ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡ್ ಬೈಪಾಸ್ ಬಳಿ ಮಹಿಳೆಯೊಬ್ಬರು ಪಕ್ಕದ ಮನೆಯ ಬಾವಿಗೆ ಹಾರಿ ಗುರುವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಮಹಿಳೆಯನ್ನು ಕಾರ್ನಾಡ್ ಬೈಪಾಸ್ ಬಳಿಯ ನಿವಾಸಿ ಲಿನೆಟ್ ರಂಜಿತಾ ಸೋನ್ಸ್(34) ಎಂದು ಗುರುತಿಸಲಾಗಿದೆ.
ಮೃತ ಮಹಿಳೆ ಲಿನೆಟ್ ರಂಜಿತಾ ಸೋನ್ಸ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಕೆ.ಎಂ.ಸಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ರಂಜಿತಾರವರು ಕೊರೊನಾ ಬಳಿಕ ಕೆಲಸದಿಂದ ನಿವೃತ್ತಿ ಪಡೆದಿದ್ದರು.
ಗುರುವಾರ ಬೆಳಿಗ್ಗೆ ಪಕ್ಕದ ಸಂಬಂಧಿಕರ ಮನೆಗೆ ತೆರಳಿದ್ದ ಅವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮನೆಗೆ ವಾಪಸಾಗಿದ್ದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪತಿ ಜೀವನ್ ರವರು ಅಕ್ಟೋಬರ್ ಒಂದರಂದು ವಾಪಸಾಗಿದ್ದು ಘಟನೆ ಸಂದರ್ಭ ಮನೆಯಲ್ಲಿದ್ದರು. ಮನೆಯವರು ರಂಜಿತಾರನ್ನು ಸಮಾಧಾನ ಪಡಿಸುತ್ತಿದ್ದಾಗಲೇ ಏಕಾಏಕಿ ಮನೆ ಹೊರಗಡೆ ಓಡಿಹೋಗಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬಾವಿಗೆ ಹಾರಿದ್ದರು. ಹಿಂದೆಯೇ ಓಡಿಹೋದ ಪತಿ ಜೀವನ್ ಕೊನೇ ಕ್ಷಣದಲ್ಲಿ ರಕ್ಷಿಸುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ.
ತಕ್ಷಣ ಕದ್ರಿ ಅಗ್ನಿಶಾಮಕ ದಳಕ್ಕೆ ಕರೆಸಿ ಪರಿಶಿಲಿಸಿದಾಗ ಫಲಕಾರಿಯಾಗದೆ ಮೃತಪಟ್ಟಿದ್ದರು. 65 ಅಡಿ ಆಳದ ಬಾವಿಯಲ್ಲಿ ಸುಮಾರು 23 ಅಡಿ ನೀರಿತ್ತು. ವಿವಿಧ ಪ್ರಯತ್ನ ನಡೆಸಿದರೂ ಆಕೆಯ ಶವ ಮೇಲೆತ್ತಲು ಅಸಾಧ್ಯವಾಗಿ ಅಗ್ನಿಶಾಮಕ ದಳದ ಸುರೇಶ್ ಶೆಟ್ಟ ಎಂಬವರು ಬಾವಿಗಿಳಿದು ನೀರಿನಲ್ಲಿ ಮುಳುಗಿ ಸುಮಾರು ಒಂದು ಗಂಟೆ ಹುಡುಕಾಡಿದ ಬಳಿಕ ಬಾವಿ ಅಡಿಭಾಗದಲ್ಲಿ ರಂಜಿತಾ ಶವ ಪತ್ತೆಯಾಗಿತ್ತು. ಈತನ್ಮಧ್ಯೆ ಮುಳುಗು ತಜ್ಞ ಈಶ್ವರ್ ಮಲ್ಪೆಯವರಿಗೆ ಕರೆ ಮಾಡಿ ಕರೆಸಲಾಗಿತ್ತು. ಅವರು ಉಚ್ಚಿಲ ತಲುಪುವಷ್ಟರಲ್ಲಿ ಸುರೇಶ್ ಶೆಟ್ಟಿಯವರು ಶವವನ್ನು ಮೇಲಕ್ಕೆತ್ತಿದ್ದರು.
ಕಾಪು ಪಾಂಗಾಳ ಉಳಿಯಾರಗೋಳಿ ಡೇವಿಡ್ ಸೋನ್ಸ್ರವರ ಪುತ್ರಿಯಾಗಿರುವ ರಂಜಿತಾರವರು ಪತಿಯ ಮನೆಯಲ್ಲಿ ಅತ್ತೆ ಮಾವನ ಜತೆ ವಾಸವಿದ್ದರು. ಸದಾ ಏಕಾಂತ ಬಯಸುವ ಅವರು ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…