ಕಾರ್ಕಳ: ಬ್ಯಾಂಕ್ ಶಾಖೆಯ ಕಚೇರಿಯಲ್ಲಿ ವಿದ್ಯುತ್ ಶಾಟ್೯ ಸಕ್ಯೂ೯ಟ್ ಸಂಭವಿಸಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಈ ಘಟನೆ ಆಗಸ್ಟ್ 3ರಂದು ಬೆಳಗ್ಗೆ ಕಾರ್ಕಳದ ಕೆನರಾ ಬ್ಯಾಂಕ್ ನಲ್ಲಿ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಯಾವುದೇ ಅಗತ್ಯ ದಾಖಲೆಗಳು ಮತ್ತು ಆಸ್ತಿಗೆ ಹಾನಿಯಾಗಿಲ್ಲ.ಸುತ್ತಮುತ್ತಲಿನ ಕೆಲವು ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿವೆ. ಬ್ಯಾಂಕ್ ಸಿಬ್ಬಂದಿಯ ಸಮಯಪ್ರಜ್ಞೆ ಯಿಂದ ಭಾರಿ ಅನಾಹುತ ತಪ್ಪಿದೆ.
ಕಚೇರಿಯೊಳಗೆ ಸುಟ್ಟ ವಾಸನೆ ಹಾಗೂ ಹೊಗೆ ಕಾಣಿಸಿಕೊಂಡ ಕ್ಷಣವೇ ಅಲ್ಲಿದ್ದ ಸಿಬ್ಬಂದಿ ದಾಖಲೆಗಳು ಹಾಗೂ ಆಸ್ತಿಯನ್ನು ಬದಿಗೆ ಸರಿಸಿ ಹೊರ ಓಡಿ ಬಂದಿದ್ದಾರೆ. ಬಳಿಕ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಹಾಗೂ ಸಾರ್ವಜನಿಕರು ಜಮಾಯಿಸಿದ್ದರು. ಯಾವುದೇ ಅಗತ್ಯ ದಾಖಲೆಗಳು, ಆಸ್ತಿಗಳು ಹಾನಿಯಾಗಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.
ಜ್ಯೋತಿಷ್ಯ ಹೇಳುವ ನೆಪದಲ್ಲಿ 62 ವರ್ಷದ ಶಾಂತಮ್ಮ ಅವರನ್ನು ನಂಬಿಸಿ ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ…
ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಆರಂಭಿಸಲಾದ ಹಲಸು ಸಂಸ್ಕರಣಾ ಘಟಕ ನಿರೀಕ್ಷಿತ ರೀತಿಯಲ್ಲಿ…
ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ಬಿಜೆಪಿ ಹಿರಿಯ ನಾಯಕಿ ಹಾಗೂ ಮಾಜಿ ಸಂಸದೆ ಡಾ. ಸುಧಾ ಯಾದವ್ ಅವರನ್ನು ನೇಮಕ ಮಾಡಲಾಗಿದೆ…
ಭಾರತದ ವಿರುದ್ಧ ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ವೆಸ್ಟ್ ಇಂಡೀಸ್ ತಂಡದ ಆಟಗಾರರಾದ…
ಭಾರತ ತಂಡದ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ದೇಶಿ ಕ್ರಿಕೆಟ್ನಲ್ಲಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ರಾಜ್ಕೋಟ್ನ ನಿರಂಜನ್…
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಅವರ…