ಕರಾವಳಿ

ಮಂಗಳೂರು: ಮಂಗಳೂರಿನಲ್ಲಿ ಪುಣೆ ಗ್ಯಾಸ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭ…!

ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳ ಅನಿಲ ವ್ಯವಸ್ಥೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪುಣೆ ಗ್ಯಾಸ್ ಸಂಸ್ಥೆಯು ಮಂಗಳೂರಿನಲ್ಲಿ ತನ್ನ ನೂತನ ಪುಣೆ ಗ್ಯಾಸ್ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಿಸಿದೆ. ಇದು ಸಂಸ್ಥೆಯ 10ನೇ ಅನುಭವ ಕೇಂದ್ರವಾಗಿದ್ದು, ಕರ್ನಾಟಕದಲ್ಲಿ ಎರಡನೇ ಕೇಂದ್ರವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಸಂಸ್ಥೆಯ ಎಕ್ಸ್‌ಪೀರಿಯನ್ಸ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ.

ಮಂಗಳೂರು ಉರ್ವ ಮಾರಿಗುಡಿ ಸಮೀಪದ ಲೋಟಸ್ ಅಥರ್ವ ವಾಣಿಜ್ಯ ಸಂಕೀರ್ಣದಲ್ಲಿರುವ ವಿಂದ್ಯಾ ಅಪ್ಲಯನ್ಸ್‌ನಲ್ಲಿ ನೂತನ ಕೇಂದ್ರ ಕಾರ್ಯನಿರ್ವಹಿಸಲಿದೆ. ಪುಣೆ ಗ್ಯಾಸ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮತ್ತು ಸಿಇಒ ಜೇಸಲ್ ಸಂಪತ್ ಅವರು ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಂದ್ಯಾ ಅಪ್ಲಯನ್ಸ್‌ನ ನಿತ್ಯಾನಂದ ಪೈ ಹಾಗೂ ಮಂಗಳೂರಿನ ಹೋಟೆಲ್ ಉದ್ಯಮದ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ವಾಣಿಜ್ಯ ಅಡುಗೆ ಅನಿಲ ಬಳಕೆಯಲ್ಲಿ ಕ್ಷಮತೆ, ಸುರಕ್ಷತೆ ಮತ್ತು ನಿಖರ ಎಂಜಿನಿಯರಿಂಗ್ ತಂತ್ರಜ್ಞಾನ ಸೇವೆಗಳನ್ನು ಈ ಕೇಂದ್ರದ ಮೂಲಕ ಮಂಗಳೂರಿಗೆ ವಿಸ್ತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋಟೆಲ್, ಆತಿಥ್ಯ, ಮತ್ಸ್ಯೋದ್ಯಮ ಮತ್ತು ಆಹಾರ ಸಂಸ್ಕರಣೆಯಂತಹ ವೈವಿಧ್ಯಮಯ ಉದ್ಯಮಗಳು ಬೆಳವಣಿಗೆ ಹೊಂದಿವೆ. ಅನಿಲ ಆಧಾರಿತ ಉದ್ಯಮಗಳ ಸಂಖ್ಯೆಯೂ ಹೆಚ್ಚಿರುವುದರಿಂದ ವಹಿವಾಟು ವಿಸ್ತರಣೆಗೆ ಮಂಗಳೂರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜೇಸಲ್ ಸಂಪತ್, “ಅನಿಲ ಬಳಕೆಯ ಕ್ಷಮತೆಯನ್ನು ಹೆಚ್ಚಿಸುವ ಮೂಲಕ ಉದ್ಯಮಗಳು ತಮ್ಮ ಕಾರ್ಯಾಚರಣೆಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಪುಣೆ ಗ್ಯಾಸ್‌ನ ಎಂಜಿನಿಯರಿಂಗ್ ಪರಿಹಾರಗಳು ದೇಶಾದ್ಯಂತದ ಉದ್ಯಮಗಳಿಗೆ ವಾರ್ಷಿಕವಾಗಿ 1,400 ಕೋಟಿ ರೂ.ಗಳಿಗೂ ಹೆಚ್ಚಿನ ಉಳಿತಾಯಕ್ಕೆ ನೆರವಾಗಿವೆ. ಮಂಗಳೂರಿನ ಹಲವು ಪ್ರಮುಖ ಉದ್ಯಮಗಳಿಗೆ ಈಗಾಗಲೇ ಸಂಸ್ಥೆ ಸೇವೆ ನೀಡುತ್ತಿದ್ದು, ವಹಿವಾಟು ವಿಸ್ತರಣೆಯ ಉದ್ದೇಶದಿಂದ ನೂತನ ಅನುಭವ ಕೇಂದ್ರ ಆರಂಭಿಸಲಾಗಿದೆ” ಎಂದರು.

ವಿಂದ್ಯಾ ಅಪ್ಲಯನ್ಸ್‌ನ ನಿತ್ಯಾನಂದ ಪೈ ಮಾತನಾಡಿ, “ಕರ್ನಾಟಕದಲ್ಲಿ ಪ್ರತಿನಿತ್ಯ ಸರಾಸರಿ 850 ಮೆಟ್ರಿಕ್ ಟನ್ ಎಲ್‌ಪಿಜಿಗೆ ಬೇಡಿಕೆಯಿದೆ. ಇದು ಸುಮಾರು 44 ಸಾವಿರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಮಾನವಾಗಿದೆ. ಅನಿಲ ವಿತರಣೆ, ಸುರಕ್ಷತೆ ಮತ್ತು ಕ್ಷಮತೆ ಕ್ಷೇತ್ರದಲ್ಲಿ ಇದರಿಂದ ವಿಪುಲ ಅವಕಾಶಗಳಿವೆ. ಪುಣೆ ಗ್ಯಾಸ್‌ನ ವ್ಯವಸ್ಥೆಗಳು ಎಲ್‌ಪಿಜಿ ಬಳಕೆಯ ಕ್ಷಮತೆಯನ್ನು ಹೆಚ್ಚಿಸುವುದರ ಜೊತೆಗೆ ಅನಿಲ ವ್ಯರ್ಥವಾಗುವುದನ್ನು ತಡೆಯುತ್ತವೆ” ಎಂದು ತಿಳಿಸಿದರು.

ನೂತನ ಎಕ್ಸ್‌ಪೀರಿಯನ್ಸ್ ಸೆಂಟರ್‌ನಲ್ಲಿ ಪುಣೆ ಗ್ಯಾಸ್‌ನ ಡ್ರೈ ಟೈಪ್ ಎಲ್‌ಪಿಜಿ ವೆಪೊರೈಸರ್, ಎಲ್‌ಪಿ ಜೀನಿಯಸ್ ಸ್ಮಾರ್ಟ್ ಎಲ್‌ಪಿಜಿ ಸಿಸ್ಟಮ್, ಫ್ಯೂಯೆಲ್ ಫ್ಯೂಷನ್, ಲೀಕ್ ಚೆಕ್ ಮತ್ತು ಹ್ಯಾಂಡ್‌ಹೆಲ್ಡ್ ಸ್ನಿಫರ್, ಗ್ಯಾಸ್‌ಟ್ರೈನ್ ಪ್ರೆಷರ್ ರೆಗ್ಯುಲೇಷನ್ ಸಿಸ್ಟಮ್ ಸೇರಿದಂತೆ ವಿವಿಧ ತಂತ್ರಜ್ಞಾನ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಗ್ರಾಹಕರು ಈ ಉತ್ಪನ್ನಗಳನ್ನು ನೇರವಾಗಿ ವೀಕ್ಷಿಸಿ ಅವುಗಳ ಕಾರ್ಯವೈಖರಿ ಹಾಗೂ ಬಳಕೆಯ ವಿಧಾನವನ್ನು ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಉಡುಪಿ: ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಿಂದ ಡಾ. ಚಂದ್ರಶೇಖರ್ ಹೆಸರು ಕೈಬಿಟ್ಟಿರುವುದು ಖಂಡನೀಯ: ಸುನಿಲ್ ಕುಮಾರ್

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಸಂದರ್ಭದಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ. ಚಂದ್ರಶೇಖರ್ ಅವರ ಹೆಸರನ್ನು ಮೊದಲ ಪಟ್ಟಿಯಲ್ಲಿ…

3 hours ago

ದಕ್ಷಿಣ ಕನ್ನಡ: ಮಿಜಾರ್‌ನಲ್ಲಿ ಅಭಿಮಾನಿ ಬಸ್–ಸ್ಕೂಟರ್ ನಡುವೆ ಭೀಕರ ಅಪಘಾತ; ಸವಾರ ಗಂಭೀರ

ಮೂಡಬಿದಿರೆ ತಾಲೂಕಿನ ಮಿಜಾರ್‌ನಲ್ಲಿ ಅಭಿಮಾನಿ ಬಸ್ ಹಾಗೂ ಸ್ಕೂಟರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಂಗ್ ಸೈಡ್‌ನಲ್ಲಿ ಬಂದ…

3 hours ago

ಬಂಟ್ವಾಳ: ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ

ಶಾಲಾ ಶಿಕ್ಷಣ ಇಲಾಖೆ ಹಾಗೂ ಸಜೀಪಮೂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ 2026-27ನೇ ಸಾಲಿನ ಬಂಟ್ವಾಳ ತಾಲೂಕು…

3 hours ago

ಬಂಟ್ವಾಳ: ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ; ಗಂಭೀರ ಗಾಯಗೊಂಡಿದ್ದ ಸಹಸವಾರ ಸಾವು

ಮೋಟಾರ್‌ಸೈಕಲ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸಹಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಅಕ್ಟೋಬರ್ 30ರಂದು…

3 hours ago

ಮಂಗಳೂರು: ಮಂಗಳೂರಿನ ಕೊಟ್ಟಾರ ಇನ್ಫೋಸಿಸ್ ಕ್ಯಾಂಪಸ್ ಮಾರಾಟ: ಮುಕುಂದ್ ಎಂ.ಜಿ.ಎಂ. ರಿಯಾಲಿಟಿ ಖರೀದಿ

ಮಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಇನ್ಫೋಸಿಸ್ ಸಂಸ್ಥೆಯ ಕೊಟ್ಟಾರದಲ್ಲಿರುವ ಕ್ಯಾಂಪಸ್ ಮಾರಾಟವಾಗಿದೆ. ಅಕ್ಟೋಬರ್ 23ರಂದು…

8 hours ago

ಮಂಗಳೂರು: ರಾಜ್ಯೋತ್ಸವ ಪ್ರಶಸ್ತಿ: ದಕ್ಷಿಣ ಕನ್ನಡದ ಮೂವರು ಸಾಧಕರಿಗೆ ಗೌರವ

ಕರ್ನಾಟಕ ಸರ್ಕಾರ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾಧ್ಯಮ…

8 hours ago