ತುಳುನಾಡಿನ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಕರೇನಾಡ ಕಮ್ಮೆನ ಯೂಟ್ಯೂಬ್ ಚಾನೆಲ್ ಇದೀಗ “ಕಟೀಲ ಕಣ್ಮಣಿ” ಎಂಬ ವಿಶೇಷ ಕಲಾಕೃತಿಯನ್ನು ಪ್ರೇಕ್ಷಕರ ಮುಂದೆ ತರುತ್ತಿದೆ.

ಈ ಕಲಾಕೃತಿಯ ನಿರ್ಮಾಣದಲ್ಲಿ ಡಾ. ಅಣ್ಣಯ್ಯ ಕುಲಾಲ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ , ಮಂಗಳೂರು ಹಾಗೂ ಸುರೇಶ್ ಆಚಾರ್ಯ ಅವರು ಕೈಜೋಡಿಸಿದ್ದಾರೆ. ಈ ಕೃತಿಗೆ ಮನೀಶ್ ಕುತ್ತಾರ್ ಅವರು ಸಾಹಿತ್ಯ ರಚಿಸಿದ್ದು, ಪವಿತ್ರ ನಿಶಿತ್ ಅವರು ಗಾಯನದ ಮೂಲಕ ಜೀವ ತುಂಬಿದ್ದಾರೆ. ಸಹಗಾಯಕರಾಗಿ ಚಿರಾಯು ಎನ್. ಕೋಟ್ಯಾನ್ ಹಾಗೂ ಚಿರಸ್ವಿ ಟಿ. ಅವರು ಸಾಥ್ ನೀಡಿದ್ದಾರೆ. ಇನ್ನು, ಈ ಕಲಾಕೃತಿಯ ದೃಶ್ಯಸೌಂದರ್ಯವನ್ನು ತಮ್ಮ ಕ್ಯಾಮೆರಾ ಕೈಚಳಕದ ಮೂಲಕ ಸೆರೆಹಿಡಿದಿರುವವರು ಡಿ.ಓ.ಪಿ. ಅರ್ಪಿತ್ ಕಣ್ಣೂರು. ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಭಕ್ತಿಭಾವದ ಅಭಿವ್ಯಕ್ತಿಗೆ ವೇದಿಕೆಯಾಗಿರುವ ಈ ಪ್ರಯತ್ನವು ಕಲಾಭಿಮಾನಿಗಳ ಗಮನ ಸೆಳೆಯುವ ನಿರೀಕ್ಷೆಯಿದೆ.



