ಚಲಿಸುತ್ತಿದ್ದ ವಿಮಾನದಲ್ಲಿ ಹಾಟ್ ಚಾಕೊಲೇಟ್ ಸರ್ವ್ ಮಾಡುವಾಗ 10 ವರ್ಷದ ಬಾಲಕಿ ಮೇಲೆ ಬಿದ್ದು, ಸುಟ್ಟು ಗಂಭೀರವಾಗಿ ಗಾಯಗೊಂಡಿರುವ ಘಟನೆ ‘ವಿಸ್ತಾರ’ ವಿಮಾನದಲ್ಲಿ ನಡೆದಿದೆ.
ಇದೀಗ ವಿಮಾನ ಸಂಸ್ಥೆ ‘ವಿಸ್ತಾರ’ ಗಾಯಗೊಂಡಿರುವ ಬಾಲಕಿ ಚಿಕಿತ್ಸೆಗೆ ತಗುಲುವ ಎಲ್ಲಾ ಖರ್ಚುಗಳ ಜವಾಬ್ದಾರಿ ತನ್ನದು ಎಂದು ವಿಮಾನ ಸಂಸ್ಥೆ ಹೇಳಿಕೊಂಡಿದೆ.
ಕಳೆದ ಬುಧವಾರ ವಿಸ್ತಾರ ಸಂಸ್ಥೆಯ UK25 ವಿಮಾನವು ದೆಹಲಿಯಿಂದ ಜರ್ಮನಿಯ ಫ್ರಂಕ್‌ಫುರ್ಟ್ಗೆ ಹೊರಟಿತ್ತು. ಇದೇ ವಿಮಾನದಲ್ಲಿ 10 ಬಾಲಕಿ ತನ್ನ ಪೋಷಕರೊಂದಿಗೆ ಪ್ರಯಾಣ ಮಾಡುತ್ತಿದ್ದಳು. ಬಾಲಕಿಯ ಪೋಷಕರು ಮಗಳಿಗೆ ಹಾಟ್ ಚಾಕೊಲೇಟ್ ನೀಡುವಂತೆ ವಿಮಾನದ ಸಿಬ್ಬಂದಿಗೆ ಹೇಳಿಕೊಂಡಿದ್ದಾರೆ. ಅಂತೆಯೇ ಚಾಕೊಲೇಟ್ ಸರ್ವ್ ಮಾಡಲು ವಿಮಾನದ ಸಿಬ್ಬಂದಿ ಅಲ್ಲಿಗೆ ಬಂದಿದ್ದರು. ಈ ವೇಳೆ ಆಕಸ್ಮಿಕವಾಗಿ ಹಾಟ್ ಚಾಕೊಲೇಟ್‌ನ ವಾಟರ್ ಆಕೆಯ ಮೇಲೆ ಬಿದ್ದಿದೆ.
ಕೂಡಲೇ ಆಕೆಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ಕರೆ ಮಾಡಲಾಗಿತ್ತು. ವಿಮಾನ ಫ್ರಂಕ್‌ಪುರ್ಟ್ನಲ್ಲಿ ಲ್ಯಾಂಡ್ ಆಗ್ತಿದ್ದಂತೆಯೇ, ಮೆಡಿಕಲ್ ಕೇರ್ ಟೀಂ ಅಲ್ಲಿಗೆ ಬಂದಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ಅಮ್ಮ ಕೂಡ ಆಸ್ಪತ್ರೆಗೆ ಬಂದಿದ್ದರು ಎಂದು ವಿಮಾನ ಸಂಸ್ಥೆ ಹೇಳಿಕೊಂಡಿದೆ.
ಘಟನೆ ನಡೆದು ಎರಡು ದಿನಗಳ ಬಳಿಕ ಟ್ವಿಟರ್‌ನಲ್ಲಿ ಈ ವಿಚಾರ ಸ್ಫೋಟಗೊಂಡಿತ್ತು. ರಚ್ನಾ ಗುಪ್ತಾ ಅನ್ನೋರು ಟ್ವೀಟ್ ಮಾಡಿ, ವಿಮಾನ ಸಂಸ್ಥೆಯ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ಘಟನೆ ಬಗ್ಗೆ ವಿಮಾನ ಸಂಸ್ಥೆ ಕನಿಷ್ಠ ವಿಷಾದ ಕೂಡ ವ್ಯಕ್ತಪಡಿಸಿಲ್ಲ ಎಂದು ಕಿಡಿಕಾರಿದ್ದರು. ಇದೀಗ ಪ್ರತಿಕ್ರಿಯಿಸಿರುವ ವಿಮಾನ ಸಂಸ್ಥೆ ವಿಸ್ತಾರ್.. ಕೂಡಲೇ ನಮ್ಮ ಸಿಬ್ಬಂದಿ ಘಟನೆಗೆ ಪ್ರತಿಕ್ರಿಯಿಸಿದ್ದಾರೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಿವಿ. ಆಕೆಗೆ ವೈದ್ಯಕೀಯ ವೆಚ್ಚಕ್ಕೆ ತಗಲುವ ಎಲ್ಲಾ ಖರ್ಚನ್ನು ಸಂಸ್ಥೆಯೇ ಬರಿಸಲಿದೆ ಎಂದು ಹೇಳಿಕೊಂಡಿದೆ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…