“ಮಾಸ್ಟರ್ ಗೈಸ್”, ಕುಲಶೇಖರ್, ಕೈಕಂಬ ಮಂಗಳೂರು ಇವರಿಂದ ಕಲೆಯ ಮೂಲಕ ವಿಭಿನ್ನ ಪೂಜಾ ಕಾರ್ಯ ನಡೆದಿದೆ.

24ನೇ ವರ್ಷದ ಗಣೇಶ ಚತುರ್ಥಿ ಆಚರಣೆಯನ್ನು ವಿಘ್ನೇಶ್ವರ ದೇವರ ಪಾದಕಮಲಗಳಿಗೆ ಸಮರ್ಪಿತವಾದ ಸ್ವಯಂ ನಿರ್ಮಿತ ಕಲಾ ಯೋಜನೆ “ಕಾಡಿನಲ್ಲಿ ವಿಘ್ನೇಶ್ವರನ ಪೂಜೆ” ಮೂಲಕ ಅಚರಿಸಿದ್ದಾರೆ.

18 ಸದಸ್ಯರನ್ನು ಒಳಗೊಂಡ “ಮಾಸ್ಟರ್ ಗೈಸ್” ತಂಡ ಪ್ರತಿ ವರ್ಷ ವಿಶೇಷವಾಗಿ ಗಣಪನನ್ನು ಭಜಿಸುತ್ತಾರೆ. ಇದಕ್ಕೆ ಎಲ್ಲರೂ ಸಹಕಾರವನ್ನು ನೀಡುತ್ತಿದ್ದಾರೆ.

ಈ ಕೆಲಸಕ್ಕೆ ತಂಡ ಯಾರಿಂದಲೂ ದೇಣಿಗೆ ಪಡೆಯುವುದಿಲ್ಲ. ಐದನೇ ವರ್ಷದಲ್ಲಿ ತೆಂಗಿನಕಾಯಿಯಿ0ದ ಗಣಪನನ್ನು ತಯಾರಿಸಿ, ಹತ್ತನೇ ವರ್ಷವೂ ತೆಂಗಿನಕಾಯಿ0ದ ವಿಭಿನ್ನ ಶೈಲಿಯಲ್ಲಿ ಗಣಪನನ್ನು ತಯಾರಿಸಿದ್ದಾರೆ.

15ನೇ ವರ್ಷದಲ್ಲಿ ಎಲೆಕ್ಟ್ರಿಕಲ್ ಫ್ಲೆಕ್ಸಿಬಲ್ ಪೈಪುಗಳನ್ನು ಬಳಸಿ ಗಣಪನನ್ನು ಮಾಡಿದ್ದಾರೆ.

20 ನೇ ವರ್ಷದಲ್ಲಿ, 13 ಅಡಿ ಎತ್ತರದ ಗಣೇಶನನ್ನು 20,222 ಸಂಖ್ಯೆಯ ರುದ್ರಾಕ್ಷಿ ಬೀಟ್‌ಗಳಿಂದ ತಯಾರಿಸಲಾಗಿದೆ.




