ಇಂಡಿಯಾ ಇನ್ಮುಂದೆ ಭಾರತ.. ದೇಶದ ಮರುನಾಮಕರಣದ ವಿಚಾರ ಕೇವಲ ಭಾರತದಲ್ಲಷ್ಟೇ ಅಲ್ಲ ಪಾಕಿಸ್ತಾನದಲ್ಲೂ ಬಹಳಷ್ಟು ಚರ್ಚೆಯಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಡಿಯಾ ಅನ್ನೋ ದೇಶದ ಹೆಸರನ್ನು ಭಾರತ್ ಎಂದು ಬದಲಾಯಿಸಲಿದೆ ಎನ್ನಲಾಗಿದೆ.
ಈ ಮರುನಾಮಕರಣದ ವಿವಾದಕ್ಕೆ ದೇಶಾದ್ಯಂತ ಪರ, ವಿರೋಧದ ಚರ್ಚೆಯಾಗುತ್ತಿದೆ. ಇನ್ನೂ ಭಾರತದ ಸಂಸತ್‌ನಲ್ಲಿ ಮರುನಾಮಕರಣದ ವಿಚಾರವೇ ಪ್ರಸ್ತಾಪವಾಗಿಲ್ಲ. ಸಂವಿಧಾನದಲ್ಲಿ ತಿದ್ದುಪಡಿಯೂ ಆಗಿಲ್ಲ. ಅಷ್ಟರಲ್ಲಾಗಲೇ ಇಂಡಿಯಾ ಮೇಲೆ ನೆರೆರಾಷ್ಟ್ರ ಪಾಕಿಸ್ತಾನದ ಕಣ್ಣು ಬಿದ್ದಿದೆ.
ಒಂದು ವೇಳೆ ದೇಶದ ಹೆಸರನ್ನು ಭಾರತ ಬದಲಾವಣೆ ಮಾಡಿದರೆ ಇಂಡಿಯಾ ಹೆಸರಿನ ಮೇಲೆ ಹಕ್ಕು ಸಾಧಿಸಲು ಪಾಕಿಸ್ತಾನ ಚಿಂತನೆ ನಡೆಸಿದೆ. ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಇಂಡಿಯಾ ಬದಲು ಭಾರತ ಎಂದು ಮಾನ್ಯತೆ ಸಿಕ್ಕರೆ ಆಗ ಪಾಕಿಸ್ತಾನ ತನ್ನ ಹಕ್ಕು ಮಂಡಿಸಲು ಮುಂದಾಗಿದೆ. ಪಾಕಿಸ್ತಾನ ಕೂಡ ಇಂಡಸ್ ನದಿಯ ಪಾತ್ರದಲ್ಲಿದೆ. ಹೀಗಾಗಿ ಇಂಡಿಯಾ ಹೆಸರಿನ ಮೇಲೆ ಹಕ್ಕು ಸಾಧಿಸಲು ಪಾಕಿಸ್ತಾನ ಮಂಡಿಸುವ ಸಾಧ್ಯತೆ ಇದೆ.
ಭಾರತಕ್ಕೆ ಸ್ವಾತಂತ್ರ್ಯ ಸಿಗೋ ಮುನ್ನವೇ ಪಾಕಿಸ್ತಾನದ ಪಿತಾಮಹ ಮಹಮ್ಮದ್ ಅಲಿ ಜಿನ್ನಾ ಅವರು ಇಂಡಿಯಾ ಹೆಸರಿಗೆ ವಿರೋಧ ವ್ಯಕ್ತಪಡಿಸಿದ್ದರು. ನಮ್ಮದು ಪಾಕಿಸ್ತಾನ, ಇಂಡಿಯಾ ಹಿಂದೂಸ್ತಾನ. ಭಾರತವನ್ನು ಹಿಂದೂಸ್ತಾನ ಎಂದು ಕರೆಯಬೇಕೇ ವಿನಃ ಇಂಡಿಯಾ ಅಲ್ಲ ಎಂದು ಮಹಮ್ಮದ್ ಅಲಿ ಜಿನ್ನಾ ಹೇಳಿದ್ದರು. ಆದರೆ ಸಂವಿಧಾನದ ರಚನಾ ಸಭೆಯಲ್ಲಿ ಇಂಡಿಯಾ ಹಾಗೂ ಭಾರತ ಎಂದು ಹೆಸರಿಡಲು ಹೆಚ್ಚು ವೋಟ್ ಹಾಕಲಾಯಿತು. ಹೀಗಾಗಿ ಸಂವಿಧಾನದ ಆರ್ಟಿಕಲ್ 1 ರಲ್ಲಿ ಇಂಡಿಯಾ ಅಂದರೆ ಭಾರತವು ರಾಜ್ಯಗಳ ಒಕ್ಕೂಟ ಎಂದು ಉಲ್ಲೇಖಿಸಲಾಗಿದೆ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…