ಜನ ಮನದ ನಾಡಿ ಮಿಡಿತ

Advertisement

ಕಾರ್ಯಕ್ರಮದಲ್ಲಿ ತುಳುನಾಡ ದೈವಗಳ ವೇಷಹಾಕಿ ಅಶ್ಲೀಲ‌ ನೃತ್ಯ..!; ತುಳುನಾಡಿನ ದೈವ ಪಾತ್ರಿಗಳು ಮತ್ತು ದೈವಾರಾಧಕರ ಭಾರೀ ಆಕ್ರೋಶ

ತುಳುನಾಡಿನ ದೈವಗಳಿಗೆ‌ ಭಾರೀ ಅವಮಾನವಾಗುತ್ತಿದೆ. ಮನರಂಜನೆಗಾಗಿ ದೈವಾರಾಧನೆ ಬಳಕೆ ಮಾಡಲಾಗುತ್ತಿದೆ ಎಂದು ತುಳುನಾಡಿನ ದೈವ ಪಾತ್ರಿಗಳು ಮತ್ತು ದೈವಾರಾಧಕರು ಭಾರೀ ಆಕ್ರೋಶ ಹೊರಹಾಕಿದ್ದಾರೆ.

ತುಳುನಾಡಿನ ದೈವಗಳಂತೆ ವೇಷತೊಟ್ಟು ಅಪಮಾನ ಮಾಡಲಾಗುತ್ತಿದೆ. ಹಣ ಸಂಪಾದನೆಗೆ ದೈವಗಳ‌ ವೇಷ ತೊಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಇತರ ಭಾಗಗಳಲ್ಲಿ ದಂಧೆ ಶುರುವಾಗಿದೆ ಎಂದು ತುಳುನಾಡ ದೈವ‌ ಪಾತ್ರಿ ದಯಾನಂದ ಕತ್ತಲ್ಸಾರ್ ಆರೋಪಿಸಿದ್ದಾರೆ.

ಏನಿದು ಆರೋಪ?

ಮನರಂಜನೆಗಾಗಿ ತುಳುನಾಡಿನ ದೈವಾರಾಧನೆ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕಾರ್ಯಕ್ರಮದಲ್ಲಿ ತುಳುನಾಡ ದೈವಗಳ ವೇಷಹಾಕಿ ಅಶ್ಲೀಲ‌ ನೃತ್ಯ ಮಾಡಲಾಗುತ್ತಿದೆ. ಭೂತ ಬಿಡಿಸಲು ತುಳುನಾಡ ದೈವಗಳಂತೆ ವೇಷತೊಟ್ಟು ನರ್ತನ ಮಾಡಲಾಗುತ್ತಿದೆ. ಕೆಲವು ಕಿಡಿಗೇಡಿಗಳು ಹಣ ಸಂಪಾದನೆಗೆ ದೈವಗಳ‌ ವೇಷತೊಡುತ್ತಿದ್ದಾರೆ. ಇದರಿಂದ ಪಂಬದ, ಪರವ, ನಲಿಕೆ ಸಮುದಾಯದವರಿಗೆ ಅವಮಾನವಾಗುತ್ತಿದೆ ಎಂದು ದೈವ ಪಾತ್ರಿಗಳು ದಯಾನಂದ ಕತ್ತಲ್ಸಾರ್ ಹೇಳಿದ್ದಾರೆ.

ಇನ್ನು ದೈವಗಳಿಗೆ ಅವಮಾನಿಸುವವರ ವಿರುದ್ಧ ಅಟ್ರಾಸಿಟಿ ಕೇಸ್ ಹಾಕುವುದಾಗಿಯೂ ​ದಯಾನಂದ ಕತ್ತಲ್ಸಾರ್ ಎಚ್ಚರಿಕೆ ಹಾಕಿದ್ದಾರೆ. ಜೊತೆಗೆ ಅಪಚಾರದ ಬಗ್ಗೆ ಧ್ವನಿ ಎತ್ತುವಂತೆ ನಟ ರಿಷಭ್​ ಶೆಟ್ಟಿಗೆ ಒತ್ತಾಯ ಹೇರಿದ್ದಾರೆ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೂ ಆಗ್ರಹಿಸಿದ್ದಾರೆ. ಕ್ರಮಕೈಗೊಳ್ಳದಿದ್ದರೆ ದೈವಾರಾಧಕರಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ವರಿಕೆಯನ್ನು ರವಾನಿಸಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಬಸ್‌ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ಕೂಲಿ ಕಾರ್ಮಿಕನಿಗೆ ಕಾರು ಡಿಕ್ಕಿ; ಸ್ಥಳದಲ್ಲೇ ಸಾವು

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

error: Content is protected !!