ಜನ ಮನದ ನಾಡಿ ಮಿಡಿತ

Advertisement

ಅಕ್ಟೋಬರ್ 24ರಂದು ನಿಟ್ಟೆಯಲ್ಲಿ ‘ಯಕ್ಷಗವಿಷ್ಟಿ’ ಯಕ್ಷಗಾನ ಸ್ಪರ್ಧೆ

 

ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸAಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಘವಾದ ಕಲಾಸಂಗಮವು ಆಹ್ವಾನಿತ ತಂಡಗಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಗವಿಷ್ಟಿ’ಯ ನಾಲ್ಕನೇ ಆವೃತ್ತಿಯನ್ನು ಅಕ್ಟೋಬರ್ 24ರಂದು ನಿಟ್ಟೆ ಕ್ಯಾಂಪಸ್ ನಲ್ಲಿ ಆಯೋಜಿಸಿದೆ.

ಕೀರ್ತಿಶೇಷ ಸೂರಿಕುಮೇರು ಶ್ರೀ ಕೆ. ಗೋವಿಂದ ಭಟ್ ಅವರ ಹೆಸರನ್ನು ಈ ಬಾರಿಯ ವೇದಿಕೆಗೆ ಇಡಲಾಗಿದ್ದು, ಪ್ರಸಕ್ತಸಾಲಿನ ಯಕ್ಷಗವಿಷ್ಟಿಯನ್ನು ದಿ| ಶ್ರೀ ಎನ್. ವಿನಯ ಹೆಗ್ಡೆ ಅವರ ಸ್ಮರಣಾರ್ಥ ಸಮರ್ಪಿಸಲಾಗುತ್ತಿದೆ. ಶಿಕ್ಷಣ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ಸಮಾಜಕ್ಕೆ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಅವರ ಚಿಂತನೆಯನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿವರ್ಷದಂತೆ 5 ಆಹ್ವಾನಿತ ತಂಡಗಳ ಮಧ್ಯೆ ಈ ಸ್ಪರ್ಧೆ ನಡೆಯಲಿದ್ದು, ಪ್ರಸ್ತುತ ವರ್ಷ “ಇನವಂಶಚರಿತಾಮೃತA” ಎಂಬ ಶೀರ್ಷಿಕೆಯಡಿ ಸೂರ್ಯವಂಶ ಸಂಜಾತರಾಗಿ ರಾಜ್ಯವನ್ನಾಳಿದ 5 ರಾಜರಾದ ನಿಬಂಧನ, ದಂಡಕ, ದಿಲೀಪ, ಭಗೀರಥ ಹಾಗೂ ದಶರಥರ ಕಥಾನಕವನ್ನು ರಂಗದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ ್ರಮವನ್ನು ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಮೇಳದ ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಅವರು ಉದ್ಘಾಟಿಸಲಿರುವರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ವಹಿಸಲಿರುವರು. ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಸುಳ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಯಕ್ಷಗಾನ ಪಠ್ಯಪುಸ್ತಕ ಸಮಿತಿಯ ಸದಸ್ಯ ಶ್ರೀ ಪ್ರಕಾಶ ಮೂಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸ್ಪರ್ಧೆಯ ಬಳಿಕ ಆತಿಥೇಯ ಕಾಲೇಜಿನ ಕಲಾವಿದರಿಂದ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಒಂದು ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಪ್ರಸ್ತುತ ಕಾಲಘಟ್ಟದಲ್ಲಿ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಏಕೈಕ ಸಂಸ್ಥೆ ನಿಟ್ಟೆ ಕಾಲೇಜಾಗಿದ್ದು, ಕಾಗದ ರಹಿತ ಮೌಲ್ಯಮಾಪನ, ವೆಬ್ ಸೈಟ್ ನೋಂದಣಿ ವ್ಯವಸ್ಥೆ, 85 ಡೆಸಿಬೆಲ್ ಶಬ್ದ ಮಿತಿ ಮುಂತಾದ ಆಧುನಿಕ ಅಂಶಗಳನ್ನು ಸಾಂಪ್ರದಾಯಿಕ ಕಲೆಯೊಂದಿಗೆ ಸಮ್ಮಿಲಿತಗೊಳಿಸಿ ತಾಂತ್ರಿಕವಾಗಿಯೂ ಬದಲಾವಣೆಯತ್ತ ಹೊಸ ಹೆಜ್ಜೆ ಇಡುವ ಪ್ರಯತ್ನದಲ್ಲೂ ಸೈ ಎನಿಸಿಕೊಂಡಿದೆ. 2023ರಿಂದ ಮೊದಲ್ಗೊಂಡು ಹಲವಾರು ಯಕ್ಷಗಾನ ಸ್ಪರ್ಧೆಗಳಲ್ಲಿ ನಿಟ್ಟೆ ವಿದ್ಯಾಸಂಸ್ಥೆಯನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳ ತಂಡ ಜಯಶಾಲಿಯಾಗಿದ್ದು, ಇದೀಗ ಸ್ಪರ್ಧಾ ಸಂಯೋಜನೆಯಲ್ಲಿಯೂ ಇತರರಿಗಿಂತ ಭಿನ್ನವಾಗಿ ಉಳಿದವರಿಗೆ ಮಾದರಿಯಾಗಿ ನಿಂತಿದೆ. ಇಲ್ಲಿ ಪ್ರಮುಖವಾದ ಇನ್ನೊಂದು ಅಂಶವೇನೆAದರೆ, ಯಕ್ಷಗಾನ ತಂಡದ ಸದಸ್ಯರು ಮಾತ್ರವಲ್ಲದೆ, ವಿವಿಧ ತಾಂತ್ರಿಕ ಅಂಶಗಳಾದ ವೆಬ್ಸೈಟ್ ನೋಂದಣಿ, ಕಾಗದರಹಿತ ಮೌಲ್ಯಮಾಪನ ತಂತ್ರಜ್ಞಾನವನ್ನು ಯಕ್ಷಗಾನದ ಬಗ್ಗೆ ಹೆಚ್ಚು ಅರಿವಿರದ ವಿದ್ಯಾರ್ಥಿಗಳು ಬಹಳ ಆಸ್ಥೆಯಿಂದ ತಯಾರಿಸಿಕೊಟ್ಟಿದ್ದಾರೆ. ಉಳಿದ ಸ್ಪರ್ಧೆಗಳಂತೆ ಪಾತ್ರಸ್ವರೂಪದ ಆಧಾರದ ಮೇಲೆ ವೈಯಕ್ತಿಕ ಬಹುಮಾನ ವಿಂಗಡಿಸುವ ಬದಲು, ಪಾತ್ರ ಚಿತ್ರಣ ಆಧಾರಿತ ವೈಯಕ್ತಿಕ ಬಹುಮಾನ ನೀಡುವ ಮೂಲಕ ಪ್ರತಿ ವರ್ಷವೂ ಏನಾದರೂ ಒಂದು ಸುಧಾರಣೆಯನ್ನು ಯಕ್ಷಗಾನ ಸ್ಪರ್ಧಾಲೋಕದ ಮುಂದಿಡುತ್ತಿದೆ. ಯಕ್ಷಗಾನ ತಂಡದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಶೈಕ್ಷಣಿಕವಾಗಿಯೂ ಉತ್ತಮ ಫಲಿತಾಂಶ ಹೊಂದಿದ್ದು, ಔದ್ಯೋಗಿಕವಾಗಿಯೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ. ತಮ್ಮ ಶಿಕ್ಷಣದ ಜೊತೆ ಜೊತೆಗೆ ಹವ್ಯಾಸಿ ಕಲಾವಿದರಾಗಿಯೂ ತಮ್ಮ ಕಲಾಸೇವೆಯನ್ನು ಮುಂದುವರಿಸುತ್ತಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಅಗತ್ಯ ಸೌಲಭ್ಯಗಳಿಲ್ಲದೆ ಜಿಲ್ಲಾಸ್ಪತ್ರೆ ಸ್ಥಳಾಂತರಕ್ಕೆ ಸಿದ್ಧತೆ: ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ

ಪುತ್ತೂರು: ಪುತ್ತೂರಿನಲ್ಲಿ ಅಕ್ರಮ ಕೇರಳ ಲಾಟರಿ ಮಾರಾಟ ಜಾಲ ಪತ್ತೆ: ಇಬ್ಬರು ವಶಕ್ಕೆ

ಪುತ್ತೂರು: ಕಾರಿಗೆ ಡಿಕ್ಕಿ ಹೊಡೆದು ಹೆದ್ದಾರಿಯಲ್ಲೇ ಮಗುಚಿಬಿದ್ದ ಲಾರಿ

ಮಂಗಳೂರು: ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ, ಮೂವರು ಆರೋಪಿಗಳ ಬಂಧನ

ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಢಾಕಾ: ಬಾಂಗ್ಲಾದೇಶದ ವಿಶ್ವವಿದ್ಯಾಲಯದಲ್ಲಿ ಗೋಮಾಂಸದ ಅಡುಗೆ ವಿಚಾರವಾಗಿ ವಿವಾದ

ಬಂಟ್ವಾಳ: ಸಿಡಿಲು ಬಡಿದು ಮನೆಗೆ ಭಾಗಶಃ ಹಾನಿ

ಕರೇನಾಡ ಕಮ್ಮೆನ ಯೂಟ್ಯೂಬ್ ಚಾನೆಲ್‌ನಲ್ಲಿ ‘ಕಟೀಲ ಕಣ್ಮಣಿ’ ವಿಶೇಷ ಕಲಾಕೃತಿ ಬಿಡುಗಡೆ…!

ಮಂಗಳೂರು: ಮಂಗಳೂರಿನ ಚರ್ಚ್ ಫಾದರ್ ವಿರುದ್ಧ ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಕರಣ ದಾಖಲು

error: Content is protected !!