ಜನ ಮನದ ನಾಡಿ ಮಿಡಿತ

Advertisement

“ಜ್ಞಾನ ದೀವಿಗೆ’ ಕಂಪ್ಯೂಟರ್ ಕೊಠಡಿ ಹಸ್ತಾಂತರ

ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಏಮಾಜಿ ಕಿರಿಯ ಪ್ರಾಥಮಿಕ ಶಾಲೆಗೆ ದಿ. ಕೆ. ಎನ್. ಕೇಶವ ಆಳ್ವ ಕರಿಂಕ ಹೊಸಮನೆರವರ ಸ್ಮರಣಾರ್ಥ ಎ ಜೆ ಸಂಶೋಧನಾ ಕೇಂದ್ರ ಮಂಗಳೂರು ಇಲ್ಲಿನ ಗ್ಯಾಸ್ಟ್ರೋ ಸರ್ಜನ್ ಡಾ. ಅಶ್ವಿನ್ ಆಳ್ವ ರವರು ಸುಮಾರು 6 ಲಕ್ಷ ವೆಚ್ಚದಲ್ಲಿ ನೂತನವಾಗಿ “ಜ್ಞಾನ ದೀವಿಗೆ ” ಎನ್ನುವ ಕಂಪ್ಯೂಟರ್ ಕೊಠಡಿಯನ್ನು ಕೊಡುಗೆಯಾಗಿ ನೀಡಿದ್ದು . ಇದರ ಹಸ್ತಾಂತರ ಕಾರ್ಯಕ್ರಮವು ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ರವರ ಉಪಸ್ಥಿತಿಯಲ್ಲಿ, ದಿವಂಗತ ಕೆ ಎಂ ಕೇಶವ ಆಳ್ವ ರವರ ಧರ್ಮಪತ್ನಿ ಆಳ್ವ ರವರು ದೀಪ ಪ್ರಜ್ವಲಿಸುವ ಮೂಲಕ ಕೊಠಡಿಯನ್ನು ಉದ್ಘಾಟಿಸಿದರು.

ಆಧುನಿಕ ಶಿಕ್ಷಣದಿಂದ ಸರಕಾರಿ ಶಾಲೆ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಡಾ. ಅಶ್ವಿನ್ ಆಳ್ವರ ಈ ಕೊಡುಗೆ ನಿಜಕ್ಕೂ ಶ್ಲಾಘನೀಯ, ಅದು ಕೂಡ ಕೊಠಡಿಯ ಪೂರ್ಣ ವೆಚ್ಚವನ್ನು ಒಬ್ಬರೇ ಬರಿಸಿದ್ದು ತನ್ನ ಊರಿನ ಸರಕಾರಿ ಶಾಲೆಯ ಮೇಲಿನ ಪ್ರೀತಿಯನ್ನು ಎತ್ತಿ ತೋರಿಸ್ತದೆ.

ಗ್ರಾಮದ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಈ ಸರಕಾರಿ ಶಾಲೆಗೆ ಕಳುಹಿಸಿ ಗುಣಮಟ್ಟದ ಶಿಕ್ಷಣವನ್ನು ಪಡೆಯುವಂತೆ ಕರೆ ನೀಡಿ. ಶಾಲಾ ಪರವಾಗಿ ಶಾಸಕರು ಶ್ರೀಮತಿ ಶ್ರೀಮತಿ ಕೇಶವ ಆಳ್ವ, ಅನೂಪ್ ಆಳ್ವ ,ಅನುಷಾ ಆಳ್ವ, ರವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಲ್ಲಿಕಾ ಗಣೇಶ್. ಉಪಾಧ್ಯಕ್ಷರಾದ ಪ್ರಸಾದ್ ಆಚಾರ್ಯ ಹಾಗೂ ಸದಸ್ಯರು, ಮಕ್ಕಳ ಪೋಷಕರು, ವಿದ್ಯಾರ್ಥಿಗಳು,ವಿದ್ಯಾ ಭಿಮಾನಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ಸ್ವಾಗತಿಸಿ, ಸಹ ಶಿಕ್ಷಕ ಉದಯಚಂದ್ರ ವಂದಿಸಿ,ಗೌರವ ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ನವದೆಹಲಿ: ಮೋದಿ–ಟ್ರಂಪ್ ದೂರವಾಣಿ ಮಾತುಕತೆ: ವ್ಯಾಪಾರ, ರಕ್ಷಣೆ, ಇಂಧನ ಸಹಕಾರದ ಕುರಿತು ಚರ್ಚೆ

ಮಂಗಳೂರು: ಮಂಗಳೂರು ರೈಲು ಪ್ರದೇಶ ಇಂದಿನಿಂದ ಮೈಸೂರು ವಿಭಾಗದ ಅಧೀನಕ್ಕೆ…!

ದುಬೈ: ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಘಟನೆ: ಸಹ ಪೈಲಟ್‌ನ ಯತ್ನ ತಡೆದ ಭಾರತೀಯ ಪೈಲಟ್…!

error: Content is protected !!