ಮೂಡುಬಿದಿರೆ: ಲಯನ್ಸ್ ಕ್ಲಬ್ ಮೂಡುಬಿದಿರೆ ಇದರ ವಲಯ ಸಾಮಾಜಿಕ ಕಾರ್ಯಕ್ರಮವು ಕ್ಲಬ್ ಅಧ್ಯಕ್ಷ ಜೊಸ್ಸಿ ಮಿನೇಜಸ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಕೀರ್ತಿನಗರದ ಲಯನ್ಸ್ ಪಾರ್ಕ್ ಸಭಾಂಗಣದಲ್ಲಿ ಜರಗಿತು.
ಲಯನ್ಸ್ ಜಿಲ್ಲೆ 317ಡಿಯ ಪ್ರಾಂತ 12ರಡಿ ಬರುವ ವಲಯಾಧ್ಯಕ್ಷ ಲ. ಎಂ.ಕೆ. ದಿನೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸೇವಾ ಕಾರ್ಯಕ್ರಮದ ಅಂಗವಾಗಿ ಕ್ಲಬ್ ವತಿಯಿಂದ ವೆಂಕಟರಮಣ ಭಟ್ ಅವರಿಗೆ ವೀಲ್ ಚೇರ್ ವಿತರಿಸಲಾಯಿತು. ಕಲ್ಲಮುಂಡ್ಕೂರಿನ ಸಂದೀಪ್ ಶೆಟ್ಟಿ, ಎಂಬವರ ಡಯಾಲಿಸಿಸ್ ಚಿಕಿತ್ಸೆಗೆ ಕ್ಲಬ್ ಸದಸ್ಯ ಪ್ರಶಾಂತ್ ಶೆಟ್ಟಿಯವರ ಕೊಡುಗೆ ರೂ.10ಸಾವಿರ ಮತ್ತು ಮಾರೂರಿನ ರಾಜೇಶ್ ಆಚಾರ್ಯ ಅವರ ಚಿಕಿತ್ಸೆಗೆ ವಲಯಾಧ್ಯಕ್ಷರು ನೀಡಿರುವ ಕೊಡುಗೆಯನ್ನು ಹಸ್ತಾಂತರಿಸಲಾಯಿತು. ವಲಯ ಸಾಮಾಜಿಕ ಕಾರ್ಯಕ್ರಮದ ಪ್ರಾಯೋಜಕ ಮೆಲ್ವಿನ್ ಡಿಕೋಸ್ತ ವಲಯಾಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು. ವಲಯಾಧ್ಯಕ್ಷ ಎಂ.ಕೆ. ದಿನೇಶ್ ಮತ್ತು ಶಾಂತಿ ದಿನೇಶ್ ದಂಪತಿಯನ್ನು ಸನ್ಮಾನಿಸ ಲಾಯಿತು.
ಪ್ರಾಂತೀಯ ಅಧ್ಯಕ್ಷ ಹೆರಾಲ್ಡ್ ತಾವ್ರೋ ಮತ್ತು ಜಿಎಮ್ ಟಿ ಸಂಯೋಜಕ ರಾಜು ಶೆಟ್ಟಿ, ಶುಭಾಶಂಸನೆಗೈದರು. ಕ್ಲಬ್‌ನ ಪ್ರಥಮ ಮಹಿಳೆ ವಿಲ್ಮಾ ಮಿನೇಜಸ್, ಉಮೇಶ್ ಶೆಟ್ಟಿ ಬೆಳ್ತಂಗಡಿ, ರವಿ ಶೆಟ್ಟಿ ಸುಕ್ಕೇರಿ, ನಿರಂಜನ್ ವೇಣೂರು, ಕ್ಲಬ್ ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತಾ , ಖಜಾಂಚಿ ಹರೀಶ್ ತಂತ್ರಿ, ಹಿರಿಯ ಸದಸ್ಯರಾದ ಕೆ. ಶ್ರೀಪತಿ ಭಟ್, ಕುಮಾರ್, ಶಿವಪ್ರಸಾದ್ ಉಪಸ್ಥಿತರಿದ್ದರು.
ಅಧ್ಯಕ್ಷ ಜೊಸ್ಸಿ ಮಿನೇಜಸ್ ಸ್ವಾಗತಿಸಿದರು. ಜಯರಾಮ ಶೆಟ್ಟಿಗಾರ್ ಧ್ವಜವಂದನೆ ನೆರವೇರಿಸಿದರು. ಅನಿಲ್ ಮೆಂಡೋನ್ಸಾ ನೀತಿ ಸಂಹಿತೆ ಪಠಿಸಿದರು. ಓಸ್ವಾಲ್ಡ್ ಡಿ’ಕೋಸ್ತಾ ವಂದಿಸಿದರು. ಜಾನ್ ರೇಗೋ ಕಾರ್ಯಕ್ರಮ ನಿರೂಪಿಸಿದರು.
ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಎಂಬಲ್ಲಿ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಮನೆಯ ಚಾವಣಿ…
ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದಂತಹ ಅವಘಡದಲ್ಲಿ ಮನೆಯ ಪೀಠೋಪಕರಣಗಳು ಹಾಗೂ ದಿನನಿತ್ಯ…
ವಾಷಿಂಗ್ಟನ್ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಯು. ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ…
ಫಿಫಾ ವಿಶ್ವಕಪ್ 2026ರ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳ ವೇಳೆ ನಡೆದ ಗಲಾಟೆ ಮತ್ತು ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ, ಅರ್ಜೆಂಟೀನಾ…
'ನ್ಯೂಯಾರ್ಕ್ ಟೈಮ್ಸ್' ತನ್ನ ವರದಿಯಲ್ಲಿ 'ಪಾಕಿಸ್ತಾನಿ ಕಾಶ್ಮೀರ' ಎಂದು ಉಲ್ಲೇಖಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ…
ಚೀನಾ ಪಾಕಿಸ್ತಾನದ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್‌ಗಳನ್ನು ಪೂರೈಸಿದೆ ಎಂಬ ವರದಿಗಳು ಜಾಗತಿಕ ಆತಂಕಕ್ಕೆ ಕಾರಣವಾಗಿವೆ. ಈ ಕುರಿತು…