ಕಲ್ಲಡ್ಕ ; ಕಾಂಕ್ರೀಟ್ ರಸ್ತೆಯ ಸುತ್ತಮುತ್ತ ಗಿಡಗಳು ಗಂಟೆಗಳು ಬೆಳೆದು ನಿಂತು ಶಾಲಾ ಮಕ್ಕಳು ನಡೆದು ಕೊಂಡು ಹೋಗಲು ಭಯಪಡುತ್ತಿದ್ದ ನೋಡಲು ಕಾಲು ದಾರಿಯಾಗಿ ಕಾಣುತ್ತಿದ್ದ ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಪೂಪಾಡಿ ಕಲ್ಲು – ನಾರಂಕೋಡಿ ರಸ್ಥೆಯ ಬಗ್ಗೆ ಸ್ಥಳಿಯರು ಅನೇಕ ಬಾರಿ ಪಂಚಾಯತ್ಗೆ ಮನವಿ ನೀಡಿದರೂ ಸ್ಪಂದಿಸದೆ ಯಾವುದೇ ಕ್ರಮಗೊಳ್ಳದೆ ಇದ್ದು ಕಡೆಗೆ ಸ್ಥಳಿಯರಾದ ಮಹಮ್ಮದ್ ಹಮೀದು ಹಾಗು ಚರಣ್ ಇವರು ಯೋಜನೆಯ ಕಲ್ಲಡ್ಕ ಶೌಯ೯ ವಿಪತ್ತು ತಂಡದವರಿಗೆ ಮನವಿ ನೀಡಿದ್ದು ತಕ್ಷಣ ಕಾಯ೯ಪ್ರವತ೯ರಾದ ಶೌಯ೯ ತಂಡದವರು ರಸ್ತೆಯ ಎರಡು ಬದಿಯಲ್ಲಿ ಬೆಳೆದ ಗಿಡಗಳನ್ನು ಕಡಿದು ಸ್ವಚ್ಚತೆ ಮಾಡಿದರು.
ಈ ರಸ್ತೆಯ ಒಂದು ಭಾಗವು ಬೋಳಂತೂರು ಗ್ರಾಮಕ್ಕೆ ಸೇರಿದ್ದು ಇನ್ನೊಂದು ಬದಿಯು ಗೋಳ್ತಮಜಲು ಗ್ರಾಮ ಪಂಚಾಯತಿಗೆ ಸೇರಿದ್ದು ಎರಡು ಪಂಚಾಯತಿನವರು ತಮಗೆ ಸಂಬಂಧ ಪಡೆದ ರೀತಿಯಲ್ಲಿ ರಸ್ತೆ ರಿಪೇರಿಗೆ ಮೀನ ವೇಶ ಎನಿಸುತ್ತಿದ್ದರು. ಶೌರ್ಯ ತಂಡದ ಕಾರ್ಯಕ್ಕೆ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸ್ವಚ್ಛತಾ ಕಾರ್ಯದಲ್ಲಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ ಕೊಳಕೀರು,ಶೌರ್ಯ ವೀಪತು ತಂಡದ ಅಧ್ಯಕ್ಷ ಮಾಧವ ಸಾಲಿಯಾನ್ ಕುದುರೆಬೆಟ್ಟು, ತಂಡದ ಸಂಯೋಜಕ ವಿದ್ಯಾ, ಕಲ್ಲಡ್ಕ ಒಕ್ಕೂಟ ಸೇವಾ ಪ್ರತಿನಿಧಿ ಗಣೇಶ್, ಶೌರ್ಯ ತಂಡ ಸದಸ್ಯರುಗಳಾದ , ವೆಂಕಪ್ಪ ಜಿ, ಮೌರೀಶ್, ರವಿಚಂದ್ರ ಜೋಗಿ,ರಮೇಶ್ ಕುದ್ರೆಬೆಟ್ಟು, ಸಂತೋಷ್ ಬೊಳ್ಪೋಡಿ,ಚಿನ್ನಾ ಕಲ್ಲಡ್ಕ,ಸತೀಶ್ ಮೇಸ್ತ್ರಿ,ಧನಂಜಯ ಕೊಳಕೀರು, ಸ್ಥಳೀಯರಾದ ಹಮೀದ್, ಚರಣ್ ಮೊದಲಾದವರು ಪಾಲ್ಗೊಂಡಿದ್ದರು
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…