ಭಾರತದ ಚಂದ್ರಯಾನ-3ಗೆ ಟಕ್ಕರ್ ಕೊಡಲು ರಷ್ಯಾ ವಿಜ್ಞಾನಿಗಳು ಲಾಂಚ್ ಮಾಡಿದ್ದ ಲೂನಾ-25 ಮಿಷನ್ ಲ್ಯಾಂಡಿಂಗ್ ವೇಳೆ ಚಂದ್ರನ ಮೇಲ್ಮೈಗೆ ಅಪ್ಪಳಿಸಿ ಪತನಗೊಂಡಿದೆ. ಸದ್ಯ ಪತನಗೊಂಡಿರುವುದಕ್ಕೆ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕಾಸ್ಮಾಸ್ನ ಮುಖ್ಯಸ್ಥ, ಯುರಿ ಬೋರಿಸೋವಾ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.

ಅಲ್ಲದೇ ಕಳೆದ 50 ವರ್ಷಗಳಿಂದ ಚಂದ್ರ ಬಗ್ಗೆ ರಷ್ಯಾ ಯಾವುದೇ ಕಾರ್ಯಕ್ರಮ ಕೈಗೊಳ್ಳದಿರುವುದೇ ಇದಕ್ಕೆ ಮುಖ್ಯ ಕಾರಣ ಕಿಡಿ ಕಾರಿದ್ದಾರೆ.

ರಾಸ್ಕಾಸ್ಮಾಸ್ನ ಮುಖ್ಯಸ್ಥ, ಯುರಿ ಬೋರಿಸೋವಾ ಟಿವಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಕಳೆದ 50 ವರ್ಷಗಳಿಂದ ರಷ್ಯಾ ಚಂದ್ರನ ಬಗ್ಗೆ ಯಾವುದೇ ಸಂಶೋಧನೆ ಅಥವಾ ಮಿಷನ್ ಉಡಾವಣೆ ಮಾಡುವ ಕಾರ್ಯಕ್ರಮ ಕೈಗೊಂಡಿಲ್ಲ. 1960 ರಿಂದ 1970ರ ವರೆಗೆ ನಮ್ಮ ವಿಜ್ಞಾನಿಗಳ ಅನುಭವವನ್ನು ಹೊಂದಲು ನಮಗೆ ಸಾಧ್ಯವಾಗಲಿಲ್ಲ. ಅಲ್ಲದೇ ಲೂನಾ-25 ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗುವ ವೇಳೆ 84 ಸೆಕೆಂಡುಗಳ ಬದಲಿಗೆ 127 ಸೆಕೆಂಡುಗಳ ವೇಗದಲ್ಲಿ ಚಲಿಸಿದ್ದರಿಂದ ಕ್ರ್ಯಾಶ್ ಆಯಿತು. ಈ ಎಲ್ಲ ಕಾರಣಗಳಿಂದ ಲೂನಾ-25 ಯೋಜನೆ ವಿಫಲವಾಗಲು ಮುಖ್ಯ ಕಾರಣ ಎಂದು ಯುರಿ ಬೋರಿಸೋವಾ ಹೇಳಿದ್ದಾರೆ.



