ಜನ ಮನದ ನಾಡಿ ಮಿಡಿತ

Advertisement

ಗಾಂಧೀ ಜಯಂತಿಯ ಅಂಗವಾಗಿ ” ಸ್ವಚ್ಚತಾ ಹೀ ಸೇವಾ ” ಆಂದೋಲನದ ಅಡಿಯಲ್ಲಿ “ಬೃಹತ್ ಸ್ವಚ್ಛತಾ ಕಾರ್ಯಕ್ರಮ”

ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಮಂಗಳೂರು ಗ್ರಾಮ ಪಂಚಾಯತ್ ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ ( ರಿ) ಹಳೆಯಂಗಡಿ ಇದರ ನೇತೃತ್ವದಲ್ಲಿ ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್ (ರಿ), ಯುವತಿ ಮತ್ತು ಮಹಿಳಾ ಮಂಡಲ ಹಳೆಯಂಗಡಿ ಅಮಲ ಭಾರತ ಅಭಿಯಾನ, ಮಾತ ಅಮೃತನಂದ ಮಾಯಿ ಮಠ ಬೋಳೂರು, ಮಂಗಳೂರು ಆಟೋ ಫ್ರೆಂಡ್ಸ್ ಹಳೆಯಂಗಡಿ ಇದರ ಸಹಕಾರದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಗಾಂಧೀ ಜಯಂತಿಯ ಅಂಗವಾಗಿ ” ಸ್ವಚ್ಚತಾ ಹೀ ಸೇವಾ ” ಆಂದೋಲನದ ಅಡಿಯಲ್ಲಿ “ಬೃಹತ್ ಸ್ವಚ್ಛತಾ ಕಾರ್ಯಕ್ರಮ” ಇಂದು ದಿನಾಂಕ 01.10.2023 ರಂದು ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಹಳೆಯಂಗಡಿ ಮತ್ತು ಪಾವಂಜೆ ಮುಖ್ಯ ಪೇಟೆಯ ಬಸ್ಸು ನಿಲ್ದಾಣದ ಬಳಿ ಜರುಗಿತು.ಬಸ್ಸು ತಂಗುದಾಣದ ಸುತ್ತಮುತ್ತ ಇದ್ದ ಹುಲ್ಲು, ಪ್ಲಾಸ್ಟಿಕ್, ಕಸ ಕಡ್ಡಿಗಳನ್ನು ಸ್ವಚ್ಚ ಮಾಡಲಾಯಿತು. ನೀರಿನ ಟ್ಯಾಂಕರ್ ಬಳಸಿ ಬಸ್ಸು ತಂಗುದಾಣವನ್ನು ಗುಡಿಸಿ ಸ್ವಚ್ಛತೆ ಮಾಡಲಾಯಿತು. ನೀರು ನಿಲ್ಲುವ ಎಲ್ಲಾ ಕಡೆ ಸುಣ್ಣ ಹಾಕಿ ಸುಂದರಗೊಳಿಸಲಾಯಿತು.

ಈ ಅಭಿಯಾನದಲ್ಲಿ ಗ್ರಾಮ ಪಂಚಾಯತ್ ಹಳೆಯಂಗಡಿ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ, ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಿಕಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪ್ತಿ, ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ನಾಗೇಶ್ ಟಿ.ಜಿ, ಪ್ರಧಾನ ಕಾರ್ಯದರ್ಶಿ ಶ್ರೀ ಹಿಮಕರ್ ಕದಿಕೆ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯ ಅಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್, ಟ್ರಸ್ಟಿನ ಪ್ರದಾನ ಕಾರ್ಯದರ್ಶಿ ಶ್ರೀ ಸ್ಟ್ಯಾನಿ ಡಿ ಕೋಸ್ಟಾ , ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಮೋಹನ್ ಬಂಗೇರ, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ರಶ್ವಿತ, ಕಾರ್ಯದರ್ಶಿ ಕುಮಾರಿ ದಿವ್ಯಶ್ರೀ ಕೋಟ್ಯಾನ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ, ಕೋಶಾಧಿಕಾರಿ ರಾಜೇಶ್ವರಿ ರಾಮನಗರ, ಆಟೋ ಫೆಂಡ್ಸ್ ಇದರ ಅಧ್ಯಕ್ಷರಾದ ಶ್ರೀ ಮೋಹನ್ ಕುಮಾರ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿವರ್ಗ, ಯುವಕ, ಯುವತಿ ಮತ್ತು ಮಹಿಳಾ ಮಂಡಲದ ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಟೆಹ್ರಾನ್: ಖಮೇನಿ ಭೇಟಿಯಲ್ಲೇ ಹೊಸ ರಹಸ್ಯ! ‘ನೀವೇ ಖಮೇನಿಯೇ?’ ಎಂದು ಪ್ರಶ್ನಿಸಿದ ಇರಾನ್ ಅಧ್ಯಕ್ಷ…!

ಬ್ಯಾಂಕಾಕ್: ಥೈಲ್ಯಾಂಡ್ ಶಾಲೆಯಲ್ಲಿ ಗುಂಡಿನ ದಾಳಿ: ಶಿಕ್ಷಕ ಸಾವು, 15 ಮಂದಿಗೆ ಗಾಯ…!

ಬಂಟ್ವಾಳ: ಆಳ್ವಾಸ್ ಪ್ರಗತಿ-2026 ಉದ್ಯೋಗ ಮೇಳಕ್ಕೆ ಬಂಟ್ವಾಳದಿಂದ ಉಚಿತ ಬಸ್…!

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು ಅಪಘಾತ: ಒಂದೇ ಕುಟುಂಬದ ಆರು ಮಂದಿಗೆ ಗಾಯ…!

ಬಂಟ್ವಾಳ: ಬಿ.ಸಿ.ರೋಡ್ ಎನ್.ಜಿ. ಸರ್ಕಲ್‌ನಲ್ಲಿ ಭೀಕರ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತ್ಯು…!

ಮಂಗಳೂರು: ನ್ಯುಮೋನಿಯಾಗೆ 6ನೇ ತರಗತಿ ವಿದ್ಯಾರ್ಥಿನಿ ಬಲಿ

ಬಂಟ್ವಾಳ: ಬಿಸಿರೋಡು–ಅಡ್ಡಹೊಳೆ ಚತುಷ್ಪಥ ಕಾಮಗಾರಿ ನಿಂತಿಲ್ಲ: ಕೆಎನ್‌ಆರ್‌ಸಿಎಲ್ ಸ್ಪಷ್ಟನೆ

ವಾಷಿಂಗ್ಟನ್: ಟ್ರಂಪ್ ಸುಂಕಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕಂಪನಿಗಳಿಗೆ ಬಿಲಿಯನ್‌ಗಟ್ಟಲೆ ಮರುಪಾವತಿ..!

ಟೆಹ್ರಾನ್: ಮೊಜ್ತಬಾ ಖಮೇನಿ ಸಂಪರ್ಕಿಸುವುದು ಕಷ್ಟ; ಇರಾನ್ ಅಧ್ಯಕ್ಷರ ಬಹಿರಂಗ ಹೇಳಿಕೆ…!

error: Content is protected !!