ಕಿನ್ನಿಗೋಳಿ: ಭಾರತೀಯ ಸಂಸ್ಕೃತಿಯ ಎಲ್ಲಾ ಕಲೆಗಳಿಗ್ಗಿಂತ ನಮ್ಮ ಕರಾವಳಿಯ ಗಂಡುಕಲೆ ಯಕ್ಷಗಾನವು ವಿಶೇಷಗಳಲ್ಲಿ ವಿಶಿಷ್ಟ ಕಲೆಯಾಗಿದೆ.ಈ ಯಕ್ಷಗಾನ ಕಲೆಯಲ್ಲಿ ಲಯಬದ್ದವಾದ ಹಾಡುಗಾರಿಕೆ ವೇಷಗಾರಿಕೆಯಲ್ಲಿ ನೃತ್ಯ, ಸ್ಪಷ್ಟ ಉಚ್ಚಾರದ ಮಾತುಗಾರಿಕೆ ಹಾಗೂ ದೈಹಿಕ ವ್ಯಾಯಾಮವು ಒಳಗೊಂಡಿದೆಯೆಂದು ಶಾಸಕರಾದ ಉಮನಾಥ ಕೋಟ್ಯಾನ್ ರವರು ಕಿನ್ನಿಗೋಳಿ ಸಮೀಪದ ಕಮ್ಮಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಯಕ್ಷ ಶಿಕ್ಷಣ ಉಧ್ಘಾಟನಾ ಸಮಾರಂಭದಲ್ಲಿ ಹೇಳಿದರು. ಯಕ್ಷಗಾನ ಕಲಿಯಲು ನಾವು ತರಗತಿಗತಿಗಳನ್ನು ಹುಡುಕಿಕೊಂಡು ಹೋಗುವ ಪ್ರಸ್ತುತ ಸನ್ನಿವೇಶದಲ್ಲಿ ಶಾಲೆಗಳಿಗೆ ಬಂದು ಯಕ್ಷಗಾನವನ್ನು ಕಲಿಸಲು ಮುಂದೆ ಬಂದಿರುವ ಪಟ್ಲ ಸತೀಶ್ ಶೆಟ್ಟಿಯವರನ್ನು ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ ನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಷಿ, ಎಂ.ಎಲ್ ಸಾಮಗ, ಯಕ್ಷ ಶಿಕ್ಷಣದ ರೂವಾರಿ ಹಾಗೂ ಸಂಚಾಲಕ ಪಣಂಬೂರು ವಾಸು ಐತಾಳ್, ಯುಗಪುರುಷದ ಭುವನಾಭಿರಾಮ ಉಡುಪ, ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್, ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಶಾಲೆಯ ಪ್ರಿನ್ಸಿಪಾಲ್ ಪುಟ್ಟಸ್ವಾಮಿ ಉಪಸ್ಥಿತರಿದ್ದರು.ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಚಿತ್ರಕಲಾ ಶಿಕ್ಷಕ ಭವನ್ ಪಿ.ಜಿ ಶಾಸಕ ಉಮಾನಾಥ ಕೋಟ್ಯಾನ್ ಅವರ ಚಿತ್ರ ಬಿಡಿಸಿದ್ದು ಅದನ್ನು ಶಾಸಕರಿಗೆ ಹಸ್ತಾಂತರಿಸಲಾಯಿತು. ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮುರಳೀಧರ್ ಜಿ.ಎನ್ ಸ್ವಾಗತಿಸಿ, ಶಿಕ್ಷಕ ಮಂಜುನಾಥ ಕೆ ಧನ್ಯವಾದ ಸಮರ್ಪಿಸಿದರು. ಶಿಕ್ಷಕ ಪ್ರವೀಣ್ ಪೂಜಾರಿ ನಿರೂಪಿಸಿದರು.
ಬಿಸಿಯೂಟದ ಸಿಬ್ಬಂದಿಯೊಬ್ಬರ ಕೈ ವಿದ್ಯುತ್ ಚಾಲಿತ ತುರಿಮಣೆಯಲ್ಲಿ ಸಿಲುಕಿಕೊಂಡ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ…
ನಗರದ ಕೆಪಿಟಿ ಸಿಗ್ನಲ್ ಸಮೀಪ ರಸ್ತೆಯ ಮಧ್ಯಭಾಗದಲ್ಲೇ ಭಾರೀ ಗುಂಡಿಯೊಂದು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಅಪಾಯ ಎದುರಾಗಿದೆ. ಈ ಮಾರ್ಗದಲ್ಲಿ…
ಆಟಿ ಅಮಾವಾಸ್ಯೆಯ ಪವಿತ್ರ ದಿನದಂದು ಬಂಟ್ವಾಳ ತಾಲೂಕಿನ ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಿದ್ಧಿಯ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ…
ತುಳುಕೂಟ ಬಂಟ್ವಾಳ ಹಾಗೂ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ, ಬಿ.ಸಿ.ರೋಡು ಇದರ ಆಡಳಿತ ಮಂಡಳಿಯ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಆಟಿ…
ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು…
ಆಟಿ ಅಮಾವಾಸ್ಯೆಯ ಪ್ರಯುಕ್ತ ತಾಲೂಕಿನ ಪ್ರಸಿದ್ಧ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಬುಧವಾರ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ವಿವಿಧ ಧಾರ್ಮಿಕ…