ಜನ ಮನದ ನಾಡಿ ಮಿಡಿತ

Advertisement

ಬಂಗಲೆಗಾಗಿ ಸರ್ಕಾರಿ ಜಾಗ ಒತ್ತುವರಿ ಆರೋಪ; ನಟ ಪ್ರಕಾಶ್​​ ರಾಜ್​​ ಸ್ಪಷ್ಟನೆ

 ತಮಿಳುನಾಡಿನ ಕೊಡೈಕೆನಾಲ್‌ ವಿಲ್‌ಪಟ್ಟಿ ಪಂಚಾಯತ್‌ನಲ್ಲಿ ಬಂಗಲೆ ನಿರ್ಮಿಸಲು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡ ಆರೋಪ ಬಹುಭಾಷಾ ನಟ ಪ್ರಕಾಶ್​​ ರಾಜ್​​ ವಿರುದ್ಧ ಕೇಳಿ ಬಂದಿದೆ.

ಹೀಗಾಗಿ ಈ ಸಂಬಂಧ ವಿವರಣೆ ನೀಡಿ ಎಂದು ಪ್ರಕಾಶ್ ರಾಜ್​​ಗೆ ಕೊಡೈಕೆನಾಲ್ ವಲಯ ಉಪ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಸದ್ಯ ತನ್ನ ಮೇಲಿನ ಆರೋಪಕ್ಕೆ ನಟ ಪ್ರಕಾಶ್​​ ರಾಜ್​ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರೋ ನಟ ಪ್ರಕಾಶ್​​ ರಾಜ್​​, ಆಪಾದಿಸಿದವರು ಆಪಾದನೆ ಮಾಡಿದ್ದಾರೆ. ವಿವರಣೆ ಕೇಳಲೇಬೇಕಾದ ಅಧಿಕಾರಿಗಳು ವಿವರಣೆ ಕೇಳಿದ್ದಾರೆ. ನನ್ನ ಬಳಿ ಇರೋ ಅಧಿಕೃತ ದಾಖಲೆ ಪತ್ರಗಳನ್ನು ಕೊಟ್ಟಿದ್ದೇನೆ. ನಿಜ ಗೊತ್ತಾಗಲಿ, ಸ್ವಲ್ಪ ಕಾಯಿರಿ ಎಂದು ತನ್ನನ್ನು ಟ್ರೋಲ್​ ಮಾಡಿದವರಿಗೆ ಸ್ಪಷ್ಟನೆ ನೀಡಿದ್ದಾರೆ.

ಭಾರತೀಪುರಂ ಅಣ್ಣಾನಗರ ಗ್ರಾಮದಲ್ಲಿ ಪ್ರಕಾಶ್ ರಾಜ್​ಗೆ ಪಟ್ಟಾ ಜಮೀನು ಇದೆ. ಪಂಚಾಯಿತಿಯಿಂದ ಅನುಮತಿ ಪಡೆಯದೆ ಬಂಗಲೆ ನಿರ್ಮಿಸಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಪೇತುಪರೈ ಗ್ರಾಮದ ಅಧ್ಯಕ್ಷ ಕೆ.ವಿ ಮಹೇಂದ್ರನ್ ಎಂಬುವರು ಪ್ರಕಾಶ್ ರಾಜ್ ವಿರುದ್ಧ ಈ ಆರೋಪ ಮಾಡಿದ್ದಾರೆ. ಬಂಗಲೆ ನಿರ್ಮಿಸಲು ಪೇತುಪರೈ ಮತ್ತು ಭಾರತಿಪುರಂ ಅಣ್ಣಾನಗರ ಬಳಿಯ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಕೂಡ ಪಡೆದಿಲ್ಲ. ಸಾರ್ವಜನಿಕ ರಸ್ತೆ ಅತಿಕ್ರಮಿಸಿ ಬಂಗೆಲೆ ನಿರ್ಮಿಸಿದ್ದಲ್ಲದೇ ಯಾರಿಗೂ ಓಡಾಟ ನಡೆಸಲು ಅವಕಾಶ ನೀಡಿಲ್ಲ ಎಂದು ದೂರಲಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

error: Content is protected !!