ಇತ್ತೀಚೆಗೆ ಕಾಡನ್ನ ತೊರೆದು ನಾಡಿಗೆ ಬರ್ತಿರೋ ಪ್ರಾಣಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗ್ತಾನೆ ಇದೆ. ಅದರಲ್ಲೂ ನಾಡಿಗೆ ಬರುವ ಪ್ರಾಣಿಗಳು ಕಾಡಿನಲ್ಲಿ ದರ್ಬಾರ್ ಮಾಡೋ ರೀತಿಯೇ ನಾಡಲ್ಲೂ ದರ್ಬಾರ್ ಮಾಡುತ್ತಿವೆ.
ಹೌದು, ಇಲ್ಲಿ ಒಂದು ಕಾಡಾನೆ ಅದೇ ರೀತಿ ಮಾಡಿದೆ. ತನ್ನದಲ್ಲದ ಏರಿಯಾದಲ್ಲಿ ತಾನೇ ಕಿಂಗ್ ಅಂದುಕೊAಡು ವಾಹನ ಸವಾರರಿಗೆ ಕಾಟ ಕೊಟ್ಟಿದೆ.
ಅಷ್ಟಕ್ಕೂ ಈ ಕಾಡಾನೆ ಏನು ಮಾಡಿದೆ ಅಂತ ಕೇಳ್ತೀರಾ ಹಾಗಿದ್ದರೆ ಹೇಳ್ತಿವಿ ಓದಿ, ಈ ಗಜರಾಜ ರಸ್ತೆಯಲ್ಲಿ ಬಂದು ನಿಂತು ನಾನೇ ಈ ರಸ್ತೆಗೆ ಕಿಂಗ್ ಅಂತಾ ಬರೋ ಗಾಡಿಗಳನ್ನ ಅಡ್ಡಗಟ್ಟಿ ನಿಂತ್ಬಿಟ್ಟಿದೆ. ಯಾರನ್ನೂ ಮುಂದೆ ಹೋಗೋಕೆ ಬಿಡ್ತಿಲ್ಲ. ನನ್ನನ್ನ ದಾಟಿ ಅದ್ಹೆಂಗೆ ಮುಂದೆ ಹೋಗ್ತೀರಾ ನೋಡ್ತೀನಿ ಅಂತಾ ಸವಾಲ್ ಹಾಕಿ ನಿಂತಿದೆ.
ಕೇರಳದ ಶೋಲಯಾರ್ ಬಳಿ ಒಂಟಿಸಲಗ ರಸ್ತೆಲೀ ದರ್ಬಾರ್ ಮಾಡ್ತಿದಿದೆ. ಒಂಟಿಸಲಗ ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ಅನೇಕ ಬಸ್‌ಗಳನ್ನ ತಡೆದಿದೆ. ಇನ್ನೂ ಅಚ್ಚರಿ ಎಂಬ0ತೆ ಆನೆಯೊಂದಿಗೆ ಚಾಲಕ ಮಾತನಾಡಿದ್ದು, ದಾರಿ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾನೆ. ಆಗಲೂ ಆನೆ ಜಗ್ಗದೇ ಇದ್ದಾಗ ಒಂದಷ್ಟು ಬಾರಿ ಆನೆಯನ್ನ ಗದರಿಸಿದ್ದಾನೆ. ಆದ್ರೂ ಕೂಡ ಆನೆ ಮಾತ್ರ ದಾರಿ ಬಿಟ್ಟುಕೊಟ್ಟಿಲ್ಲ. ಸ್ವಲ್ಪ ಸಮಯ ಕಳೆದ ಮೇಲೆ, ಇದಕ್ಕೂ ತನಗೂ ಸಂಬ0ಧವೇ ಇಲ್ಲ ಅನ್ನೋ ಹಾಗೆ, ಅಲ್ಲೇನೂ ನಡೆದೇ ಇಲ್ಲವೇನೋ ಅನ್ನೋ ಹಾಗೆ, ಆನೆ ತನ್ನ ಪಾಡಿಗೆ ತಾನು ಹೊರಟೋಗಿದೆ. ಅದೃಷ್ಟವಶಾತ್ ಆನೆ ಯಾರ ಮೇಲೂ ದಾಳಿ ನಡೆಸಿಲ್ಲ.
ಇನ್ನೂ ಈ ಗಜರಾಜ ರಸ್ತೆ ಮಧ್ಯೆ ದರ್ಬಾರ್ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…