ಸಾಲೆತ್ತೂರು; ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ಇಂದು ಕ್ರೈಸ್ತರು ಬಾಂಧವರು ಅದ್ದೂರಿಯಾಗಿ ಮೊಂತಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಅಂತೆಯೇ ಸಾಲೆತ್ತೂರಿನ ನಿತ್ಯಾಧರ್ ಚರ್ಚ್ ನಲ್ಲಿ ಮೊಂತಿ ಹಬ್ಬ ನಡೆದಿದ್ದು, ಫಾದರ್ ಅರ್ವಿನ್ ರವರು ಹಬ್ಬದ ಬಲಿ ಪೂಜೆಯನ್ನು ನೆರವೇರಿಸಿದ್ರು.

ದೇವಪುತ್ರ ಏಸುಕ್ರಿಸ್ತರಿಗೆ ಭೂಮಿಯ ಅವತಾರಕ್ಕೆ ಅವಕಾಶ ಕಲ್ಪಿಸಿದ ಮಹಾಮಾತೆ ಮೇರಿಯಮ್ಮನ ಜನ್ಮದಿನವಾಗಿದ್ದು, ಈ ಹಿನ್ನಲೆಯಲ್ಲಿ ಚರ್ಚ್ ಗಳಲ್ಲಿ ಬಲಿ ಪೂಜೆ, ಹೊಸತೆನೆ ವಿತರಣೆ, ಕಬ್ಬು ವಿತರಣೆ, ಮೆರವಣಿಗೆ, ಧಾರ್ಮಿಕ ವಿಧಿವಿಧಾನದ ಮೂಲಕ ಮೇರಿ ಮಾತೆಗೆ ನಮನ ಸಲ್ಲಿಸಿದ್ದಾರೆ.

ದೇವ ಮಾತೆ ಎಂದೇ ಕರೆಯಲ್ಪಡುವ ಮೇರಿ ಮಾತೆಯ ಜನ್ಮದಿನವನ್ನು ಪ್ರಕೃತಿಯು ನೀಡಿರುವ ಕೊಡುಗೆಗಳಿಗಾಗಿ ಕೃತಜ್ಞತೆ ಸಲ್ಲಿಸುವ ದಿನವಾಗಿ ಮೊಂತಿ ಫೆಸ್ತ್ ಆಚರಿಸುವುದು ಈ ದಿನದ ವಿಶೇಷವಾಗಿದೆ. ಕ್ರೈಸ್ತ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಹೊಸ ಅಕ್ಕಿಯ ಊಟ, ವೈವಿಧ್ಯಮಯ ಸಸ್ಯಹಾರಿ ಅಹಾರ ಖಾದ್ಯಗಳನ್ನು ಸವಿದು ಸಂಭ್ರಮಿಸುತ್ತಾರೆ.




