಧಿವಿಧಾನಗಳೊಂದಿಗೆ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲಾ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ನೋವಿನ ಕ್ಷಣಕ್ಕೆ ಸಾಕ್ಷಿಯಾದ ಎರಡೂ ಕುಟುಂಬದವರು ಹಾಗೂ ಗ್ರಾಮಸ್ಥರು ಭಾವುಕರಾದರು. ಪ್ರೀತಿಪಾತ್ರನ ಅಗಲಿಕೆಯನ್ನು ತಾಳಲಾರದೆ ಪ್ರಾಣತ್ಯಾಗ ಮಾಡಿದ ಯುವತಿಯ ಅಂತಿಮ ಆಸೆ ಕೊನೆಗೂ ಈಡೇರಿದ ಘಟನೆ ಸ್ಥಳೀಯರಲ್ಲಿ ಕಣ್ಣೀರನ್ನು ತರಿಸಿತು.
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…
ಪೊಲೀಸ್ ಇಲಾಖೆಯ ನಿಜವಾದ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯೊಂದು ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಡೆದ ಅಪಘಾತದ…
ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದರೆಯ ಮಿಜಾರು ಕೊಪ್ಪದಕುಮೇರಿಯಲ್ಲಿ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ…
ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ…
ಶುಕ್ರವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಮಾಣಿ ಬೊಳ್ಳುಕಲ್ಲಿನಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ಕಮಲ…