ಜನ ಮನದ ನಾಡಿ ಮಿಡಿತ

Advertisement

ನ.20ರಂದು ಕನಿಷ್ಠ ವೇತನ ಸಹಿತ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಸಂಜೀವಿನಿ ಕಾರ್ಯಕರ್ತರಿಂದ ಧರಣಿ ಎಂಬಿಕೆಗಳಿಗೆ 20000ರೂ., ಎಲ್‌ಸಿಆರ್‌ಪಿಗಳಿಗೆ 15 ಸಾವಿರ ರೂ. ವೇತನ ನೀಡುವಂತೆ ಒತ್ತಾಯ

ಉಡುಪಿ: ಕನಿಷ್ಠ ವೇತನ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ‘ಸಂಜೀವಿನಿ’ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಪುಸ್ತಕ ಬರಹಗಾರರು (ಎಂಬಿಕೆ) ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ(ಎಲ್‌ಸಿಆರ್‌ಪಿ) ಗಳು ನ.20ರಂದು ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಗ್ರಾಪಂ ಮಟ್ಟದ ಎಂಬಿಕೆ ಮತ್ತು ಎಲ್‌ಸಿಆರ್‌ಪಿ ಮಹಾಒಕ್ಕೂಟದ ಕುಂದಾಪುರ ಘಟಕದ ಅಧ್ಯಕ್ಷೆ ವಸಂತಿ ತಿಳಿಸಿದರು.


ಉಡುಪಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 155 ಗ್ರಾಪಂಗಳ ವ್ಯಾಪ್ತಿಯಲ್ಲಿ 155 ಎಂಬಿಕೆ ಮತ್ತು 465 ಎಲ್‌ಸಿಆರ್‌ಪಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಎಂಬಿಕೆಗಳಿಗೆ 5000ರೂ. ಮತ್ತು ಎಲ್‌ಸಿಆರ್‌ಪಿಗಳಿಗೆ 2500ರೂ. ಗೌರವಧನ ನೀಡಲಾಗುತ್ತಿದೆ. ಆದರೆ ನಮಗೆ ಈ ವೇತನ ಸಾಕಾಗುವುದಿಲ್ಲ. ಆದ್ದರಿಂದ ಗೌರವ ಧನದ ಬದಲು ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮ ಹುದ್ದೆಯನ್ನು ಖಾಯಂಗೊಳಿಸಿ 3ವರ್ಷದ ನಂತರ ಸರಕಾರವೇ ವೇತನ ಭರಿಸಬೇಕು. ಎಂಬಿಕೆಗಳಿಗೆ 20000ರೂ. ಮತ್ತು ಎಲ್‌ಸಿಆರ್‌ಪಿಗಳಿಗೆ 15ಸಾವಿರ ರೂ. ವೇತನವನ್ನು ಪ್ರಯಾಣ ಭತ್ಯೆ ಜೊತೆ ನೀಡಬೇಕು. ಇಎಸ್‌ಐ ಮತ್ತು ಪಿಎಫ್ ಸೌಲಭ್ಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.


ಸುದ್ದಿಗೋಷ್ಠಿಯಲ್ಲಿ ಕುಂದಾಪುರ ತಾಲೂಕು ಕಾರ್ಯದರ್ಶಿ ಸುಚಿತ್ರಾ, ಕೋಶಾಧಿಕಾರಿ ಪ್ರಮೀಳಾ, ಹೆಬ್ರಿ ತಾಲೂಕು ಅಧ್ಯಕ್ಷೆ ಪಿ.ಸುಜಾತ, ಉಡುಪಿ ತಾಲೂಕು ಅಧ್ಯಕ್ಷೆ ಸುಜಾತ ಉಪಸ್ಥಿತರಿದ್ದರು

One Response

  1. ಒಂದು ಕೂಲಿ ಕೆಲಸಕ್ಕೆ ಹೋದ್ರು ಒಳ್ಳೆ ಕೂಲಿ ಕೊಡ್ತಾರೆ. ಆದ್ರೆ ಇದು ಕೂಲಿ ಕೆಲಸಕ್ಕಿಂತ ಕಡೆ ಆಗಿದೆ. ಈಗ ದಿನಸಿ ವಸ್ತು ಗಳ ದರ ಗಗನಕ್ಕೆ ಏರುತ್ತಿರುವಾಗ ಈ 5 ಸಾವಿರ 2500 ದಲ್ಲಿ ಏನು ಬರ್ತದೆ. ಅವರ ಹೋರಾಟ ಕ್ಕೆ ಶುಭವಾಗಲಿ. ಅವರ ಬೇಡಿಕೆ ಈಡೇರಲಿ.

Leave a Reply

Your email address will not be published. Required fields are marked *

ಮಂಗಳೂರು: ಶ್ರೀ ಪರಮಾನಂದ ಸಾಲ್ಯಾನ್ ಅವರಿಗೆ ಈ ವರ್ಷದ ರಂಗಭಾಸ್ಕರ ಪ್ರಶಸ್ತಿ..!

ಉಳ್ಳಾಲ: ಆಹಾರ ಅರಸಿ ಬಂದ ನವಿಲಿಗೆ ವಿದ್ಯುತ್ ಕಂಬವೇ ಮರಣಬಲೆ….!

ಬಂಟ್ವಾಳ: ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ಉದ್ಘಾಟನೆ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಎರಡು ಸರಕಾರಿ ಶಾಲೆಯಲ್ಲಿ ಶೂನ್ಯ ದಾಖಲಾತಿ….!

ಬಂಟ್ವಾಳ: ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಭೀಕರ ರಸ್ತೆ ಅಪ*ಘಾತ….!

ಮಂಗಳೂರು: ಎಂ.ಆರ್.ಜಿ.ಗ್ರೂಪ್ ಗೆ ಹಾರುವ ಹಕ್ಕಿ ಸೇರ್ಪಡೆ..!

ಉಡುಪಿ : ಕಾಪುವಿನಲ್ಲಿ ಭೀಕರ ಅಪಘಾತ…!

ಬಂಟ್ವಾಳ : ಸಜಿಪದಲ್ಲಿ ಭೀಕರ ಅಪಘಾತ…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

error: Content is protected !!