ದಕ್ಷಿಣ ಕನ್ನಡ : ಕರಾಡ ಬ್ರಾಹ್ಮಣ ಸಮಾಜ ಬೆಂಗಳೂರು ಆಶ್ರಯದಲ್ಲಿ ನವೆಂಬರ್ 25 ಶನಿವಾರ ಮತ್ತು ನವೆಂಬರ್ 26 ರವಿವಾರ ಬೆಂಗಳೂರಿನ ಶ್ರೀ ಶೃಂಗೇರಿ ಶಂಕರ ಮಠ, ಶಂಕರಪುರ, ಬೆಂಗಳೂರು ಇಲ್ಲಿ ಬೆಂಗಳೂರು ಕರಾಡ ಸಮಾಜ ಆರಂಭವಾಗಿ 25 ವರ್ಷಗಳ ಸವಿನೆನಪಿಗಾಗಿ “ಕರಾಡ ರಜತೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಕರಾಡ ಬ್ರಾಹ್ಮಣ ಸಮಾಜ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಕರಾಡ ರಜತೋತ್ಸವ ಕಾರ್ಯಕ್ರಮದಲ್ಲಿ ಎರಡು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ, ಕಾರ್ಯಕ್ರಮಗಳ ಜೊತೆ ಸಾಧಕರಿಗೆ ಸನ್ಮಾನವು ನಡೆಯಲಿದ್ದು ಕರಾಡ ಬ್ರಾಹ್ಮಣ ಸಮಾಜದ ಕರ್ನಾಟಕ, ಕೇರಳ,ಮಹಾರಾಷ್ಟ್ರ, ಸೇರಿದಂತೆ ದೇಶದ ವಿವಿಧೆಡೆ ನೆಲೆಸಿರುವ ಸಮಾಜ ಬಾಂಧವರು ಮತ್ತು ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ದಿನಾಂಕ 25 ರಂದು ತ್ರಿಕಾಲ ಪೂಜೆ ಆರಂಭ, ನಂತರ ಕರಾಡವಾಣಿ ವಿಶೇಶಾಂಕ ಬಿಡುಗಡೆ ಬಳಿಕ ಕರಾಡ ಚಾರಿಟೇಬಲ್ ಟ್ರಸ್ಟ್ ರಿಜಿಸ್ಟರ್ಡ್ ಇದರ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಕರಾಡ ರಜತೋತ್ಸವ ಶುಭ ಸಂದರ್ಭದಲ್ಲಿ ಶೃಂಗೇರಿ ಶಂಕರ ಮಠದ ಮುಖ್ಯ ಆಡಳಿತ ಅಧಿಕಾರಿಗಳಾದ ಪದ್ಮಶ್ರೀ ಡಾ. ವಿ. ಆರ್. ಗೌರಿಶಂಕರ್ ಇವರಿಗೆ ವಿಶೇಷ ಗೌರವ ಸನ್ಮಾನ ಏರ್ಪಡಿಸಲಾಗಿದ್ದು, ಸಮಾಜ ಬಾಂಧವರು ಉಪಸ್ಥಿತರಿರುವಂತೆ ಕೋರಲಾಗಿದೆ.
ಸಂಜೆ 5:00 ಗಂಟೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಭಜನ್ ಸಂಧ್ಯಾ ನಡೆಯಲಿದ್ದು ನಂತರ ತ್ರಿಕಾಲ ಪೂಜೆ ಸಮಾರೋಪ ಮತ್ತು ಮಹಾ ಮಂಗಳಾರತಿ ನಡೆಲಿದೆ. ದಿನಾಂಕ 26ರಂದು ಮುಂಜಾನೆ ಗಣ ಹೋಮ ಮತ್ತು ಸತ್ಯನಾರಾಯಣ ಪೂಜೆ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಬ್ರಾಹ್ಮಣ ಸಭಾ ಇದರ ಅಧ್ಯಕ್ಷರಾದ ಶ್ರೀಯುತ ಅಶೋಕ ಹಾರನಹಳ್ಳಿ ಆಗಮಿಸಲಿದ್ದು ಈ ಸಂದರ್ಭದಲ್ಲಿ ಕರಾಡ ಸಮಾಜದ ಅಪ್ರತಿಮ ಸಾಧಕರಾದ ಗಿರಿಧರ ಭಟ್ ಪರಾಡ್ಕರ್ ಮಂಗಳೂರು, ಡಾಕ್ಟರ್ ಪ್ರದೀಪ್ ಆಟಿಕುಕ್ಕೆ, ಕೃಷ್ಣರಾಜ ಶರ್ಮ ಕೊಲ್ಲೆಂಕಾನ ಇವರಿಗೆ ವಿಶೇಷ ಸನ್ಮಾನವಿದೆ, ನಂತರ ಕರಾಡ ರಜತೋತ್ಸವ ಸ್ಮರಣ ಸಂಚಿಕೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಿದೆ. ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನ ಶ್ರೀಯುತ ಅಶೋಕ ಮುಂಡಕಾನ, ಅಧ್ಯಕ್ಷರು ಕನ್ನಡ ಸಮಾಜ ಬೆಂಗಳೂರು ಇವರು ವಹಿಸಿಕೊಳ್ಳಲಿದ್ದು ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರನ್ನು ಕಾರ್ಯಕ್ರಮದ ಉದ್ದಕ್ಕೂ ಉಪಸ್ಥಿತರಿರುವಂತೆ ವಿನಂತಿಸಿದ್ದಾರೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…