ಜನ ಮನದ ನಾಡಿ ಮಿಡಿತ

Advertisement

ಮುಲ್ಕಿ ಪರಿಸರ ರಕ್ಷಣೆ ಮತ್ತು ಪ್ರಾಣೆ- ಪಕ್ಷಿಗಳ ಕಾಳಜಿಯನ್ನು ಮಕ್ಕಳಿಗೆ ಕಲಿಸಿಕೊಡುವುದು ನಿಜಕ್ಕೂ ಶ್ಲಾಘನೀಯ ಕೆಲಸ – ರೊ. ಸುಧಾಕರ ಸಾಲ್ಯಾನ್

ಭಾರತ ಸರಕಾರದ ಯುವ ಕಾರ್ಯ ಮತ್ತು ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಇವರ ಆಶ್ರಯದಲ್ಲಿ ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ10ನೇ ತೋಕೂರು, ವೃಕ್ಷ ಪ್ರೇಮಿ ವಿನೇಶ್ ಪೂಜಾರಿ ನಿಡ್ಡೋಡಿ ಮತ್ತು ಇಂಟರಾಕ್ಟ್ ಕ್ಲಬ್, ಡಾ. ಎಮ್. ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ತೋಕೂರು ಇದರ ಜಂಟಿ ಆಶ್ರಯದಲ್ಲಿ ಮಿಯಾವಾಕೀ ಅರಣ್ಯ ದಟ್ಟ ಕಾಡನ್ನು ನಿರ್ಮಿಸುವ ಕಾರ್ಯಕ್ರಮಕ್ಕೆ ದಿನಾಂಕ 25.11.2023 ರಂದು ಡಾ. ಎಮ್. ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ತೋಕೂರು ಇಲ್ಲಿ ಚಾಲನೆಯನ್ನು ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಭಾಸ್ಕರ್ ಅಮೀನ್ ತೋಕೂರುರವರು ವಹಿಸಿ ಶಾಲೆಯಲ್ಲಿ ಹಸಿರು ಪ್ರಕೃತಿಯನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಿರುವ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು,ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೈಕಂಪಾಡಿಯ ವತಿಯಿಂದ ಮಿಯಾವಾಕೀ ಅರಣ್ಯಕ್ಕೆ ಬೇಕಾದ ಗಿಡಗಳನ್ನು ವ್ಯವಸ್ಥೆಗೊಳಿಸಿ ಮಾತನಾಡಿದ ರೋಟರಿ ಕ್ಲಬ್ ಬೈಕಂಪಾಡಿಯ ಅಧ್ಯಕ್ಷರಾದ ರೊ. ಸುಧಾಕರ ಸಾಲ್ಯಾನ್ ಪರಿಸರ ರಕ್ಷಣೆ ಮತ್ತು ಪ್ರಾಣೆ- ಪಕ್ಷಿಗಳ ಕಾಳಜಿಯನ್ನು ಮಕ್ಕಳಿಗೆ ಕಲಿಸಿಕೊಡುವುದು ನಿಜಕ್ಕೂ ಶ್ಲಾಘನೀಯ ಕೆಲಸ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನಾಗಲಿಂಗ ಪುಷ್ಪ ಸಸಿಗಳ ಮೂಲಕ ಅಯೋಧ್ಯೆಯವರೆಗೆ ಹೆಸರನ್ನು ಪಡೆದಿರುವ ವಿನೇಶ್ ಪೂಜಾರಿ ನಿಡ್ಡೋಡಿರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಗಲಿಂಗ ಪುಷ್ಪದ ಗಿಡಗಳನ್ನು ಹಸ್ತಾಂತರಿಸಿ ದಟ್ಟ ಅರಣ್ಯ ರಚನೆಯ ಈ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.

ಡಾ. ಎಮ್. ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆ, ತೋಕೂರಿನ ಪ್ರಾಂಶುಪಾಲರಾದ ಶ್ರೀಮತಿ ಶ್ರೀಲತಾ ರಾವ್, ಶಿಕ್ಷಕರಾದ ಚೇತನ್ ಕೆ. ಉಳ್ಳಾಲ್, ಸುಧಾ ಹೆಗ್ಡೆ, ಜ್ಯೋತಿ ಬಂಜನ್, ವಾಣಿಕುಮಾರಿರವರು ಮತ್ತು ಇಂಟರಾಕ್ಟ್ ಕ್ಲಬ್ಬಿನ ವಿದ್ಯಾರ್ಥಿಗಳು, ಫೇಮಸ್ ಯೂತ್ ಕ್ಲಬ್ ರೋಟರಿ ಸಮುದಾಯದಳದ ಅಧ್ಯಕ್ಷರಾದ ಮೋಹನ್ ದಾಸ್ ದೇವಾಡಿಗ ಕಾರ್ಯದರ್ಶಿ ಭೋಜ ಕೋಟ್ಯಾನ್, ಫೇಮಸ್ ಯೂತ್ ಕ್ಲಬ್ಬಿನ ಕಾರ್ಯದರ್ಶಿ ಹಿಮಕರ್ ರವರು ಮತ್ತು ಪ್ರಸಾದ್ ಪೂಜಾರಿಯವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಡಾ. ಎಮ್. ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಇಂಟರಾಕ್ಟ್ ಕ್ಲಬ್ಬಿನ ಕೋ ಆರ್ಡಿನೇಟರ್ ಶ್ರೀಮತಿ ಉಷಾ ನರೇಂದ್ರ ಕೆರೆಕಾಡುರವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

ಮಂಗಳೂರು: ಶ್ರೀ ಪರಮಾನಂದ ಸಾಲ್ಯಾನ್ ಅವರಿಗೆ ಈ ವರ್ಷದ ರಂಗಭಾಸ್ಕರ ಪ್ರಶಸ್ತಿ..!

ಉಳ್ಳಾಲ: ಆಹಾರ ಅರಸಿ ಬಂದ ನವಿಲಿಗೆ ವಿದ್ಯುತ್ ಕಂಬವೇ ಮರಣಬಲೆ….!

ಬಂಟ್ವಾಳ: ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ಉದ್ಘಾಟನೆ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಎರಡು ಸರಕಾರಿ ಶಾಲೆಯಲ್ಲಿ ಶೂನ್ಯ ದಾಖಲಾತಿ….!

ಬಂಟ್ವಾಳ: ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಭೀಕರ ರಸ್ತೆ ಅಪ*ಘಾತ….!

ಮಂಗಳೂರು: ಎಂ.ಆರ್.ಜಿ.ಗ್ರೂಪ್ ಗೆ ಹಾರುವ ಹಕ್ಕಿ ಸೇರ್ಪಡೆ..!

ಉಡುಪಿ : ಕಾಪುವಿನಲ್ಲಿ ಭೀಕರ ಅಪಘಾತ…!

ಬಂಟ್ವಾಳ : ಸಜಿಪದಲ್ಲಿ ಭೀಕರ ಅಪಘಾತ…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

error: Content is protected !!