ಧ್ವನಿ ಬೆಳಕು ಸಂಯೋಜಕರ ಒಕ್ಕೂಟ (ರಿ) ವತಿಯಿಂದ ಧ್ವನಿ ಬೆಳಕು ಕುಟುಂಬ ಸಂಗಮ ಹಾಗೂ ವಿವಿಧ ವಲಯಯಗಳ ಪ್ರಾಯೋಜಕತ್ವದಲ್ಲಿ ಇದೇ ಬರುವ ಅಗಸ್ಟ್ 13 ರ ಆದಿತ್ಯವಾರದಂದು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರ ಜೋಡುಮಾರ್ಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದೆ.
ಸಭಾ ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳ್ಳಿಪಾಡಿ ಉದ್ಘಾಟಿಸಲಿದ್ದು, ಸಭಾಧ್ಯಕ್ಷತೆಯನ್ನು ಧ್ವನಿ ಬೆಳಕು ಸಂಯೋಜಕ ಧನ್‍ರಾಜ್ ಶೆಟ್ಟಿ ವಹಿಸಲಿದ್ದಾರೆ.
ಇನ್ನೂ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ನ್ಯಾಯವಾದಿಗಳು ಹಾಗೂ ಒಕ್ಕೂಟದ ಸಲಹೆಗಾರ ಜಯರಾಮ್ ರೈ ಪಿ, ಧ್ವನಿ ವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ, ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಹರೀಶ್ ಎಂ ಆರ್, ಅನುರಾಧ ಕನ್‍ಸ್ರ್ಟಕ್ಷನ್ ಮಾಲಕರಾದ ಉಮೇಶ್ ಶೆಟ್ಟಿ ಬರ್ಕೆ, ಬಂಟ್ವಾಳ ವರ್ತಕರ ವಿವಿಧೋದ್ಧೇಶ ಸಹಕಾರಿ ಸಂಘ ನಿ. ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಮಂಗಳೂರಿನ ಸುಪ್ರೀಮ್ ಡೆಕೋರೇಟರ್ಸ್ ಲೈಟಿಂಗ್ ಮತ್ತು ಸೌಂಡ್ ಸಿಸ್ಟಮ್ಸ್ ಇದರ ಮೂಸ, ಮೆಲ್ಕಾರಿನ ಗುರುಜ್ಯೋತಿ ಶಾಮಿಯಾನದ ಮಾಲಕ ಲಯನ್ ಶ್ರೀನಿವಾಸ್ ಪೂಜಾರಿ, ಮಂಗಳೂರು ತಾಲೂಕಿನ ಧ್ವನಿ ಮತ್ತು ಬೆಳಕು ಮಾಲಕರ ಸಂಘ (ರಿ) ದ ಅಧ್ಯಕ್ಷ ಬೆನೆಟ್ ಡಿಸಿಲ್ವಾ, ಪುತ್ತೂರು ತಾಲೂಕಿನ ಧ್ವನಿ ಬೆಳಕು ಮತ್ತು ಶಾಮಿಯಾನದ ಮಾಲಕರ ಸಂಘ (ರಿ) ದ ಅಧ್ಯಕ್ಷ ಶ್ಯಾಮ್ ಮಂಜುನಾಥ್ ಪ್ರಸಾದ್, ಬೆಳ್ತಂಗಡಿ ತಾಲೂಕಿನ ಧ್ವನಿ ವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ (ರಿ) ದ ಅಧ್ಯಕ್ಷ ಚಂದ್ರಶೇಖರ್ ಎಂ, ಸುಳ್ಯ ತಾಲೂಕಿನ ಧ್ವನಿ ಬೆಳಕು ಮತ್ತು ಶಾಮಿಯಾನದ ಮಾಲಕರ ಸಂಘ (ರಿ) ದ ಅಧ್ಯಕ್ಷ ಶಿವ ಪ್ರಕಾಶ್, ಬಂಟ್ವಾಳದ ಧ್ವನಿ ಬೆಳಕು ಸಂಯೋಜಕರ ಒಕ್ಕೂಟ(ರಿ) ದ ಪ್ರಧಾನ ಕಾರ್ಯದರ್ಶಿ ಸಂತೋಷ್ ಸುವರ್ಣ ಭಾಗಿಯಾಗಲಿದ್ದಾರೆ. ಇನ್ನೂ ಈ ಸಭಾ ಕಾರ್ಯಕ್ರಮದಲ್ಲಿ ಊರ ಹಿರಿಯರಿಗೆ, ಯೋಧರಿಗೆ, ಒಕ್ಕೂಟದ ಹಿರಿಯ ಸದಸ್ಯರಿಗೆ ಮತ್ತು ಹಿರಿಯ ಕಾರ್ಮಿಕರಿಗೆ ಸನ್ಮಾನದ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಮಾರಂಭದಲ್ಲಿ ಬೆಳಗ್ಗೆ 9;30 ರಿಂದ ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಮಾಣಿ ವಲಯ ಇವರ ಪ್ರಾಯೋಜಕತ್ವದಲ್ಲಿ ಚಿಂತಾಮಣಿ ಡ್ಯಾನ್ಸ್ ಗ್ರೂಪ್ಸ್ ಕಡೇಶಿವಾಲಯ ಇವರಿಂದ ವಿವಿಧ ವಿನೋಧಾವಳಿಗಳೂ ನೆಡೆಯಲಿದ್ದು, ಬಳಿಕ ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ವಗ್ಗ ವಲಯ ಇವರ ಪ್ರಾಯೋಜಕತ್ವದಲ್ಲಿ ಥಂಡರ್ ಗೈಸ್ ಫೌಂಡೇಶನ್ (ರಿ) ಬಜಪೆ ಇವರಿಂದ ಡ್ಯಾನ್ಸ್ ವೈಭವ ರಂಗೇರಲಿದೆ.
ತದನಂತರ ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಬಿ.ಸಿ ರೋಡ್ ವಲಯ ಇವರ ಪ್ರಾಯೋಜಕತ್ವದಲ್ಲಿ ಜಿಲ್ಲೆಯ ಪ್ರಸಿದ್ಧಿ ಅತಿಥಿ ಕಲಾವಿದರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಸಿದ್ಧಕಟ್ಟೆ ವಲಯ ಇವರ ಪ್ರಾಯೋಜಕತ್ವದಲ್ಲಿ ಪೂಂಜಶ್ರೀ ಕಲಾತಂಡ ಸಿದ್ಧಕಟ್ಟೆ ಅಭಿನಯದ ಕುಸಲ್ದ ನೆಟ್ ಪೂರ ಅಸಲ್ದ ಎಂಬ ನಾಟಕ ಪ್ರದರ್ಶಗೊಳ್ಳಲಿದೆ.
ತದನಂತರದಲ್ಲಿ ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ವಿಟ್ಲ ವಲಯ ಇವರ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕ ಹಾಗೂ ಮನೋರಂಜನ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…