ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ಮಾನವೀಯ ಕಾರ್ಯ; ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಗೆ ಧನಸಹಾಯದ ನೆರವು

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯ ಔಷಧಿಯ ಖರ್ಚಿಗಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಧನ ಸಹಾಯ ಮಾಡಿ, ಮಾನವೀಯತೆ ಮೆರೆದಿದ್ದಾರೆ.

ಠಾಣೆಯ ಕೆಲಸಕ್ಕಾಗಿ ಬರುತ್ತಿದ್ದ ವನಿತಾ ಎಂಬ ಮಹಿಳೆಗೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ನೇತೃತ್ವದಲ್ಲಿ ಸುಮಾರು 27,000 ಸಾವಿರ ನಗದು ಹಣವನ್ನು ನೀಡಿ, ಸಹಾಯ ಹಸ್ತ ಚಾಚಿದ್ದಾರೆ.‌ ಬಂಟ್ವಾಳ ಪೇಟೆ ನಿವಾಸಿಯಾಗಿರುವ ವನಿತ ಅವರು ತೀರಾ ಬಡತನದ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದು, ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಶುಚಿತ್ವದ ಕೆಲಸ ಮಾಡುತ್ತಿದ್ದರು.


ಆದರೆ ವನಿತಾರವರು ಇತ್ತೀಚೆಗೆ ಮನೆಯ ಸಮೀಪ ಬಿದ್ದ ಪರಿಣಾಮ ಕೈ ಮೂಳೆ ಮುರಿತಕ್ಕೆ ಒಳಗಾಗಿ ಕೆಲಸಕ್ಕೆ ಬರಲು ಅಸಾಧ್ಯವಾಗಿತ್ತು.
ತೀರಾ ಬಡತನದಲ್ಲಿರುವ ವನಿತಾ ಅವರಿಗೆ ಕೆಲಸ ಮಾಡಿದರೆ ಮೂರು ಹೊತ್ತು ಊಟ ಎಂಬ ಪರಿಸ್ಥಿತಿ, ಹಾಗಾಗಿ ಕಳೆದ ಕೆಲವು ತಿಂಗಳ ಕಾಲ ದುಡಿಮೆ ಇಲ್ಲದೆ ಕಷ್ಟದ ಸ್ಥಿತಿಯಲ್ಲಿರುವ ವಿಚಾರ ಪೊಲೀಸರ ಗಮನಕ್ಕೆ ಬಂದಿತು.


ಇದೀಗ ಬಂಟ್ವಾಳ ಪೊಲೀಸರು ವನಿತಾ ಅವರ ಮನೆಯ ಖರ್ಚಿಗಾಗಿ ಠಾಣೆಯಲ್ಲಿ ಸಿಬ್ಬಂದಿಗಳಿಂದ ಒಟ್ಟುಗೂಡಿಸಿದ ನಗದು ಹಣವನ್ನು ಅವರಿಗೆ ಹಸ್ತಾಂತರ ಮಾಡಿ, ಮಾನವೀಯ ಕಾರ್ಯ ಮಾಡಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!