ಜನ ಮನದ ನಾಡಿ ಮಿಡಿತ

Advertisement

ಕರಾವಳಿಗೆ ಅಪ್ಪಳಿಸುತ್ತಿದೆ ಭಾರೀ ಮಳೆ!! ಮುನ್ನೆಚ್ಚರಿಕಾ ಕ್ರಮ…

ದಕ್ಷಿಣ ಕನ್ನಡ : ಅರಬ್ಬಿ ಸಮುದ್ರದ ಕರಾವಳಿ ತೀರದ ಸಮೀಪ ಚಂಡಮಾರುತ ರೂಪುಗೊಂಡಿದ್ದು, ಕಡಲ ನಗರಿ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಮಳೆಯಾಗುತ್ತಿದ್ದು, ಮೋಡ ಮುಸುಕಿದ ವಾತಾವರಣವಿದೆ, ಕಳೆದೆರಡು ದಿನಗಳಿಂದ ಕರಾವಳಿಯ ಬಹುತೇಕ ಕಡೆಗಳಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗುತ್ತಿದ್ದು, ಕರಾವಳಿಯ ಹಲವು ಜಿಲ್ಲೆಗಳಲ್ಲಿ, ಸಿಡಿಲಿನ ಆಘಾತದಿಂದ ಹಾನಿಯಾದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ, ಹಲವು ಮನೆ ಕೊಟ್ಟಿಗೆಗಳು ಸಿಡಿಲಿನಿಂದ ಹಾನಿಯಾಗಿವೆ, ಇಂದು ಕೂಡ ಸಂಜೆಯ ವೇಳೆಗೆ ಉತ್ತಮ ಮಳೆಯಾಗುತ್ತಿದೆ ಎಂದು ವರದಿಯಾಗಿದೆ.

ಅರಬ್ಬಿ ಸಮುದ್ರದ ಆಗ್ನೇಯ ಹಾಗೂ ಪೂರ್ವ-ಕೇಂದ್ರ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ಪಶ್ಚಿಮ ಮತ್ತು ವಾಯವ್ಯ ಪ್ರದೇಶದತ್ತ ಸಾಗಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನಾವಿಕರು, ಮೀನುಗಾರರು ಮುನ್ನೆಚ್ಚರಿಕೆ ವಹಿಸಬೇಕು ಎಂದು ನಮ ಮಂಗಳೂರು ಬಂದರು ಪ್ರಾಧಿಕಾರ ತಿಳಿಸಿದೆ.

ಮುನ್ಸೂಚನೆಯಂತೆ ಚಂಡಮಾರುತ ಉಂಟಾಗಿದ್ದೇ ಆದರೆ ಬಂದರಿನ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದ್ದು, ಹಡಗುಗಳು ಸಾಕಷ್ಟು ಮುಂಚಿತವಾಗಿ ದಡ ಸೇರುವಂತೆ ಸೂಚಿಸಲಾಗಿದೆ, ಬಂದರಿನ ಎಲ್ಲಾ ಕಾರ್ಯಾಚರಣೆಗಳು ರದ್ದಾಗುವ ಪರಿಸ್ಥಿತಿ ಉಂಟಾದರೆ ಅದನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಬಂದರಿನ ಬಳಕೆದಾರರು, ಹಡಗು ಸಂಸ್ಥೆಗಳು, ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡಂತಿರುವ ಜಿಲ್ಲಾಡಳಿತಗಳು, ಮೀನುಗಾರಿಕಾ ಇಲಾಖೆ, ಕರಾವಳಿ ಭದ್ರತಾ ಪೊಲೀಸ್‌ ಹಾಗೂ ಕಸ್ಟಮ್ಸ್‌ ಇಲಾಖೆಗಳಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ. ಮಾಧ್ಯಮದಲ್ಲಿ ವರದಿಯಾಗಿದೆ.

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!