ಜನ ಮನದ ನಾಡಿ ಮಿಡಿತ

Advertisement

ಲಯನ್ಸ್ ಕ್ಲಬ್ ಮೂಡುಬಿದಿರೆ ಇದರ ವಲಯ ಸಾಮಾಜಿಕ ಕಾರ್ಯಕ್ರಮ


ಮೂಡುಬಿದಿರೆ: ಲಯನ್ಸ್ ಕ್ಲಬ್ ಮೂಡುಬಿದಿರೆ ಇದರ ವಲಯ ಸಾಮಾಜಿಕ ಕಾರ್ಯಕ್ರಮವು ಕ್ಲಬ್‌ ಅಧ್ಯಕ್ಷ ಜೊಸ್ಸಿ ಮಿನೇಜಸ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಕೀರ್ತಿನಗರದ ಲಯನ್ಸ್ ಪಾರ್ಕ್ ಸಭಾಂಗಣದಲ್ಲಿ ಜರಗಿತು.


ಲಯನ್ಸ್ ಜಿಲ್ಲೆ 317ಡಿಯ ಪ್ರಾಂತ 12ರಡಿ ಬರುವ ವಲಯಾಧ್ಯಕ್ಷ ಲ. ಎಂ.ಕೆ. ದಿನೇಶ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸೇವಾ ಕಾರ್ಯಕ್ರಮದ ಅಂಗವಾಗಿ ಕ್ಲಬ್‌ ವತಿಯಿಂದ ವೆಂಕಟರಮಣ ಭಟ್ ಅವರಿಗೆ ವೀಲ್‌ ಚೇರ್ ವಿತರಿಸಲಾಯಿತು. ಕಲ್ಲಮುಂಡ್ಕೂರಿನ ಸಂದೀಪ್ ಶೆಟ್ಟಿ, ಎಂಬವರ ಡಯಾಲಿಸಿಸ್ ಚಿಕಿತ್ಸೆಗೆ ಕ್ಲಬ್ ಸದಸ್ಯ ಪ್ರಶಾಂತ್ ಶೆಟ್ಟಿಯವರ ಕೊಡುಗೆ ರೂ.10ಸಾವಿರ ಮತ್ತು ಮಾರೂರಿನ ರಾಜೇಶ್ ಆಚಾರ್ಯ ಅವರ ಚಿಕಿತ್ಸೆಗೆ ವಲಯಾಧ್ಯಕ್ಷರು ನೀಡಿರುವ ಕೊಡುಗೆಯನ್ನು ಹಸ್ತಾಂತರಿಸಲಾಯಿತು. ವಲಯ ಸಾಮಾಜಿಕ ಕಾರ್ಯಕ್ರಮದ ಪ್ರಾಯೋಜಕ ಮೆಲ್ವಿನ್ ಡಿಕೋಸ್ತ ವಲಯಾಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು. ವಲಯಾಧ್ಯಕ್ಷ ಎಂ.ಕೆ. ದಿನೇಶ್ ಮತ್ತು ಶಾಂತಿ ದಿನೇಶ್‌ ದಂಪತಿಯನ್ನು ಸನ್ಮಾನಿಸ ಲಾಯಿತು.


ಪ್ರಾಂತೀಯ ಅಧ್ಯಕ್ಷ ಹೆರಾಲ್ಡ್ ತಾವ್ರೋ ಮತ್ತು ಜಿಎಮ್ ಟಿ ಸಂಯೋಜಕ ರಾಜು ಶೆಟ್ಟಿ, ಶುಭಾಶಂಸನೆಗೈದರು. ಕ್ಲಬ್‌ನ ಪ್ರಥಮ ಮಹಿಳೆ ವಿಲ್ಮಾ ಮಿನೇಜಸ್, ಉಮೇಶ್ ಶೆಟ್ಟಿ ಬೆಳ್ತಂಗಡಿ, ರವಿ ಶೆಟ್ಟಿ ಸುಕ್ಕೇರಿ, ನಿರಂಜನ್‌ ವೇಣೂರು, ಕ್ಲಬ್ ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತಾ , ಖಜಾಂಚಿ ಹರೀಶ್ ತಂತ್ರಿ, ಹಿರಿಯ ಸದಸ್ಯರಾದ ಕೆ. ಶ್ರೀಪತಿ ಭಟ್, ಕುಮಾರ್‌, ಶಿವಪ್ರಸಾದ್ ಉಪಸ್ಥಿತರಿದ್ದರು.


ಅಧ್ಯಕ್ಷ ಜೊಸ್ಸಿ ಮಿನೇಜಸ್‌ ಸ್ವಾಗತಿಸಿದರು. ಜಯರಾಮ ಶೆಟ್ಟಿಗಾರ್ ಧ್ವಜವಂದನೆ ನೆರವೇರಿಸಿದರು. ಅನಿಲ್ ಮೆಂಡೋನ್ಸಾ ನೀತಿ ಸಂಹಿತೆ ಪಠಿಸಿದರು. ಓಸ್ವಾಲ್ಡ್ ಡಿ’ಕೋಸ್ತಾ ವಂದಿಸಿದರು. ಜಾನ್‌ ರೇಗೋ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

ಬಂಟ್ವಾಳ: ಬಸ್‌ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ಕೂಲಿ ಕಾರ್ಮಿಕನಿಗೆ ಕಾರು ಡಿಕ್ಕಿ; ಸ್ಥಳದಲ್ಲೇ ಸಾವು

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

error: Content is protected !!