ಐಲೇಸಾದ ಮತ್ತು ಟೋಟಲ್ ಕನ್ನಡ ಲಾಂಛನದಡಿಯಲ್ಲಿ ಸಿರಿದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ಬಿಡುಗಡೆಗೆ ಸಿದ್ಧವಾಗಿದ್ದು, ತುಳು ಯಕ್ಷಗಾನ ಅಭಿಮಾನಿಗಳಿಗೆ ಈ ಪ್ರಸಂಗ ಅಚ್ಚಾಗಿ ಉಳಿಯಲಿದೆ ಎನ್ನುವುದು ಸಂತಸದ ವಿಷಯ.
ಐಲೇಸಾ ಮತ್ತು ಟೋಟಲ್ ಕನ್ನಡ ಈಗಾಗಲೇ ಹಲವು ಕೃತಿಗಳನ್ನು ಬಿಡುಗಡೆಗೊಳಿಸಿದ್ದು ಪುವೆಂಪು ನೂತ್ತೊಂಜಿ ನೆಂಪು, ತುಳು ಕವನ ಸಂಕಲನ, ತುಳು ನಾಟಕ, ಕಥಾಸಂಕಲನ ಹೀಗೆ ಹತ್ತು ಹಲವು, ಈಗ ಸಿರಿದೇವಿ ಮಹಾತ್ಮೆ ತುಳು ಯಕ್ಷ ಪದ ಸಂಕಲನ ಬಿಡುಗಡೆಗೆ ಸಜ್ಜಾಗಿದ್ದು ತುಳು ಯಕ್ಷಾಭಿಮಾನಿಗಳು ಸಂತಸ ಗೊಂಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸಾಧ್ಯವಾಗುವಾಗಲೆಲ್ಲಾ ಯಾವುದೇ ಆಡಂಬರವಿಲ್ಲದೆ ಸಾಹಿತ್ಯದ ಕೃಷಿ ಮಾಡುತ್ತಿರುವ ಐಲೇಸಾ ಈಗ “ದಿ. ಅಗರಿ ಶ್ರೀನಿವಾಸ ಭಾಗವತರ ಮೂಲ ದೇವಿ ಮಹಾತ್ಮೆ” ಯನ್ನು ದೇವದಾಸ ಈಶ್ವರಮಂಗಲ ತುಳುವಿಗೆ ಅನುವಾದಿಸಿದ್ದಾರೆ.
ಖ್ಯಾತ ಯಕ್ಷ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿಯವರು ಸಂಪಾದಿಸಿರುವ ಈ ಅಮೂಲ್ಯ ಸಂಪತ್ತನ್ನು ತುಳು ವರ್ಲ್ಡ್ ಮೀಡಿಯಾದ ಡಾ.ರಾಜೇಶ್ ಅಳ್ವ ಅವರು ಅಚ್ಚಿಸುವ ಅಭಿಲಾಷೆಯೊಂದಿಗೆ ಐಲೇಸಾದ ಮಡಿಲಿಗಿಟ್ಟಾಗ ಅದನ್ನು ಶ್ರೀದೇವಿ ಚಿತ್ತವೆಂದು, ಚಿತ್ತ ಪ್ರಸಾದವೆಂದೂ ಟೋಟಲ್ ಕನ್ನಡದ ಸಹಯೋಗದಲ್ಲಿ ಐಲೇಸಾ ಅಚ್ಚಿಸಿ ಈಗ ಪ್ರಕಟಿಸುತ್ತಿದೆ.
ಸೆಪ್ಟೆಂಬರ್ 30 ಶನಿವಾರ ಮಧ್ಯಾಹ್ನ 2 ಗಂಟೆಗೆ ಮಂಗಳೂರು ಪುರಭವನದಲ್ಲಿ ಶಾಸಕ ವೇದವ್ಯಾಸ ಕಾಮತ್ ಸಮಕ್ಷದಲ್ಲಿ ಲೋಕಾರ್ಪಣೆಯಾಗಲಿದೆ ಮತ್ತು ಪ್ರದರ್ಶನಗೊಳ್ಳಲಿದೆ
ಅಪೂರ್ವ ಪದ ಸಂಪತ್ತಿನ ಈ ಯಕ್ಷ ಪದ ತಮ್ಮೆಲರ ತನು ಮನ ತಂಪಾಗಿಸುವಲ್ಲಿ ಯಶಸ್ವಿಯಾಗಲಿ ಎನ್ನುವ ಪ್ರಾರ್ಥನೆಯೊಂದಿಗೆ ಸಿರಿ ದೇವಿ ಮಹಾತ್ಮೆಯನ್ನು ಯಕ್ಷ ಅಭಿಮಾನಿಗಳಿಗರ್ಪಿಸುತ್ತಿದ್ದೇವೆ ಎಂಬುದಾಗಿ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಸಿಯೂಟದ ಸಿಬ್ಬಂದಿಯೊಬ್ಬರ ಕೈ ವಿದ್ಯುತ್ ಚಾಲಿತ ತುರಿಮಣೆಯಲ್ಲಿ ಸಿಲುಕಿಕೊಂಡ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ…
ನಗರದ ಕೆಪಿಟಿ ಸಿಗ್ನಲ್ ಸಮೀಪ ರಸ್ತೆಯ ಮಧ್ಯಭಾಗದಲ್ಲೇ ಭಾರೀ ಗುಂಡಿಯೊಂದು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಅಪಾಯ ಎದುರಾಗಿದೆ. ಈ ಮಾರ್ಗದಲ್ಲಿ…
ಆಟಿ ಅಮಾವಾಸ್ಯೆಯ ಪವಿತ್ರ ದಿನದಂದು ಬಂಟ್ವಾಳ ತಾಲೂಕಿನ ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಿದ್ಧಿಯ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ…
ತುಳುಕೂಟ ಬಂಟ್ವಾಳ ಹಾಗೂ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ, ಬಿ.ಸಿ.ರೋಡು ಇದರ ಆಡಳಿತ ಮಂಡಳಿಯ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಆಟಿ…
ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು…
ಆಟಿ ಅಮಾವಾಸ್ಯೆಯ ಪ್ರಯುಕ್ತ ತಾಲೂಕಿನ ಪ್ರಸಿದ್ಧ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಬುಧವಾರ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ವಿವಿಧ ಧಾರ್ಮಿಕ…