ಟ್ರಾಫಿಕ್ ಎಸ್. ಐ.ಆದರ್ಶ್ ನೇತ್ರತ್ವದಲ್ಲಿ ಟ್ರಾಫಿಕ್ ಪೋಲೀಸರ ತಂಡ ಬಿಸಿರೋಡಿನ ಹೃದಯಭಾಗದಲ್ಲಿ ಟ್ರಾಫಿಕ್ ನಿಯಮ ಪಾಲಿಸದ ವಾಹನ ಸವಾರರಿಗೆ ದಂಡ ವಿಧಿಸಿದ್ದಲ್ಲದೆ, ಟ್ರಾಫಿಕ್ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದ ಬಸ್ ಹಾಗೂ ರಿಕ್ಷಾ ಚಾಲಕರಿಗೆ ಸಖತ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
ಬಿಸಿರೋಡಿನ ಬಸ್ ನಿಲ್ದಾಣದ ಬಳಿ ಗ್ರಾಮೀಣ ಭಾಗಕ್ಕೆ ತೆರಳುವ ಖಾಸಗಿ ಬಸ್ ಹಾಗೂ ಗ್ರಾಮೀಣ ಪರ್ಮಿಟ್ ಹೊಂದಿರುವ ರಿಕ್ಷಾ ಚಾಲಕರು ರಿಕ್ಷಾಗಳನ್ನು ನಿಲ್ಲಿಸಿ , ಸಂಚಾರಕ್ಕೆ ಅಡವಣೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪಗಳು ಅನೇಕ ದಿನಗಳಿಂದ ಕೇಳಿ ಬಂದಿತ್ತು. ಈ ದಿನ ಸ್ವತಃ ಟ್ರಾಫಿಕ್ ಎಸ್.ಐ.ಆದರ್ಶ್ ಅವರು ಫೀಲ್ಡಿಗಿಳಿದು ಬಸ್‌ಗಳ ಚಾಲಕರಿಗೆ ಹಾಗೂ ರಿಕ್ಷಾ ಚಾಲಕರಿಗೆ ಕ್ಲಾಸ್ ತೆಗೆದಯಕೊಂಡಿದ್ದಲ್ಲದೆ, ಪ್ರತಿ ವಾಹನಗಳ ದಾಖಲೆಗಳನ್ನು ಪರಿಶೀಲಿಸಿ, ನಿಯಮ ಪಾಲನೆಯ ಬಿಸಿ ಮುಟ್ಟಿಸಿದ್ದಾರೆ.
ಇದರ ಜೊತೆ ಒಟ್ಟು 25 ಪ್ರಕರಣಗಳನ್ನು ವಿವಿಧ ವಾಹನಗಳಿಗೆ ಬೇರೆ ಕಾರಣಗಳಿಗಾಗಿ ದಾಖಲು ಮಾಡಿದ್ದಾರೆ. ಅದರಲ್ಲಿ 13 ಪ್ರಕರಣಗಳು ಕರ್ಕಶ ಹಾರ್ನ್ಗಳನ್ನು ಅಳವಡಿಸಿದ ಕಾರಣಕ್ಕೆ ಉಳಿದಂತೆ ನಂಬರ್ ಪ್ಲೇಟ್ ಇಲ್ಲದ ವಾಹನಗಳು ಹಾಗೂ ಕರ್ಕಶ ಶಬ್ದ ಮಾಡುವ ವಾಹನಗಳ ಸೈಲೆನ್ಸ್ರ್‌ಗಳನ್ನು ಹೊಂದಿರುವ ವಾಹನಗಳ ಮೇಲೆ ಪ್ರಕರಣ ದಾಖಲು ಮಾಡಿರುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಬಿಸಿರೋಡಿನ ಕೈಕಂಬದಲ್ಲೂ ಇದೇ ಮಾದರಿಯ ಕಾರ್ಯಾಚರಣೆ ಮಾಡುವಂತೆ ಸಾರ್ವಜನಿಕ ವಲಯದಿಂದ ಒತ್ತಾಯಗಳು ಕೇಳಿ ಬಂದಿದ್ದು, ಇಲ್ಲಿ ಟ್ರಾಫಿಕ್ ರೂಲ್ ಫಾಲೋ ಮಾಡದೆ ಅಡ್ಡಾದಿಡ್ಡಿ ವಾಹನಗಳ ಚಾಲನೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಇವೆ.
ಸರ್ಕಾರ ಅಧಿಕೃತವಾಗಿ ಘೋಷಿಸಿರುವ ದಸರಾ ರಜೆಯ ಅವಧಿಯಲ್ಲಿ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಶ್ರೀರಾಮ ಸೇನೆಯ ರಾಷ್ಟ್ರೀಯ…
ತಾಲೂಕಿನ ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮಾನವನ ಅಸ್ಥಿಪಂಜರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬಳಂಜ ಪಾಡಿ…
ನಗರದ ಗೀತಾಂಜಲಿ ಸಿಲ್ಕ್ಸ್ ರಸ್ತೆಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳು ಏಕಕಾಲದಲ್ಲಿ ಹಾರಾಡಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿಗಳ…
ಬಂಟರ ಸಂಘ ಮುಂಬೈನ ಜ್ಞಾನ ಮಂದಿರ ಸಮಿತಿಯ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ ಕಾರ್ಯಕ್ರಮವು ಸೆ.26ರಂದು ಕುರ್ಲಾದ ಶ್ರೀಮತಿ…
ಎಬಿವಿಪಿ ಸಂಘಟನೆಯ ಮೂಲಕ ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರದೀಪ್ ಅಜ್ಜಿಬೆಟ್ಟು ಅವರನ್ನು ಹಿಂದೂ ಜಾಗರಣಾ ವೇದಿಕೆಯ…
ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಬೈಂದೂರು ಪೊಲೀಸರು…