ಮಂಗಳೂರು : ಸನ್ ಪ್ರೀಮಿಯಂ ರಿಫೈಂಡ್ ಸನ್ ಫ್ಲವರ್ ಆಯಿಲ್.. ಇದು ಭಾರತದ ಅಡುಗೆ ಎಣ್ಣೆಗಳ ಪೈಕಿ ಅತೀ ಮುಂಚೂಣಿಯಲ್ಲಿರುವ ಹಾಗೂ ಮಾರುಕಟ್ಟೆಯಲ್ಲಿ ಅತೀ ಬೇಡಿಕೆ ಇರುವ ಅಡುಗೆ ಎಣ್ಣೆ.. ಹೆಂಗೆಳೆಯರ ಆಪ್ತ ಮಿತ್ರ…
ಅನಘ ರಿಫೈನರೀಸ್ ಇದರ ಆಡಳಿತ ನಿರ್ದೇಶಕ ಶಾಂಭಶಿವ ರಾವ್ ಅವರ ಮಹಾ ದೊಡ್ಡ ಕೊಡುಗೆ. ಈಗಾಗಲೇ ಹಲವಾರು ಉದ್ಯಮಗಳನ್ನು ಮಂಗಗಳೂರಿಗೆ ಪರಿಚಯಿಸಿದ ಕೀರ್ತಿ ಇವರದು.. ಮಂಗಳೂರಿನ ಅಭಿವೃದ್ಧಿವಲ್ಲಿ ಶಾಂಭ ಶಿವ ರಾವ್ ಅವರ ಪಾತ್ರ ಮಹತ್ತರವಾದದ್ದು. ಹಲವಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿ, ಮಾನವೀಯತೆ ಮೆರೆದವರು ಶಾಂಭ ಶಿವ ರಾವ್ ಅವರದ್ದು.
ಇದೀಗ ಶಾಂಭ ಶಿವರಾವ್ ಅವರು, ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಹೌದು, ಪ್ರಕೃತಿಯ ಹಿತ ದೃಷ್ಠಿಯಿಂದ, ಮಾಲಿನ್ಯರಹಿತವಾದ ಎಲೆಕ್ಟ್ರಿಕ್ ಮೊಟಾರ್ ಗ್ರಾಹಕರಿಗೆ ಪರಿಚಯಿಸಲು ‘ಇಶ್ವ ಮೋಟರ್ಸ್’ ಸಜ್ಜಾಗಿ ನಿಂತಿದೆ. ಅಷ್ಟಕ್ಕೂ ಈ ಶೋ ರೂಂ ಎಲ್ಲಿದೆ ಅಂತೀರಾ ಹೇಳ್ತೀವಿ ಕೇಳಿ..
ಮಂಗಳೂರಿನ ಬಿಜೈ ಕಾಪಿಕಾಡ್‍ನ ಒಶಿಯನ್ ಪರ್ಲ್ ಮುಂಭಾಗದಲ್ಲಿ ಈಶ್ವ ಮೊಟರ್ಸ್ ಶುಭಾರಂಭಗೊಂಡಿದೆ. ಈ ಶೋ ರೂಂನ್ನು ಎನ್.ಎಂ.ಪಿ.ಎ ಚಾಯರ್‌ಮ್ಯಾನ್ ಡಾ. ವೆಂಕಟರಮಣ ಅಕ್ಕರಾಜು ರಿಬ್ಬನ್ ಕಟ್ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು. ಬಳಿಕ ಶಾಂಭ ಶಿವ ರಾವ್ ಅವರ ಧರ್ಮಪತ್ನಿ ಸತ್ಯ ವಾಣಿ ಅವರು ದೀಪ ಬೆಳಗುವ ಮೂಲಕ ಸರಳ ಸಮಾರಂಭಕ್ಕೆ ಚಾಲನೆ ನೀಡಿದರು..
ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಎನ್.ಎಂ.ಪಿ.ಎ ಇದರ ಚೇರ್ ಮ್ಯಾನ್ ಡಾ. ವೆಂಕಟರಮಣ ಅಕ್ಕರಾಜು, ದಕ್ಷಿಣ ಭಾರತದ ಖ್ಯಾತ ಚಿತ್ರನಟ ತನಿಕೆಲಾ ಭರಣಿ, ಡೀಲರ್ ಡೆವಲಪ್ಮೆಂಟ್ ಇದರ ಮುಖ್ಯಸ್ಥ ಅನಿಂದ್ಯಾ ಮಿತ್ರ ಇವರುಗಳು ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.
ಬಳಿಕ ಅನಘ ರಿಪೈನರೀಸ್ ಇದರ ಆಡಳಿತ ನಿರ್ದೇಶಕ ಶಾಂಭ ಶಿವರಾವ್ ಮಾತಾನಾಡುತ್ತಾ..ವೇದವ್ಯಾಸ್ ಕಾಮತ್ ರವರು ನನ್ನ ಎಲ್ಲಾ ಯೋಜನೆಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭ ಝೋನಲ್ ಸೇಲ್ಸ್ ಮ್ಯಾನೇಜರ್ ಪ್ರಾಣೇಶ್ ಎಸ್, ರೀಜನಲ್ ಸೇಲ್ಸ್ ಮ್ಯಾನೇಜರ್ ಇಂದ್ರಾನಿಲ್ ದತ್ತ, ಶಾಂಭಶಿವ ರಾವ್ ಅವರ ಕುಟುಂಬಸ್ಥರು ಜೊತೆಗಿದ್ದರು. ಇದೇ ವೇಳೆ ಶೋ ರೂಂನಲ್ಲಿ ಸಾಂಕೇತಿಕವಾಗಿ ಮೊದಲ ಗ್ರಾಹಕರಿಗೆ ವಾಹನಗಳನ್ನು ವಿತರಿಸಿಲಾಯಿತು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…