ಬಂಗ್ರಕೂಳೂರು ವಿಆರ್‌ಎಲ್ ಮುಂಭಾಗ ಸ್ಕೂಟರ್‌ಗೆ ಹಿಂಭಾಗದಿಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ.

ಸವಾರ ರಸ್ತೆಗೆ ಬಿದ್ದಾಕ್ಷಣವೇ ಲಾರಿ ಚಕ್ರ ಸವಾರನ ಮೇಲೆಯೇ ಚಲಿಸಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಹಳೆಯಂಗಡಿ ತೋಕೂರು ನಿವಾಸಿ ಸದಾನಂದ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಸದಾನಂದ ಅವರು ತಮ್ಮ ಇವಿ ಸ್ಕೂಟರ್ ನಲ್ಲಿ ಕೂಳೂರಿನಲ್ಲಿ ಬರುತ್ತಿದ್ದಾಗ ದುರಂತ ಸಂಭವಿಸಿದೆ.



