ಮೂಡುಬಿದಿರೆ: ಸಂದರ್ಶನದ ಸಂದರ್ಭದಲ್ಲಿ ಸಂವಹನ ಮಾತ್ರವಲ್ಲ, ಜ್ಞಾನದ ಜೊತೆ ಹಾವಭಾವ, ನಡವಳಿಕೆ, ಕೌಶಲಗಳೂ ನಮ್ಮನ್ನು ನಿರೂಪಿಸುತ್ತವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ರಾಜ್ಯ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಉದ್ಯಮಶೀಲತಾ ಅಭಿವೃದ್ಧಿ ಘಟಕ ಹಾಗೂ ರೂಬಿಕಾನ್ ಸ್ಕಿಲ್ ಡೆವೆಲಪ್‌ಮೆಂಟ್ ಪ್ರೈ.ಲಿ. ಸಹಯೋಗದಲ್ಲಿ ಆಳ್ವಾಸ್ ಕಾಲೇಜು ಉದ್ಯಮಶೀಲತಾ ಅಭಿವೃದ್ಧಿ ಘಟಕ, ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ನಾಲ್ಕು ದಿನಗಳ ‘ಜೀವನ ಕೌಶಲ ತರಬೇತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ನಿಮ್ಮ ಅರ್ಹತೆಯ ಜೊತೆಗೆ ನೀವು ಉದ್ಯೋಗ ನಿರ್ವಹಿಸಲು ಇಚ್ಛಿಸುವ ಉದ್ದೇಶ, ಉತ್ಸಾಹವೂ ಬಹುಮುಖ್ಯ. ನಿಮ್ಮ ಬಯೋಡೆಟಾ (ರೆಸ್ಯೂಮ್) ಕೇವಲ ಪದವಿಗಳನ್ನು ಮಾತ್ರ ಹೊಂದಿರಬಾರದು. ಅದರೊಂದಿಗೆ ನಿಮ್ಮ ಸಾಮರ್ಥ್ಯ, ಸಂವಹನ, ಕೌಶಲಗಳು ಇರಬೇಕು. ಆಗ ನಿಮ್ಮ ಮೌಲ್ಯ ಹೆಚ್ಚುತ್ತದೆ ಎಂದರು.
ನಮ್ಮೊಳಗಿನ ಶಕ್ತಿಯನ್ನು ನಾವು ಮೊದಲು ಅರಿಯಬೇಕು. ಸ್ವಯಂ ಸಾಮರ್ಥ್ಯ ಆಧಾರದಲ್ಲಿ ಮುನ್ನಡೆಯಬೇಕು. ಆಗ ಯಶಸ್ಸು ಸಾಧ್ಯ ಎಂದರು.
ರೂಬಿಕಾನ್ ಸ್ಕಿಲ್ ಡೆವೆಲಪ್‌ಮೆಂಟ್ ಕಂಪೆನಿ ಪ್ರತಿನಿಧಿ, ಕೌಶಲ ತರಬೇತುದಾರ ಜಾಕೀರ್ ಹುಸೈನ್ ಪ್ರೋತ್ಸಾಹಕ ನುಡಿಗಳನ್ನಾಡಿದರು.
‘ನವೆಂಬರ್ 25ರ ವರೆಗೆ ತರಬೇತಿ ನಡೆಯಲಿದ್ದು, ನಾಲ್ಕು ತಂಡಗಳ ಮೂಲಕ ತರಬೇತುದಾರರು ತರಬೇತಿ ನೀಡಲಿದ್ದಾರೆ’ ಎಂದು ಆಳ್ವಾಸ್ ಕಾಲೇಜು ಉದ್ಯಮಶೀಲತಾ ಅಭಿವೃದ್ಧಿ ಘಟಕದ ಸಂಯೋಜಕ ಶಾಜಿಯಾ ಖಾನೂಮ್ ತಿಳಿಸಿದರು. ಝಾಕಿರ್ ಹುಸೇನ್, ಸುಜಾತ ಕುಮಾರಿ, ಅಬ್ದುಲ್ ಇನಾಮ್ದಾರ್, ಮೋನಿದೀಪಾ ದತ್ತಾ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೌಶಲ ಸಂಯೋಜಕ ರೋಹಿತ್ ಎ.ಆರ್. ಇದ್ದರು. ಪವಿತ್ರಾತೇಜ್ ನಿರೂಪಿಸಿ, ಸಾನಿಧ್ಯಾ ಪ್ರಾರ್ಥಿಸಿ, ಅನ್ಸಿಯಾ ವಂದಿಸಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…