ಜನ ಮನದ ನಾಡಿ ಮಿಡಿತ

Advertisement

ಮುಲ್ಕಿ: ಅಮ್ಮನಡೆಗೆ ನಮ್ಮ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ

ನವ ರಾತ್ರಿಯ ದಿನದಲ್ಲಿ ನಮ್ಮ ಮನಸ್ಸಿನಲ್ಲಿ ಭಕ್ತಿಯ ಸನ್ಮಾರ್ಗದತ್ತ ಸಾಗಲು ವಿಶೇಷ ಆರಾಧನೆ ನಡೆಸಿದರೆ ಯಶಸ್ಸು ಸಾದ್ಯವಿದೆ . ಪಾದಯಾತ್ರೆಯಂತಹ ಪವಿತ್ರ ಸೇವೆಯನ್ನು ಅನುಭವಿಸಬೇಕು ಎಂದು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಫೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್ ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ 6 ನೇ ವರ್ಷದ ಅಮ್ಮನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಫೋರ್ಟ್ಸ್ ಕ್ಲಬ್ ಈ ಕಾರ್ಯಕ್ರಮವನ್ನು ವಿಶೇಷವಾಗಿ ಸoಯೋಜಿಸಿತ್ತು.


ಮುಂಜಾನೆ 5:30ಕ್ಕೆ ಶ್ರೀ ಕ್ಷೇತ್ರ ತೋಕೂರಿನಿಂದ ಪಾದಯಾತ್ರೆ ಪ್ರಾರಂಭಗೊಂಡು ದಾರಿಯುದ್ದಕ್ಕೂ ಭಜನೆಯ ಹಾಡುಗಳನ್ನು ದೇವರ ನಾಮ ಸ್ಮರಣೆಯನ್ನು ಮಾಡುತ್ತಾ ಶ್ರೀ ಕ್ಷೇತ್ರ ಕಟೀಲಿಗೆ 7:30 ಕ್ಕೆ ತಲುಪಿ ಶ್ರೀ ದೇವರ ದರ್ಶನ ಪಡೆಯಲಾಯಿತು.
ಕ್ಲಬ್ ಅಧ್ಯಕ್ಷ ಜಗದೀಶ್ ಕುಲಾಲ್, ಉಪಾಧ್ಯಕ್ಷ ಸುನಿಲ್ ದೇವಾಡಿಗ, ಕಾರ್ಯದ್ಯಕ್ಷ ಸಂತೋಷ್ ದೇವಾಡಿಗ, ಮಹಿಳಾ ಕಾರ್ಯಧ್ಯಕ್ಷೆ ಯಶೋಧಾ ದೇವಾಡಿಗ, ನಿಕಟ ಪೂರ್ವ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್, ಪ್ರಮುಖರಾದ ಸುರೇಶ್ ದೇವಾಡಿಗ, ಮಹೇಶ್ ಸುವರ್ಣ, ಚಂದ್ರಶೇಖರ ದೇವಾಡಿಗ, ಗೌತಮ್ ಬೆಲ್ಚೆಡ್, ಗಣೇಶ್ ದೇವಾಡಿಗ, ಪ್ರದೀಪ್ ದೇವಾಡಿಗ, ಸುರೇಖಾ, ಪ್ರಮೀಳಾ.ಕೆ.ದೇವಾಡಿಗ, ಶೋಭಾ.ವಿ. ಅಂಚನ್, ವಾಣಿ ಮಹೇಶ್, ನೀಮಾ ಸನಿಲ್ ಪದಾಧಿಕಾರಿಗಳು, ಸದಸ್ಯರು, ಸದಸ್ಯೆಯರು ,ಹಾಗೂ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!