ಬಂಟ್ವಾಳ: ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟ ಕಾರ್ಮಿಕನ ವಿವಾಹಕ್ಕೆ ಸರಕಾರದಿಂದ ಸಿಗುವ ಸಹಾಯಧನ ಪಡೆಯುವ ವಿಚಾರದಲ್ಲಿ ಕಾರ್ಮಿಕ ಇಲಾಖೆಯ ದ.ಕ.ಉಪವಿಭಾಗ-2 ರ ಕಾರ್ಮಿಕ ಅಧಿಕಾರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರು ಕೇಳಲಾದ ಪ್ರಶ್ನೆಗೆ ನೀಡಿರುವ ವಿಭಿನ್ನ ಉತ್ತರದಿಂದ ಕಾರ್ಮಿಕರು ಗೊಂದಲಕ್ಕೊಳಗಾಗಿದ್ದಾರೆ.
ವಿಶೇಷ ವಿವಾಹ ಅಧಿನಿಯಮ 1854 ಕಲಂ13 ರನ್ವಯ ವಿವಾಹ ನೋಂದಣಾಧಿಕಾರಿಯವರು ನೀಡಿರುವ ಮದುವೆ ಪ್ರಮಾಣಪತ್ರ ಮದುವೆ ಸಹಾಯಧನ ಪಡೆಯಲು ಸಲ್ಲಿಸಬಹುದೆ? ಎಂದು ಮಾಹಿತಿ ಹಕ್ಕುಕಾಯ್ದೆಯಡಿ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮದುವೆಯ ವಯಸ್ಸು ಹೆಣ್ಣಿಗೂ, ಗಂಡಿಗೂ 21ವರ್ಷ ಎಂಬರ್ಥದ ಉತ್ತರ ನೀಡಿದ್ದರು. 21 ವರ್ಷ ಆಗದೇ ಇದ್ದಲ್ಲಿ ಕಾಯ್ದೆಯಲ್ಲಿ ಮದುವೆಗೆ ಅವಕಾಶವೆ ಇಲ್ಲ ಎಂಬಂತೆ ಉತ್ತರ ನೀಡಲಾಗಿದ್ದು,ಈ ಉತ್ತರವು ಹಲವಾರು ಗೊಂದಲಗಳಿಗೆ ಕಾರಣವಾಗಿತ್ತು. ಇದಾದ ನಂತರ ಮತ್ತೋರ್ವ ಅರ್ಜಿದಾರರೋರ್ವರು ಇದೇ ಮಾದರಿಯ ಪ್ರಶ್ನೆಯನ್ನು ಅದೇ ಅಧಿಕಾರಿಗೆ ಮಾಹಿತಿಹಕ್ಕಿನಲ್ಲಿ ಕೇಳಿದ್ದರು.ಎರಡನೇ ಫಲಾನುಭವಿ ಸಲ್ಲಿಸಿದ ಅರ್ಜಿಗೆ ‘ಈ ಕಚೇರಿಯಲ್ಲಿ ಈ ಬಗ್ಗೆ ಯಾವುದೇ ದಾಖಲೆಗಳು ಇರುವುದಿಲ್ಲ’ ಎಂದು ಉತ್ತರಿಸಿದ್ದಾರೆ.
ಕಾರ್ಮಿಕ ಅಧಿಕಾರಿಯವರ ಈ ವಿಭಿನ್ನ ಉತ್ತರದಿಂದ ನೋಂದಾಯಿತು ಕಾರ್ಮಿಕರು ಸರಕಾರದ ಸವಲತ್ತು ಪಡೆಯುವಲ್ಲಿ ಗೊಂದಲಕ್ಕೊಳಗಾಗಿದ್ದಾರೆ.ಸರಕಾರವೇನೋ ದುಡಿಯುವ ಕಾರ್ಮಿಕ ವರ್ಗಕ್ಕೆ ಸವಲತ್ತುಗಳನ್ನು ನೀಡುತ್ತದೆ.ಆದರೆ ಅಧಿಕಾರಿಗಳು ಹಾಕುವಂತ ಕೊಕ್ಕೆಯಿಂದಾಗಿ ಸವಲತ್ತು ಫಲಾನುಭವಿಗಳಿಗೆ ತಲುಪುವಲ್ಲಿ ಸಾಧ್ಯವಾಗುತ್ತಿಲ್ಲ !
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…