ಮೂಡುಬಿದಿರೆ ಕರಾವಳಿ ಮಾತ್ರವಲ್ಲ ನಾಡಿನಲ್ಲೇ ವಿಶೇಷ ಎನ್ನಬಹುದಾದ ಯಕ್ಷಗಾನೀಯ ಹಿನ್ನೆಲೆಯ ಶ್ರೀ ಕೃಷ್ಣ ವೇಷಧಾರಿಯೇ ಮೊಸರ ಕುಡಿಕೆಗಳನ್ನು ಚಕ್ರಾಯುಧದಿಂದ ಒಡೆಯುವ ವಿಶೇಷ ಮೊಸರು ಕುಡಿಕೆ ಉತ್ಸವ ಗುರುವಾರ ಮೂಡುಬಿದಿರೆಯಲ್ಲಿ ನಡೆಯಲಿದೆ.
ಪೇಟೆಯ ರಾಜಬೀದಿಗೆ ಅಡ್ಡಲಾಗಿ ಕಟ್ಟುವ ಹಗ್ಗಗಳಲ್ಲಿ ತೂಗುವ ಮೊಸರ ಕುಡಿಕೆಗಳನ್ನು ಶ್ರೀಕೃಷ್ಣನೇ ಇಲ್ಲಿ ಯಕ್ಷಗಾನೀಯ ಚೆಂಡೆ ಮದ್ದಳೆ ಜಾಗಟೆಯ ಹಿಮ್ಮೇಳಕ್ಕೆ ಕುಣಿದು ಹಗ್ಗ ಜಗ್ಗಾಡುತ್ತಾ ಸತಾಯಿಸುವವರನ್ನೂ ಮಣಿಸಿ ಜಿಗಿದು ಮಡಿಕೆಗಳನ್ನು ಚಕ್ರಾಯುಧದಿಂದ ಒಡೆಯುವ ಸೊಬಗು ಬೇರೆಲ್ಲೂ ಕಾಣದ ವಿಶೇಷತೆ.
ಶತಮಾನ ಪೂರೈಸಿ ಮುನ್ನಡೆದಿರುವ ಈ ವಿಶಿಷ್ಟ ಉತ್ಸವ ಇಲ್ಲಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಪೂರಕವಾಗಿ ನಡೆದು ಬಂದಿದೆ.
ಪೇಟೆಯಲ್ಲಿ ಉತ್ಸವಕ್ಕೆ ಪೂರಕವಾಗಿ ಸಾಂಸ್ಕೃತಿಕ ಕಲಾಪಗಳು ರಾಜಬೀದಿಯನ್ನು ರಂಗೇರಿಸಲು ಸಜ್ಜಾಗಿ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್: ಪೇಟೆಯ ಕೆನರಾ ಬ್ಯಾಂಕ್ ಜಂಕ್ಷನ್ ಬಳಿ ತನ್ನ 37 ನೇ ವರ್ಷದ ಸಾಂಸ್ಕೃತಿಕ ಕಲಾಪಕ್ಕೆ ಮುಂದಾಗಿರುವ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಬೆಳಿಗ್ಗೆ ಭಜನಾ ಕಾರ್ಯಕ್ರಮ,ಸ್ಯಾಕ್ರೋಫೋನ್ ವಾದನ, ಸಂಗೀತ ಗಾನ ಸಂಭ್ರಮ ಹಮ್ಮಿಕೊಂಡಿದೆ. ಸಂಜೆ ವಿಶ್ರಾಂತ ಪ್ರಾಚಾರ್ಯ, ಕಂಬಳ ವಿದ್ವಾಂಸ ಕೆ. ಗುಣಪಾಲ ಕಡಂಬ ಅವರಿಗೆ ಶ್ರೀ ಕೃಷ್ಣ ಪ್ರಶಸ್ತಿ ಪ್ರದಾನ ದ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ಗಣ್ಯರ ಕೂಡುವಿಕೆಯಲ್ಲಿ ನಡೆಯಲಿದೆ.
ನ್ಯೂಸೆಂಟ್ರಲ್ ಫ್ರೆಂಡ್ಸ್ ಸರ್ಕಲ್ ಪೇಟೆಯ ಶ್ರೀ ಹನುಮಂತ ದೇವಸ್ಥಾನದ ಬಳಿ ಅಪರಾಹ್ನ 3ರಿಂದ ಸಂಗೀತ ರಸಮ೦ಜರಿ ನೃತ್ಯ ಕಾರ್ಯಕ್ರಮ ಹಮ್ಮಿಕೊ೦ಡಿದೆ. ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್: ಕೃಷ್ಣತ್ಸವ: ಜವನೆರ್‌ಬೆದ್ರ ಸಂಘಟನೆ ಇಲ್ಲಿನ ನಿಶ್ಮಿತಾ ಸರ್ಕಲ್ ಬಳಿ ಕೃಷ್ಣತ್ಸವ ಹಮ್ಮಿಕೊಂಡಿದೆ. ಸಂಜೆ 5ರಿಂದ ಯಕ್ಷ-ಗಾನ ವೈಭವ, ಯಕ್ಷಗಾನ ಸಂಘಟಕ ಎಂ.ದೇವಾನಂದ ಭಟ್ ಅವರಿಗೆ ಸಮ್ಮಾನ, ಬಳಿಕ ಶ್ರೀಕೃಷ್ಣಾಂತರಂಗ ಯಕ್ಷಗಾನ ಪ್ರದರ್ಶನವಿದೆ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…
ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…
ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…
ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…
ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…
ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…