ಜನ ಮನದ ನಾಡಿ ಮಿಡಿತ

Advertisement

ಕೌಶಲ ಕರಗತ ಮಾಡಿಕೊಳ್ಳಿ; ಬೆಂಗಳೂರು ಇನ್ಫೋಸಿಸ್ ಬಿಪಿಎಂನ ಸಹ ಉಪಾಧ್ಯಕ್ಷ ಶೇಖರ್ ಗಣೇಶನ್

ಮೂಡಬಿದಿರೆ: ‘ವಿದ್ಯಾರ್ಥಿ ಜೀವನದಲ್ಲಿ ಹೆಚ್ಚುವರಿ ಕೌಶಲವನ್ನು ಕರಗತ ಮಾಡಿಕೊಳ್ಳಬೇಕು’ ಎಂದು ಬೆಂಗಳೂರು ಇನ್ಫೋಸಿಸ್ ಬಿಪಿಎಂನ ಸಹ ಉಪಾಧ್ಯಕ್ಷ ಶೇಖರ್ ಗಣೇಶನ್ ಹೇಳಿದರು.


ಇನ್ಫೋಸಿಸ್ ಬಿಪಿಎಂ ಹಮ್ಮಿಕೊಂಡ ‘ಕಲಿಕೆ ವೇಳೆ ಗಳಿಕೆ’ (ಅರ್ನ್ ವೈಲ್ ಲರ್ನ್) ಹಾಗೂ ಕರ‍್ಯಸ್ಥಳ (ವರ್ಕಸ್ಟೇಷನ್) ಸ್ಥಾಪನೆಯ ಕುರಿತ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ವಿದ್ಯಾರ್ಥಿ ಜೀವನದಲ್ಲಿ ಹೆಚ್ಚುವರಿ ಅವಧಿ ಪರಿಶ್ರಮ ಹಾಕುವುದರಿಂದ ಸ್ವಲ್ಪ ಒತ್ತಡ ಉಂಟಾಗಬಹುದು. ಆದರೆ, ಅದು ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ಆಗುತ್ತದೆ ಎಂದರು.ವಿದ್ಯಾರ್ಥಿಗಳಿಗೆ ನಾವು 18 ತಿಂಗಳು ಅರೆಕಾಲಿಕ ಕೆಲಸ ಮಾಡಲು ಅವಕಾಶ ಕಲ್ಪಿಸುತ್ತಿದ್ದು, ಈ ಬಗ್ಗೆ ಸಂದರ್ಶನ ನಡೆಸಲಿದ್ದೇವೆ. ಈ ಯೋಜನೆಯ ಮೂಲಕ ವಿದ್ಯಾರ್ಥಿ ನೆಲೆಯಲ್ಲಿಯೆ ದುಡಿಮೆಯ ಅವಕಾಶವನ್ನು ಪಡೆಯಬಹುದು. ಇದು ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಕೆಲಸದ ಮೇಲಿನ ಹಿಡಿತ ಹಾಗೂ ಹಣಕಾಸಿನ ಭದ್ರತೆಗೆ ಸಹಕಾರಿ ಎಂದರು.


ನಂತರ ತಂಡದ ಸದಸ್ಯರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಇನ್ಫೋಸಿಸ್ ಬಿಪಿಎಂನ ಕರ‍್ಯಸ್ಥಾನ ತೆರೆಯುವ ಕುರಿತು ಸ್ಥಳ ಪರಿಶೀಲನೆ ಹಾಗೂ ಚರ್ಚೆ ನಡೆಸಿದರು.

Leave a Reply

Your email address will not be published. Required fields are marked *

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

error: Content is protected !!