ಜನ ಮನದ ನಾಡಿ ಮಿಡಿತ

Advertisement

ತೀರ್ಥಂಕರರ ಪರಂಪರೆಯಲ್ಲಿ 23ನೆಯವರಾದ ಭ| ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಕಲ್ಯಾಣ

ತೀರ್ಥಂಕರರ ಪರಂಪರೆಯಲ್ಲಿ 23ನೆಯವರಾದ ಭ| ಪಾರ್ಶ್ವನಾಥ ಸ್ವಾಮಿ ಮೋಕ್ಷ ಪಡೆದ ದಿನ, 2780ನೇ ನಿರ್ವಾಣ ಮಹೋತ್ಸವ (ಮೋಕ್ಷ ಕಲ್ಯಾಣ) ಮೂಡುಬಿದಿರೆ ಗುರುಗಳ ಬಸದಿ ಹಾಗೂ ಶ್ರೀ ದಿಗಂಬರ ಜೈನ ಮಠದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿನಡೆಯಿತು.

ಗುರುಬಸದಿಯಲ್ಲಿ ಬೆಳಗ್ಗೆ 6.35ಕ್ಕೆ 12 ಅಡಿಯ ಚಂಡೋಘ್ರ ಪಾರ್ಶ್ವನಾಥ ಮೂರ್ತಿ ಜಲ, ಎಳನೀರು, ಕ್ಷೀರ, ಅಷ್ಟಗಂಧ ಸಹಿತ ಮಸ್ತಕಾಭಿಷೇಕ, ಸರ್ವಮಂಗಳ ಸದಸ್ಯೆಯರು, ಶ್ರಾವಿಕೆಯರು ಅಷ್ಟ ವಿಧಾರ್ಚನೆ ಸಹಿತ ಮಹಾ ಅರ್ಘ್ಯ ಎತ್ತಿ ಅರಹಂತ, ಸಿದ್ಧ ಜಿನೇಂದ್ರ ಪೂಜೆ ಸಲ್ಲಿಸಿ, ಜಪದೊಂದಿಗೆ ಮಹಾ ಮಂಗಳ ಆರತಿ ಸ್ವಾಮೀಜಿ ಮಂಗಲ ಆಶೀರ್ವಚನ ವಿತ್ತು ಪಾರ್ಶ್ವನಾಥ ಸ್ವಾಮಿಯ ಗುಣ ವಿಶೇಷ ತಿಳಿಸಿದರು. ಭಾರತೀಯ ಅಂಚೆ ಇಲಾಖೆಯ ಅಸ್ಸಾಮ್‌ ನಿರ್ದೇಶಕ ಅಭಿಷೇಕ್‌ ಜೈನ್‌ ದಂಪತಿಯನ್ನು ಸ್ವಾಮೀಜಿ ಪುರಸ್ಕರಿಸಿ ಹರಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಸಹಿತ ಸ್ಥಳೀಯರು, ಮಹಾರಾಷ್ಟ್ರ ಮಧ್ಯಪ್ರದೇಶ, ಅಸ್ಸಾಂನ ಶ್ರಾವಕ, ಶ್ರಾವಿಕೆಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

error: Content is protected !!