ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿ ದ್ವಿಚಕ್ರ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಬಳಿಯ ಕೆಲಿಂಜ ಸಮೀಪದ ಪೆಲತ್ತಡ್ಕದಲ್ಲಿ ನಡೆದಿದೆ.

ಕಲ್ಲಡ್ಕದಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾ ಕೆಲಿಂಜ ಪೆಲತ್ತಡ್ಕ ಬಳಿ ತಲುಪುತ್ತಿದ್ದಂತೆ ರಸ್ತೆಯಲ್ಲಿ ಹಾವು ಹರಿದಾಡುತ್ತಿರುವಿದನ್ನು ಕಂಡು ಎದುರುಗಡೆ ಇದ್ದ ವಾಹನ ಸವಾರ ಬ್ರೇಕ್ ಹಾಕಿದ್ದು, ಪರಿಣಾಮ ಹಿಂದೆ ಇದ್ದ ಆಟೋ ಚಾಲಕ ತಕ್ಷಣ ಬಲ ಭಾಗಕ್ಕೆ ವಾಹನ ತಿರುಗಿಸಿದ್ದಾರೆ. ಪರಿಣಾಮ ವಿಟ್ಲದಿಂದ ಕಲ್ಲಡ್ಕ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.



