ಸಾಮಾನ್ಯವಾಗಿ ಭಕ್ತರು ದೇವರಿಗೆ ಹಲವು ರೀತಿಯಲ್ಲಿ ಹರಕೆ ಕಟ್ಟಿಕೊಂಡಿರುತ್ತಾರೆ. ಕೆಲವರು ಹಣದ ರೂಪದಲ್ಲಿ ಕೊಟ್ಟರೆ, ಇನ್ನು ಕೆಲವರು ದವಸ-ಧಾನ್ಯ ರೂಪದಲ್ಲಿ ಹರಕೆ ನೀಡುತ್ತಾರೆ. ಆದರೆ ಇಲ್ಲೊಬ್ಬ ಯುವಕ ದೇವರಿಗೆ ರಿವರ್ಸ್ ಟ್ರ‍್ಯಾಕ್ಟರ್ ಓಡಿಸುವ ಹರಕೆ ಕಟ್ಟಿಕೊಂಡಿದ್ದು, ಇದೀಗ ಅದರಂತೆಯೇ ಈ ಹರಕೆಯನ್ನು ಮಾಡಿ ತೀರಿಸಿದ್ದಾನೆ.
ಹೌದು. 25 ವರ್ಷದ ಶಿವನಗೌಡ ಪಾಟೀಲ್ ಎಂಬ ಯುವಕ ಉಳುವಿ ಚನ್ನಬಸವೇಶ್ವರ ದೇವರಿಗೆ ಹರಕೆ ಐದು ವರ್ಷದ ಹಿಂದೆಯೇ ಈ ಹರಕೆಯನ್ನು ಕಟ್ಟಿಕೊಂಡಿದ್ದನು. ಅದರಂತೆಯೇ ನಿನ್ನೆ ದೇವರಿಗೆ ಹರಕೆ ಈಡೇರಿಸಿದ್ದಾನೆ.
16 ತಾಸಿನಲ್ಲಿ 174 ಕಿಮೀ ರಿವರ್ಸ್ ಟ್ರ‍್ಯಾಕ್ಟರ್ ಚಲಾಯಿಸುವ ಮೂಲಕಜ ಎಲ್ಲರನ್ನು ಬೆರಗುಗೊಳಿಸಿದ್ದಾನೆ.
ಶಿವನಗೌಡ ಪಾಟೀಲ್ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕನ್ನೂರು ಗ್ರಾಮದಿಂದ ಉಳುವಿಗೆ ರಿವರ್ಸ್ ಟ್ರ‍್ಯಾಕ್ಟರ್ ಚಲಾಯಿಸಿಕೊಂಡು ಹೋಗಿದ್ದಾನೆ. ಹಗಲು ರಾತ್ರಿ ಎನ್ನದ ಸತತವಾಗಿ ಹಿಂಬದಿಯಿAದ ಡ್ರೈವಿಂಗ್ ಮಾಡಿ ಸಾಹಸ ಮೆರೆದಿದ್ದಾನೆ.
ಟ್ರ‍್ಯಾಕ್ಟರ್ ಎಂಜಿನ್ ಚಲಾಯಿಸುವುದೇ ಕಷ್ಟಕರ ಅಂತದ್ರಲ್ಲಿ ಟೇಲರ್ ಸಮೇತ ಪ್ರಯಾಣ ಮಾಡಿದ್ದಾನೆ. ಯುವಕನ ಈ ದಿಟ್ಟ ಸಾಹಸಕ್ಕೆ ಊರಿನ ಹಾಗೂ ತಾಲೂಕಿನ ಜನರು ಫಿದಾ ಆಗಿದ್ದಾರೆ. ಶಹಬ್ಬಾಷ್ ಇದಪ್ಪಾ ಭಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…