ಮುಲ್ಕಿ : ಶ್ರೀ ವೀರಭದ್ರ ಮಹಮ್ಮಾಯಿ ವಾಚನಾಲಯ ಮತ್ತು ಯುವಕ ಮಂಡಲ ಹಾಗೂ ಮಹಿಳಾ ವೇದಿಕೆ ಕಲ್ಲಾಪು ಹಳೆಯಂಗಡಿ ಇದರ ವತಿಯಿಂದ ಮಹಾ ನವಮಿಯಂದು 25 ವರ್ಷ ಪೂರೈಸಿ ಬೆಳ್ಳಿಹಬ್ಬದ ಸಡಗರದಲ್ಲಿ “ಪಾಂಚಜನ್ಯ” ಎಂಬ ಯಕ್ಷಗಾನ ಬಯಲಾಟ ಶ್ರೀ ಕ್ಷೇತ್ರ ಕಲ್ಲಾಪು ನಲ್ಲಿ ನಡೆಯಿತು. ಈ ಒಂದು ಬೆಳ್ಳಿಹಬ್ಬದ ಸಂಭ್ರಮದಲ್ಲಿ ಯಕ್ಷಗಾನ ನಿರ್ದೇಶಕರಾದ ಕಿರಣ್ ಕುಮಾರ್ ಪಡುಪಣಂಬೂರು, ಭಾಗವತರಾದ ಜಯ ದೇವಾಡಿಗ, ಶ್ರೀನಿವಾಸ, ಚಂದ್ರಕಾಂತ್, ಚೆಂಡೆಯಲ್ಲಿ ಭವಿಷ್, ವಿಘ್ನೇಶ್, ಯಕ್ಷನಾಟ್ಯ ಗುರುಗಳಾದ ಪುಷ್ಪರಾಜ್, ಪದ್ಮನಾಭ, ಶ್ರೀನಿವಾಸ ಇವರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಗುರಿಕಾರರಾದ ರಾಮ ಗುರಿಕಾರರು, ರತ್ನಾಕರ್ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರರು, ಅಪ್ಪು ಗುರಿಕಾರರು, ಲಕ್ಷ್ಮಣ ಗುರಿಕಾರರು, ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರಾದ ಲೋಲಾಧರ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಅಂಜನ್ ಕುಮಾರ್ ಕಲ್ಲಾಪು ನೆರವೇರಿಸಿದರು. ಸನ್ಮಾನ ಪತ್ರವನ್ನು ಮಹೇಶ್ ಕಲ್ಲಾಪು ವಾಚಿಸಿದರು. ಯುವಕ ಮಂಡಲದ ಅಧ್ಯಕ್ಷರಾದ ನವೀನ್ ಶೆಟ್ಟಿಗಾರ್ ವಂದಿಸಿದರು.






