ತೀರ್ಥಂಕರರ ಪರಂಪರೆಯಲ್ಲಿ 23ನೆಯವರಾದ ಭ| ಪಾರ್ಶ್ವನಾಥ ಸ್ವಾಮಿ ಮೋಕ್ಷ ಪಡೆದ ದಿನ, 2780ನೇ ನಿರ್ವಾಣ ಮಹೋತ್ಸವ (ಮೋಕ್ಷ ಕಲ್ಯಾಣ) ಮೂಡುಬಿದಿರೆ ಗುರುಗಳ ಬಸದಿ ಹಾಗೂ ಶ್ರೀ ದಿಗಂಬರ ಜೈನ ಮಠದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿನಡೆಯಿತು.

ಗುರುಬಸದಿಯಲ್ಲಿ ಬೆಳಗ್ಗೆ 6.35ಕ್ಕೆ 12 ಅಡಿಯ ಚಂಡೋಘ್ರ ಪಾರ್ಶ್ವನಾಥ ಮೂರ್ತಿ ಜಲ, ಎಳನೀರು, ಕ್ಷೀರ, ಅಷ್ಟಗಂಧ ಸಹಿತ ಮಸ್ತಕಾಭಿಷೇಕ, ಸರ್ವಮಂಗಳ ಸದಸ್ಯೆಯರು, ಶ್ರಾವಿಕೆಯರು ಅಷ್ಟ ವಿಧಾರ್ಚನೆ ಸಹಿತ ಮಹಾ ಅರ್ಘ್ಯ ಎತ್ತಿ ಅರಹಂತ, ಸಿದ್ಧ ಜಿನೇಂದ್ರ ಪೂಜೆ ಸಲ್ಲಿಸಿ, ಜಪದೊಂದಿಗೆ ಮಹಾ ಮಂಗಳ ಆರತಿ ಸ್ವಾಮೀಜಿ ಮಂಗಲ ಆಶೀರ್ವಚನ ವಿತ್ತು ಪಾರ್ಶ್ವನಾಥ ಸ್ವಾಮಿಯ ಗುಣ ವಿಶೇಷ ತಿಳಿಸಿದರು. ಭಾರತೀಯ ಅಂಚೆ ಇಲಾಖೆಯ ಅಸ್ಸಾಮ್ ನಿರ್ದೇಶಕ ಅಭಿಷೇಕ್ ಜೈನ್ ದಂಪತಿಯನ್ನು ಸ್ವಾಮೀಜಿ ಪುರಸ್ಕರಿಸಿ ಹರಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಸಹಿತ ಸ್ಥಳೀಯರು, ಮಹಾರಾಷ್ಟ್ರ ಮಧ್ಯಪ್ರದೇಶ, ಅಸ್ಸಾಂನ ಶ್ರಾವಕ, ಶ್ರಾವಿಕೆಯರು ಪಾಲ್ಗೊಂಡಿದ್ದರು.



