ಜನ ಮನದ ನಾಡಿ ಮಿಡಿತ

Advertisement

ಚಂದ್ರಯಾನ ಲೂನಾ-25 ಪತನ; ರಷ್ಯಾ ಎಡವಿದ್ದೆಲ್ಲಿ ಅನ್ನೋ ರಹಸ್ಯ ಬಿಚ್ಚಿಟ್ಟ ರಾಸ್​ಕಾಸ್ಮಾಸ್​ ಮುಖ್ಯಸ್ಥ

ಭಾರತದ ಚಂದ್ರಯಾನ-3ಗೆ ಟಕ್ಕರ್ ಕೊಡಲು ರಷ್ಯಾ ವಿಜ್ಞಾನಿಗಳು ಲಾಂಚ್​ ಮಾಡಿದ್ದ ಲೂನಾ-25 ಮಿಷನ್ ಲ್ಯಾಂಡಿಂಗ್ ವೇಳೆ ಚಂದ್ರನ ಮೇಲ್ಮೈಗೆ ಅಪ್ಪಳಿಸಿ ಪತನಗೊಂಡಿದೆ. ಸದ್ಯ ಪತನಗೊಂಡಿರುವುದಕ್ಕೆ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್​ಕಾಸ್ಮಾಸ್​ನ ಮುಖ್ಯಸ್ಥ, ಯುರಿ ಬೋರಿಸೋವಾ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.

ಅಲ್ಲದೇ ಕಳೆದ 50 ವರ್ಷಗಳಿಂದ ಚಂದ್ರ ಬಗ್ಗೆ ರಷ್ಯಾ ಯಾವುದೇ ಕಾರ್ಯಕ್ರಮ ಕೈಗೊಳ್ಳದಿರುವುದೇ ಇದಕ್ಕೆ ಮುಖ್ಯ ಕಾರಣ ಕಿಡಿ ಕಾರಿದ್ದಾರೆ.

ರಾಸ್​ಕಾಸ್ಮಾಸ್​ನ ಮುಖ್ಯಸ್ಥ, ಯುರಿ ಬೋರಿಸೋವಾ ಟಿವಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಕಳೆದ 50 ವರ್ಷಗಳಿಂದ ರಷ್ಯಾ ಚಂದ್ರನ ಬಗ್ಗೆ ಯಾವುದೇ ಸಂಶೋಧನೆ ಅಥವಾ ಮಿಷನ್ ಉಡಾವಣೆ ಮಾಡುವ ಕಾರ್ಯಕ್ರಮ ಕೈಗೊಂಡಿಲ್ಲ. 1960 ರಿಂದ 1970ರ ವರೆಗೆ ನಮ್ಮ ವಿಜ್ಞಾನಿಗಳ ಅನುಭವವನ್ನು ಹೊಂದಲು ನಮಗೆ ಸಾಧ್ಯವಾಗಲಿಲ್ಲ. ಅಲ್ಲದೇ ಲೂನಾ-25 ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗುವ ವೇಳೆ 84 ಸೆಕೆಂಡುಗಳ ಬದಲಿಗೆ 127 ಸೆಕೆಂಡುಗಳ ವೇಗದಲ್ಲಿ ಚಲಿಸಿದ್ದರಿಂದ ಕ್ರ್ಯಾಶ್ ಆಯಿತು. ಈ ಎಲ್ಲ ಕಾರಣಗಳಿಂದ ಲೂನಾ-25 ಯೋಜನೆ ವಿಫಲವಾಗಲು ಮುಖ್ಯ ಕಾರಣ ಎಂದು ಯುರಿ ಬೋರಿಸೋವಾ ಹೇಳಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!