ಕರಾವಳಿ

‘ಭಾರತದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಬಹಳ ಮುಖ್ಯ’: ಯದುವೀರ್ ಕೃಷ್ಣದತ್ತ ಒಡೆಯರ್

ಮೂಡುಬಿದಿರೆ: ನಾವು ಜಗತ್ತಿನಲ್ಲಿ ಅತಿ ಹೆಚ್ಚು ಯುವಜನತೆ ಇರುವ ದೇಶ. ನಮ್ಮ ಇಡೀ ಸಮಾಜದಲ್ಲಿ ಯುವ ಜನರು ಅತಿ ಹೆಚ್ಚು ಸ೦ಖ್ಯೆಯಲ್ಲಿದ್ದಾರೆ. ಆಧುನಿಕ ತ೦ತ್ರಜ್ಞಾನದ ಜೊತೆ ನಮ್ಮ ಸ೦ಸ್ಕತಿ ಪರ೦ಪರೆಯನ್ನು ಅರಿತು ಮುನ್ನಡೆದರೆ ಎಲ್ಲಾ ಸ್ಥರದಲ್ಲೂ ಭಾರತ ಶ್ರೀಮ೦ತ ದೇಶ ಆಗುವುದರಲ್ಲಿ ಯಾವ ಸ೦ದೇಹವೂ ಇಲ್ಲ ಎ೦ದು ಮೈಸೂರು ಸ೦ಸ್ಥಾನದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.

ಅವರು ಮೂಡುಬಿದಿರೆ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಯಲ್ಲಿ ನೂತನವಾಗಿನಿರ್ಮಾಣಗೊಂಡ ‘ರಾಜ’ ಸಭಾ೦ಗಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಉದ್ಘಾಟನೆಯ ನ೦ತರ ವಿದ್ಯರ‍್ಥಿಗಳೊ೦ದಿಗೆ ಸ೦ವಾದ ನಡೆಸಿದ ಅವರು ಸಮಾಜದಲ್ಲಿ ಯುವಜನತೆಯ ಪಾತ್ರ ಏನು ಎ೦ದು ವಿದ್ಯರ‍್ಥಿಯರ‍್ವ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ತ೦ತ್ರಜ್ಞಾನ ಕ್ಷೇತ್ರದಲ್ಲಿ ಅತಿ ಹೆಚ್ಚು ಸೈಬರ್ ಅಪರಾಧ ಆಗಲು ಕಾರಣ ನಮ್ಮ ನೈಜ ಬದುಕಿನಲ್ಲಿ ನಾವು ರೂಢಿಸಿಕೊ೦ಡು ಬ೦ದಿದ್ದ ಕಟ್ಟಳೆಗಳು ಆನ್ಲೆöÊನ್ ಲೋಕದಲ್ಲಿ ಇಲ್ಲ. ತ೦ತ್ರಜ್ಞಾನದ ಪ್ರಗತಿಯ ಜೊತೆಗೆ ಅದನ್ನು ದುರುಪಯೋಗಗೊಳಿಸದ೦ತೆ ನೀತಿಯನ್ನು ಜಾರಿಗೊಳಿಸುವ ಅವಶ್ಯಕತೆ ಇದೆ ಎ೦ದರು.


ನೂತನ ಶಿಕ್ಷಣ ನೀತಿಯ ಕುರಿತು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಾ ನಮ್ಮ ದೇಶದಲ್ಲಿ ನೂತನ ಶಿಕ್ಷಣ ನೀತಿಯ ಅವಶ್ಯಕತೆ ಇದೆ. ವಸಾಹತುಶಾಯಿಯನ್ನು ಎದುರಿಸಿಕೊ೦ಡು ಬ೦ದಿದ್ದ ನಮ್ಮ ದೇಶ ತದನ೦ತರವೂ ನಮ್ಮ ಜ್ಞಾನ ವಸಾಹತುಶಾಹಿಯ ಇತಿಹಾಸಕ್ಕೆ ಮಿತಿಗೊ೦ಡಿದೆ. ಹಾಗೆಯೇ ನಮ್ಮ ದೇಶದ ಇತಿಹಾಸವೂ ದೆಹಲಿ ಕೇ೦ದ್ರಿತವಾಗಿದ್ದು ರ‍್ನಾಟಕವನ್ನು ಆಳಿದ್ದ ಅನೇಕ ಅರಸುಮನೆತನದ ಇತಿಹಾಸ ನಮ್ಮಲ್ಲಿರುವ ಅನೇಕರಿಗೆ ತಿಳಿದೇ ಇಲ್ಲ. ನಮ್ಮ ಜ್ಞಾನವನ್ನು ವಿಸ್ತರಿಸಬೇಕಾದರೆ ಹೊಸ ವಿಚಾರಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯ ಅವಶ್ಯಕತೆ ತು೦ಬಾ ಇದೆ ಎ೦ದರು.


ಭಾರತೀಯ ಶಿಕ್ಷಣ ಪದ್ಧತಿ ಹಾಗೂ ವಿದೇಶಿ ಶಿಕ್ಷಣ ಪದ್ಧತಿಗೂ ಇರುವ ವ್ಯತ್ಯಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಯದುವೀರರು ಉತ್ತರಿಸುತ್ತಾ, ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ನಮ್ಮ ಸ೦ಸ್ಕöÈತಿ ಪರ೦ಪರೆಯನ್ನು ನಾವು ಕಲಿಯುತ್ತೇವೆ. ಇದು ನಮ್ಮ ಯಶಸ್ವೀ ಬದುಕಿಗೆ ಪೂರಕವಾಗಿದೆ. ವಿದೇಶಿ ಶಿಕ್ಷಣದಲ್ಲಿ ಒ೦ದು ಪಠ್ಯವನ್ನು ಅದರಲ್ಲಿ ಇದ್ದ ಹಾಗೆ ಕಲಿಯುವ ಅವಶ್ಯಕತೆ ಬೀಳುವುದಿಲ್ಲ. ಅದನ್ನು ಸೃಜನಾತ್ನಕ ರೀತಿಯಲ್ಲಿ ವಿಶ್ಲೇಷಿಸಲು ಅವಕಾಶ ಇದೆ. ಹೀಗೆ ಎರಡೂ ಶಿಕ್ಷಣ ಪದ್ಧತಿಗಳಲ್ಲೂ ತನ್ನದೇ ಆದ ಸಾಧಕ ಬಾಧಕಗಳಿವೆ ಎ೦ದರು.
ಇದೇ ಸಂರ‍್ಭದಲ್ಲಿ ನೀಟ್‌ನಲ್ಲಿ ಸಾಧನೆ ಮಾಡಿ ಪ್ರತಿಷ್ಠಿತ ಏಮ್ಸ್ ನಲ್ಲಿ ಪ್ರವೇಶ ಪಡೆದ ಸಾಧಕರು, ಜೆಇಇ ಮೂಲಕ ಪ್ರತಿಷ್ಠಿತ ಐಐಟಿ ಸ೦ಸ್ಥೆಗಳಿಗೆ ಸೇರಿದ ವಿದ್ಯಾರ್ಥಿಗಳು ಹಾಗೂ ಬರ‍್ಡ್ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಮೊದಲ ಹತ್ತು ರ‍್ಯಾಂಕ್ ಒಳಗೆ ಸ್ಥಾನವನ್ನು ಪಡೆದ ಪದವಿಪರ‍್ವ ಹಾಗೂ ಪ್ರೌಢ ಶಾಲಾ ವಿದ್ಯರ‍್ಥಿಗಳನ್ನು ಒಳಗೊ೦ಡ೦ತೆ ಒಟ್ಟು ೨೩ ವಿದ್ಯರ‍್ಥಿಗಳಿಗೆ ಅರಸರು ಸನ್ಮಾನ ಪತ,್ರ ನಗದು ನೀಡಿ ಗೌರವಿಸಿದರು.
ಬಳಿಕ ಅರಸು ಮನೆತನಕ್ಕೆ ನೀಡುವ ಗೌರವದಂತೆ ಅರಸರನ್ನು ನವಧಾನ್ಯ, ನವಫಲ, ನವಪುಷ್ಪ, ನವಭಕ್ಷ÷್ಯ, ಮಹಾವೀರ ಸ್ವಾಮಿಯ ಸ್ಮರಣಿಕೆ, ಐದೆಳೆ ಮಲ್ಲಿಗೆ ಹಾರ, ಹೊತ್ತಗೆ, ರೇಷ್ಮೆಶಾಲು ನೀಡಿ ಸನ್ಮಾನಿಸಲಾಯಿತು. ಅರಸರ ಸಾಧನೆಯನ್ನು ಗೌರವಿಸಿ ಹಾಡಿನ ಮೂಲಕ ಅಭಿವಂದನೆಯನ್ನು ಯಕ್ಷನೃತ್ಯದ ಮೂಲಕ ಸರ‍್ಪಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡುತ್ತಾ ಈ ನೆಲ, ಜಲ, ನಾಡು ನುಡಿಯ ರಕ್ಷಣೆಯಲ್ಲಿ ಮೈಸೂರು ಅರಸರ ಕೊಡುಗೆ ಅನನ್ಯವಾದುದು, ಅನುಪಮವಾದುದು. ಗುರುಕುಲ ಮಾದರಿಯಲ್ಲಿ ನಡೆಯಿತ್ತಿರುವ ಈ ಸಂಸ್ಥೆ ನಮ್ಮ ಪರ‍್ವ ಸರ‍್ಯರು ಹಾಕಿಕೊಟ್ಟ ದಾರಿಯಲ್ಲಿ ಭಜನೆ, ಧ್ಯಾನ, ಯೋಗ, ಕಂಪ್ಯೂಟರ್, ತಂತ್ರಜ್ಞಾನ, ಯಕ್ಷಗಾನ ದೊಂದಿಗೆ ವಿದ್ಯಾರ್ಥಿಗಳ ಸೃಜನಾತ್ಮಕ ಬೆಳವಣಿಗೆಗೆ ಬೇಕಾದ ಎಲ್ಲ ವಿಚಾರ ಧಾರೆಗಳೊಂದಿಗೆ ಸಾಗುತ್ತಿದೆ. ನ್ಯೂಟನ್ನ ಸಿದ್ಧಾಂತಗಳೊಂದಿಗೆ ವಿವೇಕಾನಂದರ ಚಿಂತನೆ ಇಲ್ಲಿ ಒಂದಾಗಿ ಸಾಗುತ್ತಿದೆ. ಆ ನಿಟ್ಟಿನಲ್ಲಿ ಮೈಸೂರಿನ ಅರಸು ಮನೆತನ ನಮಗೆ ರಾಜ ಮರ‍್ಗ ಹಾಕಿಕೊಟ್ಟಿದೆ ಅದಕ್ಕಾಗಿ ಆ ಅರಸು ಪೀಠಕ್ಕೆ ನಾವು ಅಭಾರಿಗಳು ಎಂದರು. ಉನ್ನತ ಶ್ರೇಣಿಯಲ್ಲಿ ಉತ್ತರ‍್ಣರಾಗಿ , ಅನುಪಮ ಸಾಧನೆಯೊಂದಿಗೆ ಈ ಸಂಸ್ಥೆಗೆ ಕರ‍್ತಿ ತಂದ ವಿದ್ಯರ‍್ಥಿಗಳನ್ನು ಅರಸರೇ ಗೌರವಿಸಿದ್ದು ವಿದ್ಯೆ ಎಲ್ಲರಿಂದಲೂ ಗೌರವಿಸಲ್ಪಡುತ್ತದೆ ಎಂಬ ಸತ್ಯವನ್ನು ಈಗಿನ ವಿದ್ಯರ‍್ಥಿಗಳಿಗೆ ಮನವರಿಕೆ ಮಾಡಿದ್ದು ಪರಿಶ್ರಮಿಗಳಿಗೆ ಹೊಸ ಚೈತನ್ಯ ಹುರುಪು ತುಂಬಲಿದೆ ಎಂದರು.
ಎರಡೆನೆಯ ಬಾರಿಗೆ ಶಾಸಕರಾಗಿ ಆಯ್ಕೆ ಆಗಿರುವ ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕರಾಗಿರುವ ಉಮಾನಾಥ ಕೋಟ್ಯಾನ್ ಅವರನ್ನು ಈ ಸ೦ರ‍್ಭದಲ್ಲಿ ಸನ್ಮಾನಿಸಲಾಯಿತು. ಇದೇ ಸಂರ‍್ಭದಲ್ಲಿ ಮೂಡುಬಿದಿರೆ ಪುರಸಭೆಯ ವ್ಯಾಪ್ತಿಯಲ್ಲಿ ಶೂನ್ಯ ತ್ಯಾಜ್ಯ ಕ್ಯಾ೦ಪಸ್ ಆಗಿ ಪರಿರ‍್ತನೆಗೊ೦ಡ ಪ್ರಥಮ ಅನುದಾನರಹಿತ ವಿದ್ಯಾ ಸ೦ಸ್ಥೆ ಎ೦ಬ ಘೋಷಣೆಗೆ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆ ಪಾತ್ರವಾಗಿದ್ದು ಆ ಘೋಷಣಾ ಪತ್ರವನ್ನು ಸ೦ಸ್ಥೆಯ ಪ್ರಾ೦ಶುಪಾಲರು ವಾಚಿಸಿದರು.
ಸ೦ಸ್ಥೆಯ ವಿದ್ಯಾರ್ಥಿನಿಯರು ಮೈಸೂರು ಸ೦ಸ್ಥಾನದ ಗೀತೆಯನ್ನು ಹಾಡಿದರು. ಸಂಸ್ಥೆಯ ಕಾರ‍್ಯರ‍್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಶೈಕ್ಷಣಿಕ ನರ‍್ದೇಶಕರಾದ ಡಾ| ಬಿ.ಪಿ ಸಂಪತ್ ಕುಮಾರ್ ವಂದಿಸಿದರು. ಶಿಕ್ಷಕಿ ಜಯಲಕ್ಷ್ಮೀ ಸಾಧಕ ವಿದ್ಯರ‍್ಥಿಗಳ ಪಟ್ಟಿಯನ್ನು ವಾಚಿಸಿದರು. ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕ ಡಾ| ವಾದಿರಾಜ ಕಲ್ಲೂರಾಯ ಕರ‍್ಯಕ್ರಮ ನಿರೂಪಿಸಿದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…

4 mins ago

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…

7 mins ago

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…

1 day ago

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…

1 day ago

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…

1 day ago

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…

2 days ago