ಈ ಸಾಲಿನಲ್ಲಿ ಮತ್ಸ್ಯಕ್ಷಾಮ ಉಂಟಾಗದೆ, ಸಮುದ್ರದಲ್ಲಿ ಮೀನುಗಳ ಸಮೃದ್ಧಿ ಇರಲಿ ಹಾಗೂ ಮೀನುಗಾರಿಕೆಗೆ ತೆರಳುವ ವೇಳೆ ಯಾವುದೇ ಅನಾಹುತ ಸಂಭವಿಸದಿರಲಿ ಎಂದು ಪ್ರಾರ್ಥಿಸಿ ಗಂಗೊಳ್ಳಿಯಲ್ಲಿ ಮೀನುಗಾರರು ಸಂಪ್ರದಾಯಬದ್ಧವಾಗಿ ಸಮುದ್ರ ಪೂಜೆ ನೆರವೇರಿಸಿದರು.
ಅರ್ಚಕ ವೇದಮೂರ್ತಿ ವಿಠಲ್‌ದಾಸ್ ಭಟ್ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಪರ್ಸಿನ್ ಬೋಟ್, 320 ಬೋಟ್ ಹಾಗೂ ಟ್ರಾಲರ್ ಬೋಟ್‌ಗಳ ಸಂಘದ ಸದಸ್ಯರು ಪಾಲ್ಗೊಂಡು ಸಮುದ್ರ ರಾಜನಿಗೆ ಹಾಲು, ತೆಂಗಿನಕಾಯಿ, ಫಲ-ಪುಷ್ಪಗಳನ್ನು ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಎರಡು ತಿಂಗಳ ಮೀನುಗಾರಿಕಾ ನಿಷೇಧ ಜುಲೈ 31ಕ್ಕೆ ಅಂತ್ಯಗೊಂಡಿದ್ದರೂ, ಸಮುದ್ರದಲ್ಲಿ ಅಲೆಗಳ ಅಬ್ಬರ ಮತ್ತು ಪ್ರಕ್ಷುಬ್ಧ ವಾತಾವರಣ ಮುಂದುವರಿದಿರುವುದರಿಂದ ಮೀನುಗಾರರು ಇನ್ನೂ ಕಡಲಿಗಿಳಿಯಲು ಸಾಧ್ಯವಾಗಿಲ್ಲ. ಪ್ರಸ್ತುತ ಗಂಗೊಳ್ಳಿ ಬಂದರಿನಲ್ಲಿ ದಡದಲ್ಲಿರುವ ಬೋಟ್‌ಗಳನ್ನು ನೀರಿಗೆ ಇಳಿಸಲು ಸಿದ್ಧತೆ, ಬಲೆ ಹೆಣೆಯುವುದು, ಮೀನುಗಾರಿಕಾ ಪರಿಕರಗಳ ಜೋಡಣೆ ಹಾಗೂ ಬೋಟ್‌ಗಳಿಗೆ ಬಣ್ಣ ಬಳಿಯುವ ಕೆಲಸ ಭರದಿಂದ ಸಾಗುತ್ತಿದೆ. ಸಮುದ್ರದ ವಾತಾವರಣ ಅನುಕೂಲಕರವಾದರೆ ಆಗಸ್ಟ್ 16ರ ಬಳಿಕ ಗಂಗೊಳ್ಳಿಯ ಮೀನುಗಾರರು ಮೀನುಗಾರಿಕೆಗೆ ತೆರಳುವ ನಿರೀಕ್ಷೆಯಿದೆ ಎಂದು ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಡಿವಾಳ ತಿಳಿಸಿದ್ದಾರೆ.
ನಿರಂತರ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮಂಗಳೂರು–ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ–169ರ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಮತ್ತೆ ಭೂಕುಸಿತ ಆರಂಭವಾಗಿದೆ. ಗುಡ್ಡದಿಂದ…
ಪ್ರಚೋದನಾಕಾರಿ ಭಾಷಣ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಸ್ಟಿಪಿಐ ಮುಖಂಡ ಮಹಮ್ಮದ್ ರಿಯಾಜ್ ಫರಂಗಿಪೇಟೆ…
ಬೀದಿ ನಾಯಿಗಳ ದಾಳಿಯಿಂದ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ಲಕ್ಷ್ಮೇಶ್ವರ ಪಟ್ಟಣದ ವಾರ್ಡ್…
ಮಳೆ ಬಂದಾಗಲೆಲ್ಲ ಕೃತಕ ನೆರೆ ಉಂಟಾಗಿ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟುಮಾಡುತ್ತಿದ್ದ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ…
ಜಿಲ್ಲೆಯ ಯಲಬುರ್ಗಾ, ಕುಷ್ಟಗಿ ಹಾಗೂ ಕೊಪ್ಪಳ ತಾಲೂಕಿನ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಂಡ್ ಮಿಲ್ ಕಂಪನಿಗಳ ವಿರುದ್ಧ ರೈತರು ಗಂಭೀರ…
ಸಾಮಾನ್ಯವಾಗಿ 18ನೇ ವಯಸ್ಸಿನಲ್ಲಿ ಯುವಕರು ಕಾಲೇಜು ಶಿಕ್ಷಣವನ್ನು ಆರಂಭಿಸುತ್ತಾರೆ. ಆದರೆ ಅಮೆರಿಕದ ಫ್ಲೋರಿಡಾ ಮೂಲದ ನಾಥನ್ ಥಾಮಸ್ ಇದೇ ವಯಸ್ಸಿನಲ್ಲಿ…