‘777 ಚಾರ್ಲಿ’ ಸಿನಿಮಾ ಮೂಲಕ ಮನುಷ್ಯ ಮತ್ತು ಶ್ವಾನ ಭಾಂದವ್ಯವನ್ನು ಪರದೆ ಮೇಲೆ ತಂದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ತನ್ನ ಪ್ರೀತಿಯನ್ನು ನೀಲಿ ಸಮುದ್ರದಾಚೆಗೆ ಹೇಳಲು ಹೊರಟಿದ್ದಾರೆ.
‘ಪ್ರೇಕ್ಷಕರಿಗೆ ‘ಸಪ್ತ ಸಾಗರದಾಚೆಗೆ ಎಲ್ಲೋ’ ಸಿನಿಮಾ ಮೂಲಕ ಮನು ಮತ್ತು ಪ್ರಿಯಾಳ ಅದ್ಭುತವಾದ ಪ್ರೇಮವನ್ನು ತೋರ್ಪಡಿಸಲು ಮುಂದಾಗಿದ್ದಾರೆ. ಹಾಗಾಗಿ ಸಿನಿಮಾದ ಟ್ರೈಲರ್ ಅನ್ನು ಚಿತ್ರತಂಡ ನಿನ್ನೆ ರಿಲೀಸ್ ಮಾಡಿದೆ.
ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ಸಿನಿಮಾವನ್ನ ಪ್ರೇಕ್ಷಕರ ಮನದಾಳಕ್ಕೆ ತಂದುಬಿಟ್ಟಿದ್ದ ಹೇಮಂತ್ ರಾವ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ‘ಕತ್ತೆ ನಂಗೆ ಮೊನ್ನೆ ಎಷ್ಟು ಒಳ್ಳೆ ಕನಸು ಬಿತ್ತು ಗೊತ್ತಾ’ ಎಂದು ಹೇಳುವ ಪ್ರಿಯಾಳ ಮಾತಿನಿಂದ ಆರಂಭವಾಗುವ ಟ್ರೈಲರ್, ಮನುವಿನ ಪ್ರೀತಿಯ ಬುತ್ತಿಯನ್ನು ಪರದೆಯ ಮೇಲೆ ಬಿತ್ತರಿಸುವಲ್ಲಿ ಹೇಮಂತ್ ರಾವ್ ಕೆಲಸ ಮಾಡಿದ್ದಾರೆ. ಸದ್ಯ ಮಾಡಿರುವ 2 ಸಿನಿಮಾಗಳಿಂತ ಭಿನ್ನ ಸಿನಿಮಾವನ್ನು ಪ್ರೇಕ್ಷಕರ ಮುಂದಿರಿಸುವ ಕನಸನ್ನ ಹೇಮಂತ್ ಕಟ್ಟಿಕೊಂಡಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಸೆಪ್ಟೆಂಬರ್ 1 ರಂದು ರಿಲೀಸ್ ಆಗಲಿದೆ.
ಚಿತ್ರತಂಡ 2 ಅವತರಣಿಕೆಯಲ್ಲಿ ಸಿನಿಮಾ ರಿಲೀಸ್ ಮಾಡಲಿದೆ. ಹಾಗಾಗಿ ಮೊದಲ ಪಾರ್ಟ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಬಾರಿ ರಕ್ಷಿತ್‌ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅವರು ಪ್ರಿಯ ಪಾತ್ರದಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೆ ಟೋಬಿ ಚಿತ್ರದ ನಾಯಕಿ ಚೈತ್ರಾ ಆಚಾರ್ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.ಅದ್ಬೈತ ಗುರುಮೂರ್ತಿ ಕ್ಯಾಮೆರಾ ಕೈಚಳದಲ್ಲಿ ‘ಸಪ್ತ ಸಾದರದಾಚೆ ಎಲ್ಲೋ’ ಸಿನಿಮಾ ಮೂಡಿ ಬಂದಿದೆ. ಚರಣ್ ರಾಜ್ ಸಂಗೀತ ಸಂಯೋಜನೆಯೊAದಿಗೆ ಸಮುದ್ರದ ಅಲೆಗಳು ಕೇಳಲಾರಂಭಿಸುತ್ತದೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…