ಜನ ಮನದ ನಾಡಿ ಮಿಡಿತ

Advertisement

ಸಾಲೆತ್ತೂರಿನ ನಿತ್ಯಾಧರ್‌ ಚರ್ಚ್‌ ನಲ್ಲಿ  ಮೊಂತಿ ಹಬ್ಬ  ಆಚರಣೆ

ಸಾಲೆತ್ತೂರು; ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ಇಂದು  ಕ್ರೈಸ್ತರು ಬಾಂಧವರು ಅದ್ದೂರಿಯಾಗಿ ಮೊಂತಿ ಹಬ್ಬವನ್ನು  ಆಚರಣೆ ಮಾಡುತ್ತಿದ್ದಾರೆ. ಅಂತೆಯೇ ಸಾಲೆತ್ತೂರಿನ ನಿತ್ಯಾಧರ್‌ ಚರ್ಚ್‌ ನಲ್ಲಿ  ಮೊಂತಿ ಹಬ್ಬ ನಡೆದಿದ್ದು, ಫಾದರ್‌ ಅರ್ವಿನ್‌ ರವರು ಹಬ್ಬದ ಬಲಿ ಪೂಜೆಯನ್ನು ನೆರವೇರಿಸಿದ್ರು.

ದೇವಪುತ್ರ ಏಸುಕ್ರಿಸ್ತರಿಗೆ ಭೂಮಿಯ ಅವತಾರಕ್ಕೆ ಅವಕಾಶ ಕಲ್ಪಿಸಿದ ಮಹಾಮಾತೆ ಮೇರಿಯಮ್ಮನ ಜನ್ಮದಿನವಾಗಿದ್ದು, ಈ ಹಿನ್ನಲೆಯಲ್ಲಿ ಚರ್ಚ್ ಗಳಲ್ಲಿ ಬಲಿ ಪೂಜೆ, ಹೊಸತೆನೆ ವಿತರಣೆ, ಕಬ್ಬು ವಿತರಣೆ, ಮೆರವಣಿಗೆ,  ಧಾರ್ಮಿಕ ವಿಧಿವಿಧಾನದ ಮೂಲಕ ಮೇರಿ ಮಾತೆಗೆ ನಮನ ಸಲ್ಲಿಸಿದ್ದಾರೆ.

ದೇವ ಮಾತೆ ಎಂದೇ ಕರೆಯಲ್ಪಡುವ ಮೇರಿ ಮಾತೆಯ ಜನ್ಮದಿನವನ್ನು ಪ್ರಕೃತಿಯು ನೀಡಿರುವ ಕೊಡುಗೆಗಳಿಗಾಗಿ ಕೃತಜ್ಞತೆ ಸಲ್ಲಿಸುವ ದಿನವಾಗಿ ಮೊಂತಿ ಫೆಸ್ತ್ ಆಚರಿಸುವುದು ಈ ದಿನದ ವಿಶೇಷವಾಗಿದೆ. ಕ್ರೈಸ್ತ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಹೊಸ ಅಕ್ಕಿಯ ಊಟ, ವೈವಿಧ್ಯಮಯ ಸಸ್ಯಹಾರಿ ಅಹಾರ  ಖಾದ್ಯಗಳನ್ನು ಸವಿದು ಸಂಭ್ರಮಿಸುತ್ತಾರೆ.  

Leave a Reply

Your email address will not be published. Required fields are marked *

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

ಬಂಟ್ವಾಳ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮನೆಯಲ್ಲಿ ನಡೆದ ಕಳವು ಪ್ರಕರಣದ ಆರೋಪಿಗಳು ಸರೆ..!

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿಯವರ ಅವರ ಮುಖ್ಯ ಸಲಹೆಗಾರರನ್ನಾಗಿ ಸುನಿಲ್ ಕಾನುಗೋಲು ನೇಮಕ…!

ಮಂಗಳೂರು: ಕಲ್ಲುಗುಡ್ಡೆ ನಿವಾಸಿ ಅರ್. ಪೈನ್ ಮೆಹತಾಬ್ (18) ನಾಪತ್ತೆ..!

error: Content is protected !!